ಬಾಲಿವುಡ್ ನಟಿ ಮಮತಾ ಕುಲಕರ್ಣಿ ಇತ್ತೀಚೆಗೆ ಸನ್ಯಾಸತ್ವ ಸ್ವೀಕರಿಸಿದ್ದರು. ನಟಿಗೆ ಕಿನ್ನರ್ ಅಖಾಡದಲ್ಲಿ (Kinnar Akhara) ಸನ್ಯಾಸ ದೀಕ್ಷೆ ನೀಡಲಾಗಿತ್ತು. ಆದ್ರೀಗ ಕಿನ್ನರ ಅಖಾಡವು ಕ್ರಮವೊಂದನ್ನು ಕೈಗೊಂಡಿದೆ. ಇತ್ತೀಚೆಗೆ ಮಹಾಮಂಡಲೇಶ್ವರರಾಗಿದ್ದ ಮಮತಾ ಕುಲಕರ್ಣಿ ಅವರನ್ನು ಈ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ. ಅವರೊಂದಿಗೆ, ಲಕ್ಷ್ಮಿ ನಾರಾಯಣ್ ತ್ರಿಪಾಠಿ ಅವರನ್ನು ಸಹ ಆಚಾರ್ಯ ಮಹಾಮಂಡಲೇಶ್ವರ ಮತ್ತು ಅಖಾಡ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ. ಕಿನ್ನರ ಅಖಾಡದ ಸಂಸ್ಥಾಪಕ ರಿಷಿ ಅಜಯ್ ದಾಸ್ ಅವರು ಅಖಾಡವನ್ನು ಪುನರ್ ರಚಿಸಲು ಮುಂದಾಗಿದ್ದಾರೆ.
ನಿಯಮಗಳ ಉಲ್ಲಂಘನೆ ಆರೋಪ: ಕಿನ್ನರ ಅಖಾಡದ ಸಂಸ್ಥಾಪಕ ಅಜಯ್ ದಾಸ್ ಈ ಕ್ರಮ ಕೈಗೊಂಡು, ಲಕ್ಷ್ಮಿ ನಾರಾಯಣ್ ತ್ರಿಪಾಠಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಶುಕ್ರವಾರ, ಅಜಯ್ ದಾಸ್ ಅಖಾಡವನ್ನು ಮರುಸಂಘಟಿಸುವ ಯೋಜನೆಯನ್ನು ಘೋಷಿಸಿದರು. ಶೀಘ್ರದಲ್ಲೇ ಹೊಸ ಆಚಾರ್ಯ ಮಹಾಮಂಡಲೇಶ್ವರರನ್ನು ನೇಮಿಸಲಾಗುವುದು ಎಂದು ತಿಳಿಸಿದ್ದಾರೆ.
Rishi Ajay Das, founder of Kinnar Akhara, expels Mamta Kulkarni from the Akhara. He has also expelled Mahamandaleshwar Laxminarayan Tripathi from the Kinnar Akhara for inducting Mamta Kulkarni, who is accused of treason, to the Akhara and designating her as Mahamandaleshwar… pic.twitter.com/Hhzezst49r
— ANI (@ANI) January 31, 2025
ಮಹಾಮಂಡಲೇಶ್ವರ ಹುದ್ದೆ ನೀಡುವ ಬಗ್ಗೆ ಎದ್ದಿರುವ ಪ್ರಶ್ನೆಗಳು: ಈ ತಿಂಗಳ ಆರಂಭದಲ್ಲಿ, ಮಮತಾ ಕುಲಕರ್ಣಿ ಅವರು ಪ್ರಯಾಗ್‌ರಾಜ್‌ನ ಸಂಗಮ್ ಘಾಟ್‌ನಲ್ಲಿ ಪಿಂಡದಾನ ಮಾಡಿದ್ದರು. ಇದಾದ ನಂತರ, ಲಕ್ಷ್ಮಿ ನಾರಾಯಣ್ ತ್ರಿಪಾಠಿ ಅವರು ಕುಲಕರ್ಣಿ ಅವರನ್ನು ಮಹಾಮಂಡಲೇಶ್ವರ ಹುದ್ದೆಗೆ ನೇಮಿಸಿದರು. ಅವರ ನಿರ್ಧಾರ ಅನೇಕರಿಗೆ ಹಿಡಿಸಲಿಲ್ಲ. ಈ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ರು.
