ETV Bharat / state

ಬಯಲುಸೀಮೆಯಲ್ಲಿ ಕಾಡುಕೋಣ: ಅರಣ್ಯಾಧಿಕಾರಿಗಳಿಗೂ ಅಚ್ಚರಿ - BISON FOUND IN GANGAVATHI

ಕಾಡುಕೋಣ ತಪ್ಪಿಸಿಕೊಂಡು ಹೋಗದಂತೆ ನಾಕಾಬಂಧಿ ಹಾಕಿ ಸುರಕ್ಷಿತವಾಗಿ ರಕ್ಷಿಸಿದ ಅರಣ್ಯಾಧಿಕಾರಿಗಳು, ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಿಟ್ಟಿದ್ದಾರೆ.

Bison found in the Gangavathi Plains
ಬಯಲುಸೀಮೆಯಲ್ಲಿ ಕಾಡುಕೋಣ ಪತ್ತೆ (ETV Bharat)
author img

By ETV Bharat Karnataka Team

Published : Feb 7, 2025, 8:17 PM IST

ಗಂಗಾವತಿ: ದಟ್ಟಕಾಡು, ಮಳೆಕಾಡು, ಮಲೆನಾಡಿನಂತಹ ಗಿರಿಪ್ರದೇಶದಲ್ಲಿ ಕಾಣಸಿಗುವ ಕಾಡುಕೋಣ, ಬಯಲುಸೀಮೆಯಂತಹ ಪ್ರದೇಶದಲ್ಲಿ ಕಂಡುಬರುವುದು ವಿರಳಾತಿವಿರಳ. ಆದರೀಗ ಕಾಡುಕೋಣವೊಂದು ಬಯಲುಸೀಮೆ ಪ್ರದೇಶವಾದ ಕನಕಗಿರಿ ತಾಲ್ಲೂಕಿನ ಕರಡೋಣಿ ಗ್ರಾಮದಲ್ಲಿ ಪತ್ತೆಯಾಗಿದೆ. ಈ ಬೆಳವಣಿಗೆ ಸ್ವತಃ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲೂ ಅಚ್ಚರಿಗೆ ಕಾರಣವಾಗಿದೆ.

ಕನಕಗಿರಿ ತಾಲ್ಲೂಕಿನ ಕರಡೋಣಿ ಗ್ರಾಮದ ರೈತರೊಬ್ಬರ ಹೊಲದಲ್ಲಿ ಮೊದಲಿಗೆ ಕಾಣಿಸಿಕೊಂಡ ಕಾಡುಕೋಣ ಬಳಿಕ ಅಲ್ಲಿಂದ ಕಣ್ಮರೆಯಾಗಿದೆ. ಸ್ಥಳೀಯ ಯುವಕರು ತಮ್ಮ ಮೊಬೈಲ್​ಳಲ್ಲಿ ಇದರ ಫೋಟೋ ಮತ್ತು ವಿಡಿಯೋ ಮಾಡಿಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಬಯಲುಸೀಮೆಯಲ್ಲಿ ಕಾಡುಕೋಣ ಪತ್ತೆ (ETV Bharat)

ಬಳಿಕ ಗುರುವಾರ ರಾತ್ರಿಯೇ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಕಾಡುಕೋಣದ ಜಾಡು ಪತ್ತೆಹಚ್ಚಿ ಸುಮಾರು ನೂರು ಮೀಟರ್ ಅಂತರದಲ್ಲಿಯೇ ಕೋಣಕ್ಕೆ ನಾಕಾಬಂಧಿ ಹಾಕಿ ತಪ್ಪಿಸಿಕೊಂಡು ಹೋಗದಂತೆ ಎಚ್ಚರ ವಹಿಸಿದ್ದಾರೆ. ಶುಕ್ರವಾರ ಬೆಳಗ್ಗೆ ವಿಶೇಷ ತಂಡವನ್ನು ಕರೆತಂದು ಕಾಡುಕೋಣವನ್ನು ಸೆರೆ ಹಿಡಿದು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅದನ್ನು ಹಂಪಿ ಸಮೀಪದ ಕಮಲಾಪುರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಿಟ್ಟು ಬಂದಿದ್ದಾರೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎಚ್.ಮುಲ್ಲಾ, ಗಂಗಾವತಿ ವಲಯ ಪ್ರದೇಶ ಅರಣ್ಯ ಸಂರಕ್ಷಣಾಧಿಕಾರಿ ಸುಭಾಶ್ಚಂದ್ರ ನಾಯಕ್ ಸೇರಿದಂತೆ 20ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು.

ಬಯಲುಸೀಮೆಯಲ್ಲಿ ಅತ್ಯಪರೂಪ: ಈ ಬಗ್ಗೆ ಪ್ರತಿಕ್ರಿಯಿಸಿರುವ ಗಂಗಾವತಿ ವಲಯ ಪ್ರದೇಶ ಅರಣ್ಯ ಸಂರಕ್ಷಣಾಧಿಕಾರಿ ಸುಭಾಶ್ಚಂದ್ರ ನಾಯಕ್, "ಬಯಲು ಸೀಮೆಯಲ್ಲಿ ಕಾಡುಕೋಣಗಳು ಪತ್ತೆಯಾಗುವುದು ಅತಿ ವಿರಳ. ನನ್ನ 18 ವರ್ಷದ ಸೇವೆಯಲ್ಲಿ ಎಲ್ಲಿಯೂ ಬಯಲು ಸೀಮೆಯಲ್ಲಿ ಕಾಡುಕೋಣ ಕಂಡಿಲ್ಲ. ಬಯಲು ಸೀಮೆಯ ಪ್ರದೇಶದಲ್ಲಿ ಬಹುತೇಕ ಕುರುಚಲು ಕಾಡಿದ್ದು ಅಲ್ಲಿ ಇಂತಹ ಅಪರೂಪದ ಪ್ರಾಣಿಗಳು ವಾಸಿಸಲು ಸಾಧ್ಯವಿಲ್ಲ. ಆದರೆ ಮಲೆನಾಡು, ದಟ್ಟ ಅರಣ್ಯ, ಮಳೆಕಾಡು ಪ್ರದೇಶದಲ್ಲಿ ಮಾತ್ರ ಇಂತಹ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಆದರೆ ನಮ್ಮ ಸುತ್ತಲೂ ಎಲ್ಲಿಯೂ ದಟ್ಟ ಅರಣ್ಯ ಇಲ್ಲ. ಆದರೆ ಈ ಕಾಡುಕೋಣ ಹೇಗೆ, ಎಲ್ಲಿಂದ ಬಂದಿದೆ ಎಂಬುವುದು ನಮಗೆ ತೋಚುತ್ತಿಲ್ಲ. ಅದೊಂದು ಅತ್ಯಂತ ಅಪರೂಪದ ಘಟನೆ" ಎಂದು ತಿಳಿಸಿದರು.

ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ ಮುಕ್ತಾಯ - 253 ಪ್ರಭೇದ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.