Postpartum Depression: ಹಲವು ಮಹಿಳೆಯರು ಪ್ರಸವಾನಂತರದ ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಐದರಿಂದ ಆರು ತಿಂಗಳೊಳಗೆ ಕಡಿಮೆ ಆಗುತ್ತವೆ. ಕೆಲವು ಮಹಿಳೆಯರಲ್ಲಿ ತೊಂದರೆ ಒಂದು ವರ್ಷಗಳವರೆಗೆ ಇರುತ್ತದೆ. ಪ್ರಸವದ ನಂತರದ ಖಿನ್ನತೆಗೆ ಕಾರಣವೇನು? ಇದರಿಂದ ಹೊರಗೆ ಬರುವುದು ಹೇಗೆ? ತಜ್ಞರು ತಿಳಿಸಿರುವ ಸಲಹೆಗಳು ಹೀಗೆ ನೋಡಿ.
ವೈದ್ಯರ ಮಾತು: ಹೆರಿಗೆ ಸಮಯದಲ್ಲಿ ಹಾಗೂ ನಂತರ ತಾಯಿಯ ದೇಹವು ತೀವ್ರ ಒತ್ತಡಕ್ಕೆ ಒಳಗಾಗುತ್ತದೆ. ವಿಶೇಷವಾಗಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎನ್ನವು ಹಾರ್ಮೋನುಗಳು ಕಡಿಮೆಯಾಗುತ್ತವೆ. ಇದಲ್ಲದೇ ಹೆರಿಗೆ ನೋವು, ಸರಿಯಾಗಿ ನಿದ್ದೆ ಮಾಡದೇ ಇರುವುದು, ಸರಿಯಾಗಿ ಊಟ ಮಾಡದೇ ಇರುವುದು, ಮಗುವಿಗೆ ಹಾಲುಣಿಸುವುದು, ಮತ್ತೊಂದೆಡೆ ಮನೆಗೆ ಬಂದು ಹೋಗುವವರು, ಇವೆಲ್ಲವೂ ತಾಯಿಯ ಭಾವನೆಗಳು ಹಾಗೂ ಮಾನಸಿಕ ಮನೋಭಾವದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಮನೋವೈದ್ಯರಾದ ಡಾ.ಅನಿತಾ ತಿಳಿಸುತ್ತಾರೆ.
ಕೆಲವು ಮಹಿಳೆಯರು ಸಿಡುಕು, ಕೋಪ, ಅಳು, ನಿದ್ದೆಯಿಲ್ಲದಿರುವುದು ಹಾಗೂ ಒಂದು ಕ್ಷಣದಲ್ಲಿ ಕೋಪಗೊಳುವುದು ಹಾಗೂ ಇನ್ನೊಂದು ಕ್ಷಣದಲ್ಲಿ ಸಂತೋಷದಂತಹ ಮೂಡ್ ಸ್ವಿಂಗ್‌ಗಳನ್ನು ತೋರಿಸುತ್ತಾರೆ. ಇವುಗಳನ್ನು ಪ್ರಸವದ ನಂತರದ/ ಬೇಬಿ ಬ್ಲೂಸ್ ಎಂದು ಕರೆಯಲಾಗುತ್ತದೆ. ಇವೆಲ್ಲವು ಕೇವಲ ಸಮಸ್ಯೆಗಳಲ್ಲ. ಕೆಲವೇ ದಿನಗಳಲ್ಲಿ ಅವು ತಾನಾಗಿಯೇ ಕಡಿಮೆಯಾಗುತ್ತವೆ. ಕೆಲವರು ಖಿನ್ನತೆಯಿಂದ ಬಳಲುತ್ತಾರೆ. ಇವರಿಗೆ ದುಃಖ ಹಾಗೂ ಖಿನ್ನತೆ ಅನುಭವಿಸುತ್ತಾರೆ. ಹೆರಿಗೆಯಾದ ನಂತರ ಆತಂಕ ಉಲ್ಬಣಗೊಂಡು ಖಿನ್ನತೆಗೆ ಕಾರಣ ಆಗುತ್ತದೆ. ಇದು ಪ್ರಸವದ ನಂತರದ ಖಿನ್ನತೆಯಾಗಿದೆ ಎಂದು ಡಾ.ಅನಿತಾ ಹೇಳುತ್ತಾರೆ.
ನಿರ್ಲಕ್ಷ್ಯ ಮಾಡಿದರೆ ತಾಯಿ- ಮಗುವಿನ ಮೇಲೆ ಪರಿಣಾಮ: ಕೆಲವರು ಜೀವನದಿಂದ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಜೊತೆಗೆ ಏಕಾಂಗಿಯಾಗಿರಲು ಬಯಸುತ್ತಾರೆ, ಯಾರಾದರೂ ಎಷ್ಟೇ ಸಂತೋಷಪಡಿಸಿದರೂ ಅವರದೇಯಾದ ಮಾರ್ಗದಲ್ಲಿ ಉಳಿಯುತ್ತಾರೆ. ಅವರು ಹಾಗೂ ಮಗು ಏಕೆ ಬದುಕಬೇಕು ಎಂದು ನಕಾರಾತ್ಮಕವಾಗಿ ಯೋಚನೆ ಮಾಡುತ್ತಾರೆ. ಮುಖ್ಯವಾಗಿ ಕೆಲವು ತೊಂದರೆಗಳ ಹೊರತಾಗಿಯೂ, ಹೆಚ್ಚಿನ ತಾಯಂದಿರು ಸಾಕಷ್ಟು ಸಂತೋಷವಾಗಿರುತ್ತಾರೆ. ಖಿನ್ನತೆಗೆ ಒಳಗಾದವರಿಗೆ ಸಂತೋಷವಾಗಿರುವುದಿಲ್ಲ. ತಮ್ಮನ್ನು ತಾವು ದೂಷಿಸಿಕೊಳ್ಳುತ್ತಾರೆ ಎಂದು ಮನೋವೈದ್ಯೆ ಡಾ.ಅನಿತಾ ವಿವರಿಸುತ್ತಾರೆ.
