ETV Bharat / technology

16 ಸೂರ್ಯೋದಯ, ಸೂರ್ಯಾಸ್ತ ವೀಕ್ಷಣೆಯೊಂದಿಗೆ ನ್ಯೂ ಇಯರ್​ ಸ್ವಾಗತಿಸಿದ ಸುನೀತಾ ವಿಲಿಯಮ್ಸ್! - 16 SUNRISES AND SUNSETS

ಬಾಹ್ಯಾಕಾಶದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರು ಇಂದು ಒಂದೇ ದಿನ ಬರೋಬ್ಬರಿ 16 ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಿಸಲಿದ್ದಾರೆ. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ((NASA ಮತ್ತು ISS))
author img

By ETV Bharat Karnataka Team

Published : Jan 1, 2025, 4:02 PM IST

Updated : Jan 1, 2025, 4:10 PM IST

ಹೈದರಾಬಾದ್​: 2025ರ ಹೊಸ ವರ್ಷವನ್ನು ಪ್ರಪಂಚದಾದ್ಯಂತ ಸಂಭ್ರಮದಿಂದ ಬರಮಾಡಿಕೊಳ್ಳಲಾಗಿದೆ. ಎಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆ ಮನೆ ಮಾಡಿದೆ. ಅದರಂತೆ ಬಾಹ್ಯಾಕಾಶದಲ್ಲೂ ನ್ಯೂ ಇಯರ್​ ಆಚರಣೆ ನಡೆದಿದೆ. ಹೌದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌)ದಲ್ಲಿರುವ ಗಗನಯಾತ್ರಿಗಳು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ಇದೇ ವೇಳೆ, ತಾಂತ್ರಿಕ ತೊಂದರೆಯಿಂದಾಗಿ ದೀರ್ಘಕಾಲದಿಂದಾಗಿ ಐಎಸ್‌ಎಸ್‌ನಲ್ಲೇ ಉಳಿದುಕೊಂಡಿರುವ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಮತ್ತು ಬುಚ್ ವಿಲ್ಮೋರ್ ಅವರು ಕೂಡ‌, 2025 ಅನ್ನು ಸಂತಸದಿಂದ ಬರಮಾಡಿಕೊಂಡಿದ್ದಾರೆ. ಇದೇ ವೇಳೆ ಅವರು ಒಂದೇ ದಿನ ಬರೋಬ್ಬರಿ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲಿರುವುದು ವಿಶೇಷ.

ಈ ಕುರಿತು ಐಎಸ್‌ಎಸ್‌ ಅಧಿಕೃತ 'ಎಕ್ಸ್‌' ಅಕೌಂಟ್‌ ಮೂಲಕ ಟ್ವೀಟ್‌ ಮಾಡಲಾಗಿದ್ದು, "ಎಕ್ಸ್‌ಪೆಡಿಶನ್ 72 ಸಿಬ್ಬಂದಿ ಬಾಹ್ಯಾಕಾಶದಲ್ಲಿ ಹೊಸ ವರ್ಷದಂದು 16 ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ನೋಡುತ್ತಾರೆ. ಐಎಸ್‌ಎಸ್‌ ಭೂಮಿಯನ್ನು ನಿರತಂತರವಾಗಿ ಪ್ರದಕ್ಷಿಣೆ ಹಾಕುವುದರಿಂದ, ಗಗನಯಾತ್ರಿಗಳು ಇದು ಸಾಧ್ಯವಾಗಲಿದೆ. ಐಎಸ್ಎಸ್ ದಿನದಲ್ಲಿ ಗಂಟೆಗೆ ಸರಾಸರಿ 28,000 ಕಿ.ಮೀ ವೇಗದಲ್ಲಿ 16 ಬಾರಿ ಭೂಮಿಯನ್ನು ಸುತ್ತುತ್ತದೆ. ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ​ ಭೂಮಿಯಿಂದ 400 ಕಿ.ಮೀ ದೂರದ ಬಾಹ್ಯಾಕಾಶದಲ್ಲಿದೆ. ಈ ಬಾಹ್ಯಾಕಾಶ ನಿಲ್ದಾಣವು ಭೂಮಿಯನ್ನು ಒಮ್ಮೆ ಸುತ್ತಲು 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ" ಎಂದು ತಿಳಿಸಿದೆ.

ಹಲವು ವರ್ಷಗಳಿಂದ ಭೂಕಕ್ಷೆಯಿಂದ ಕ್ಲಿಕ್ಕಿಸಲಾದ ವಿಭಿನ್ನ ಸೂರ್ಯೋದಯ ಮತ್ತು ಸೂರ್ಯಾಸ್ತದ ಚಿತ್ರಗಳನ್ನು ಸಹ ಐಎಸ್‌ಎಸ್‌ ಹಂಚಿಕೊಂಡಿದೆ.

ಎಕ್ಸ್‌ಪೆಡಿಶನ್ 72 ಸಿಬ್ಬಂದಿಗಳಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಜೊತೆಗೆ ಇವಾನ್ ವ್ಯಾಗ್ನರ್, ಡಾನ್ ಪೆಟಿಟ್, ಅಲೆಕ್ಸಾಂಡರ್ ಗೋರ್ಬುನೊವ್ ಮತ್ತು ನಿಕ್ ಹೇಗ್ ಅವರು ಸೇರಿದ್ದಾರೆ. ಸುನೀತಾ ವಿಲಿಯಮ್ಸ್‌ ಮತ್ತು ಬುಚ್ ವಿಲ್ಮೋರ್ ಜೂನ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿದ್ದಾರೆ.

ವಿಲಿಯಮ್ಸ್ ಮತ್ತು ವಿಲ್ಮೋರ್ ಅವರ ಫ್ಲೋರಿಡಾದ ಕೇಪ್ ಕೆನವೆರಾಲಿನಿಂದ ಬೋಯಿಂಗ್​ನ ಸ್ಟಾರ್ಲೈನರ್ ಕ್ಯಾಪ್ಸೂಲ್​ನಲ್ಲಿ ಐಎಸ್ಎಸ್​ಗೆ ಪ್ರಯಾಣ ಬೆಳಿಸಿದ್ದರು. ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿದ ಸ್ವಲ್ಪ ಸಮಯದ ನಂತರ, ಕ್ಯಾಪ್ಸೂಲ್​ನಲ್ಲಿ ತಾಂತ್ರಿಕ ಸಮಸ್ಯೆ ಉದ್ಭವಿಸಿದ್ದರಿಂದ ಅವರು ಮತ್ತೆ ಭೂಮಿಗೆ ಮರಳಲು ಸಾಧ್ಯವಾಗಲಿಲ್ಲ ಎಂದು ನಾಸಾ ತಿಳಿಸಿತ್ತು.

ಸುನೀತಾ ವಿಲಿಯಮ್ಸ್ ಮತ್ತು ತಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕ್ರಿಸ್ಮಸ್ ಆಚರಿಸುತ್ತಿರುವ ವಿಡಿಯೋವನ್ನು ನಾಸಾ ಇತ್ತೀಚೆಗೆ ಹಂಚಿಕೊಂಡಿತ್ತು.

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಅಥರ್​ ಎನರ್ಜಿ 450 ಸೀರಿಸ್​

Last Updated : Jan 1, 2025, 4:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.