ಇದನ್ನೂ ಓದಿ: ನಟ ಸೈಫ್ ಚಾಕು ಇರಿತ: ಆರೋಪಿ ಮುಖ - ಸಿಸಿಟಿವಿ ದೃಶ್ಯ ಮ್ಯಾಚ್
ಕಿನ್ನರ ಅಖಾಡದ ಮಹಾಮಂಡಲೇಶ್ವರ ಹುದ್ದೆಗೆ ಮಮತಾ ಕುಲಕರ್ಣಿ ಅವರ ನೇಮಕದ ಬಗ್ಗೆ ಟ್ರಾನ್ಸ್‌ಜೆಂಡರ್ ಜಗತ್ಗುರು ಹಿಮಂಗಿ ಸಖಿ ಮಾ ಅಸಮಧಾನ ವ್ಯಕ್ತಪಡಿಸಿದ್ದರು. ಕುಲಕರ್ಣಿಯವರ ಹಿಂದಿನ ವಿವಾದಗಳನ್ನು ಎತ್ತಿ ತೋರಿಸಿ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಕಿನ್ನರ ಅಖಾಡವು ಪ್ರಚಾರಕ್ಕಾಗಿ ಮಮತಾ ಕುಲಕರ್ಣಿ ಅವರನ್ನು ಮಹಾಮಂಡಲೇಶ್ವರರನ್ನಾಗಿ ಮಾಡಿದೆ. ಅವರ ಹಿಂದಿನ ವಿಚಾರಗಳು ಎಲ್ಲರಿಗೂ ತಿಳಿದಿದೆ. ಇದ್ದಕ್ಕಿದ್ದಂತೆ ಭಾರತಕ್ಕೆ ಬಂದು, ಮಹಾಕುಂಭದಲ್ಲಿ ಭಾಗವಹಿಸಿ, ಮಹಾಮಂಡಲೇಶ್ವರ ಸ್ಥಾನವನ್ನು ಪಡೆಯುತ್ತಾರೆ. ಈ ಬಗ್ಗೆ ತನಿಖೆ ಮಾಡಬೇಕು ಎಂದಿದ್ದರು.
ಮಹಾಮಂಡಲೇಶ್ವರ ಹುದ್ದೆಯಿಂದ ವಜಾ - ಪ್ರಮುಖ ಕಾರಣಗಳು
1. ಸನ್ಯಾಸಿಯಾಗುವ ಮೊದಲೇ ಮಹಾಮಂಡಲೇಶ್ವರ ಎಂಬ ಬಿರುದನ್ನು ನೀಡಿದ್ದಕ್ಕಾಗಿ ವಿವಾದವಿತ್ತು.
2. 90ರ ದಶಕದಲ್ಲಿ ಬೋಲ್ಡ್ ಆಗಿ ನಟಿಸಿದ್ದರು.
3. ಮಮತಾ ಕುಲಕರ್ಣಿ ಅವರ ಹೆಸರು ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿದೆ ಎಂಬ ಆರೋಪವಿದೆ.
4. ಮುಂಡನ ಸಂಸ್ಕಾರವಿಲ್ಲದೇ ಮಹಾಮಂಡಲೇಶ್ವರರಾಗಿರುವುದು.
5. ಕಿನ್ನರ ಅಖಾಡದ ನಿಯಮಗಳ ಪ್ರಕಾರ ವೈಜಂತಿ ಮಾಲೆಯನ್ನು ಧರಿಸದಿರುವುದು.
ಇದನ್ನೂ ಓದಿ: ರಾಜಮೌಳಿ - ಮಹೇಶ್ ಬಾಬು ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾಗೆ ದಾಖಲೆಯ ಸಂಭಾವನೆ: ನಟಿಯರ ಪೈಕಿ ನಂ.1