ಮಾನಸಿಕ ಅಸ್ವಸ್ಥತೆ: ಈ ರೀತಿಯಾಗಿ ಅವರ ಮನಸ್ಥಿತಿ ಹದಗೆಟ್ಟರೆ ಮಾನಸಿಕ ಅಸ್ವಸ್ಥತೆಗೆ (ಸೈಕೋಸಿಸ್) ಕಾರಣವಾಗುತ್ತದೆ. ಯಾರೋ ತನ್ನನ್ನು ಕರೆಯುತ್ತಿದ್ದಾರೆ. ಯಾರೋ ನನ್ನ ಜೊತೆಗೆ ಮಾತನಾಡುತ್ತಿದ್ದಾರೆ. ಯಾರೋ ತಮ್ಮನ್ನು ನೋಡುತ್ತಿದ್ದಾರೆ ಹಾಗೂ ಯಾರೂ ಕೂಡ ನನ್ನನ್ನು ಇಷ್ಟಪಡುವುದಿಲ್ಲ ಎಂಬ ಹಲವು ಭ್ರಮೆಗಳು ಅವರು ಬಳಲುತ್ತಾರೆ. ಇದಲ್ಲದೇ, ಖಿನ್ನತೆ ಉಲ್ಬಣಗೊಂಡರೆ, ಆತ್ಮಹತ್ಯೆಯ ಅಪಾಯವೂ ಕೂಡ ಇದೆ. ಅವರು ಮಗುವಿಗೆ ಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಯಾರಾದರೂ ತಾಯಿ ಮತ್ತು ಮಗುವನ್ನು ಚೇತರಿಸಿಕೊಳ್ಳುವವರೆಗೆ ನಿರಂತರವಾಗಿ ಅವರ ಬಗ್ಗೆ ಕಾಳಜಿವಹಿಸಿ ನೋಡಿಕೊಳ್ಳಬೇಕಾಗುತ್ತದೆ ಎಂದು ವೈದ್ಯರು ಸೂಚಿಸುತ್ತಾರೆ.
ಮುನ್ನೆಚ್ಚರಿಕೆ ಕ್ರಮ ವಹಿಸಲು ವೈದ್ಯರ ಸಲಹೆ: ಹೆರಿಗೆಯ ನಂತರ ಈ ರೀತಿಯ ಲಕ್ಷಣಗಳನ್ನು ಕಂಡುಬಂದರೆ, ನೀವು ಮನೋವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ರೋಗವನ್ನು ಪತ್ತೆಹಚ್ಚಿ ಹಾಗೂ ಅದಕ್ಕೆ ಅನುಗುಣವಾಗಿ ಚಿಕಿತ್ಸೆ ಕೊಡಬೇಕಾಗುತ್ತದೆ. ಆ್ಯಂಟಿ ಡಿಪ್ರೆಸೆಂಟ್ಸ್ ಮತ್ತು ಆ್ಯಂಟಿ ಸೈಕೋಟಿಕ್ ಡ್ರಗ್ಸ್ ಅನ್ನು ಅಗತ್ಯವಿದರೆ ವೈದ್ಯರು ನೀಡುತ್ತಾರೆ. ಜೊತೆಗೆ ಆಪ್ತಸಮಾಲೋಚನೆಯಿಂದ ಕೆಲವೊಮ್ಮೆ ಉಪಶಮನ ದೊರೆಯುತ್ತದೆ ಎಂದು ಮನೋವೈದ್ಯೆ ಡಾ.ಅನಿತಾ ಸಲಹೆ ನೀಡುತ್ತಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಸದಸ್ಯರ ಗುಂಪು ನಡೆಸಿದ ಸಂಶೋಧನೆಯಲ್ಲಿ ಆದಷ್ಟು ಬೇಗ ಚಿಕಿತ್ಸೆಯನ್ನು ಒದಗಿಸಿದರೆ ಹಾಗೂ ಸರಿಯಾದ ಕಾಳಜಿವಹಿಸಿದರೆ ಪ್ರಸವದ ನಂತರ ಖಿನ್ನತೆ ಸಮಸ್ಯೆಯನ್ನು ಪರಿಹರಿಸಬಹುದು ಎಂಬುದು ತಿಳಿದುಬಂದಿದೆ. ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ವೀಕ್ಷಿಸಬಹುದು:
https://www.ncbi.nlm.nih.gov/books/NBK519070/
ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.