ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಸಂಭವನೀಯ ನಡೆಗಳನ್ನು ಕಾದು ನೋಡುವ ತಂತ್ರದ ಭಾಗವಾಗಿ ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯನ್ನು ಸ್ಥಿರವಾಗಿ ಇರಿಸಿಕೊಂಡಿವೆ.
ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್ 83.71 ಮತ್ತು ಡೀಸೆಲ್ 73.87 ರೂ.ನಷ್ಟಿದೆ. ದೇಶದಾದ್ಯಂತ ಎರಡು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಬದಲಾಗದೆ ಉಳಿದಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 90.34 ರೂ. ಮತ್ತು ಡೀಸೆಲ್ 80.51 ರೂ., ಎರಡು ಇಂಧನಗಳು ಕ್ರಮವಾಗಿ ಚೆನ್ನೈನಲ್ಲಿ 86.51 ಮತ್ತು 79.31 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್‌ನ ಬೆಲೆ 85.19 ರೂ. ಮತ್ತು 77.44 ರೂ. ಇದೆ.
ಈ ಮೊದಲು ಸೆಪ್ಟೆಂಬರ್ 22ರಿಂದ ಪೆಟ್ರೋಲ್ ಬೆಲೆ ಸ್ಥಿರವಾಗಿತ್ತು. ಅಕ್ಟೋಬರ್ 2ರಿಂದ ಡೀಸೆಲ್ ದರಗಳು ಬದಲಾಗಿಲ್ಲ. ನವೆಂಬರ್ ತಿಂಗಳಲ್ಲಿ ಏರಿಕೆಯಾಗಲು ಪ್ರಾರಂಭಿಸಿ ಡಿಸೆಂಬರ್ 8ರಿಂದ ಮತ್ತೆ ವಿರಾಮಕ್ಕೆ ಮರಳಿತು.