ETV Bharat / bharat

10 ದಿನಗಳ ಸತತ ಕಾರ್ಯಾಚರಣೆ ಮಾಡಿ ಮೇಲಕ್ಕೆತ್ತಿದರೂ ಬದುಕುಳಿಯಲಿಲ್ಲ ಚೇತನಾ: ಬಾಲಕಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ ವೈದ್ಯರು - CHETANA DIED

ಬೋರ್‌ವೆಲ್‌ಗೆ ಬಿದ್ದಿದ್ದ ಮೂರು ವರ್ಷದ ಬಾಲಕಿ ಚೇತನಾಳನ್ನು ಎನ್‌ಡಿಆರ್‌ಎಫ್ 10ನೇ ದಿನ ಸಾಕಷ್ಟು ಪ್ರಯತ್ನದ ನಂತರ ಬೋರ್​ವೆಲ್​​ನಿಂದ ಹೊರ ತಂದಿದೆ. ಆದರೆ ಬಾಲಕಿಯನ್ನು ಜೀವಂತವಾಗಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.

the-ndrf-has-rescued-3-year-old-chetna-who-had-
10 ದಿನಗಳ ಬಳಿಕ ಬೋರ್​​ವೆಲ್​​ನಿಂದ ಚೇತನಾ ಮೇಲೆಕ್ಕೆತ್ತಿದ ರಕ್ಷಣಾ ಪಡೆ: ಬಾಲಕಿ ಆಸ್ಪತ್ರೆಗೆ ರವಾನೆ (ETV Bharat)
author img

By ETV Bharat Karnataka Team

Published : Jan 1, 2025, 7:30 PM IST

ಕೊಟ್‌ಪುಟ್ಲಿ-ಬೆಹರೋಡ್, ರಾಜಸ್ಥಾನ: ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಬಾಲಕಿ ಚೇತನಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. 150 ಅಡಿ ಆಳದಲ್ಲಿ ಸಿಲುಕಿದ್ದ ಚೇತನಾಳನ್ನು 10 ದಿನಗಳ ಸತತ ಕಾರ್ಯಾಚರಣೆ ಬಳಿಕ ಬೋರ್​ ವೆಲ್ ನಿಂದ ಮೇಲಕ್ಕೆ ತರಲಾಗಿತ್ತು. ಆದರೆ, ಮೂರು ವರ್ಷದ ಬಾಲಕಿಯನ್ನು ಜೀವಂತವಾಗಿ ಉಳಿಸಿಕೊಳ್ಳುವಲ್ಲಿ ರಕ್ಷಣಾ ಪಡೆಗಳು ಸಫಲವಾಗಲಿಲ್ಲ.

ಬುಧವಾರ ಸಂಜೆ ಬಾಲಕಿಯನ್ನು ಬೋರ್‌ವೆಲ್‌ನಿಂದ ಹೊರತೆಗೆದ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಅವಳು ಸಾವನ್ನಪ್ಪಿದ್ದಾಳೆ ಎಂದು ಘೋಷಣೆ ಮಾಡಿದರು.

ಚೇತನಾ ಅವರ ಸಾವನ್ನು ಖಚಿತಪಡಿಸಿರುವ ಪಿಎಂಒ ಡಾ.ಚೈತನ್ಯ ರಾವತ್, ಮರಣೋತ್ತರ ಪರೀಕ್ಷೆಯ ನಂತರವೇ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ. ಸದ್ಯ ಚೇತನಾಳ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಇಂದು ರಾತ್ರಿಯೇ ಆಕೆಯ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮೂವರು ಹಿರಿಯ ವೈದ್ಯರ ಮಂಡಳಿಯು ಈ ಮರಣೋತ್ತರ ಪರೀಕ್ಷೆಯ ಮೇಲ್ವಿಚಾರಣೆ ನಡೆಸಲಿದೆ. ಡಿಸೆಂಬರ್ 23 ರಂದು, ಮೂರು ವರ್ಷದ ಚೇತನಾ ಆಟವಾಡುವಾಗ ಜಾರಿಬಿದ್ದು 150 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದಳು. ಬಾಲಕಿ ಬೋರ್‌ವೆಲ್‌ಗೆ ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಕಾರ್ಯಾಚರಣೆ ಬಗ್ಗೆ ಡಿಸಿ ಹೇಳಿದ್ದಿಷ್ಟು: ಇದಕ್ಕೂ ಮುನ್ನೆ ಮಾತನಾಡಿದ್ದ ಜಿಲ್ಲಾಧಿಕಾರಿ ಕಲ್ಪನಾ ಅಗರ್ವಾಲ್, ಕಳೆದ ಹತ್ತು ದಿನಗಳಿಂದ ಚೇತನಾಳನ್ನು ಮೇಲೆ ತರಲು ನಿರಂತರ ಕಾರ್ಯಾಚರಣೆ ಕೈಗೊಂಡಿದ್ದೆವು. ಆದರೆ, ಕಾರ್ಯಾಚರಣೆ ಹಂತದಲ್ಲಿ ಕಲ್ಲುಗಳು ಅಡ್ಡಿಯಾಗಿದ್ದರಿಂದ ತುಸು ವಿಳಂಬವಾಗಿತ್ತು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯ ನಂತರವೇ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬರಲಿದೆ ಎಂದು ಅವರು ಹೇಳಿದ್ದರು. ಇದೀಗ ಈ ಬಗ್ಗೆ ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದಾರೆ.

ಐದು ಬಾರಿ ವಿಫಲ ಯತ್ನ: ಬುಧವಾರ ಸುಮಾರು 170 ಅಡಿ ಆಳದಲ್ಲಿ ಸುರಂಗ ಕೊರೆಯುತ್ತಿದ್ದ ತಂಡಗಳು ಚೇತನಾ ಇರುವ ಸ್ಥಳವನ್ನು ಪತ್ತೆ ಹಚ್ಚಿದ್ದವು. ಬಳಿಕ ಅವರನ್ನು ಹೊರತರಲು ಕೊನೆಯ ಸುತ್ತಿನ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು. ಆಂಬ್ಯುಲೆನ್ಸ್ ಮತ್ತು ಪೊಲೀಸ್ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಇದಕ್ಕೂ ಮುನ್ನ ಚೇತನಾಳನ್ನು ಬೋರ್‌ವೆಲ್‌ನಿಂದ ಹೊರತರಲು 5ಕ್ಕೂ ಹೆಚ್ಚು ಬಾರಿ ನಡೆಸಿದ ಪ್ರಯತ್ನ ವಿಫಲವಾಗಿತ್ತು. ಇದರಲ್ಲಿ ಸ್ವದೇಶಿ ನಿರ್ಮಿತ ಜುಗಾಡ್ ಬಳಸಿ ನಾಲ್ಕು ಬಾರಿ ಪ್ರಯತ್ನ ಮಾಡಲಾಗಿತ್ತು.

ಇದನ್ನು ಓದಿ:6ನೇ ದಿನಕ್ಕೆ ಕಾಲಿಟ್ಟ ಬೋರ್​ವೆಲ್​ಗೆ ಬಿದ್ದ ಬಾಲಕಿ ರಕ್ಷಣಾ ಕಾರ್ಯಾಚರಣೆ: ಜಿಲ್ಲಾಡಳಿತದ ವಿರುದ್ಧ ತಾಯಿ ಆಕ್ರೋಶ

ಬೋರ್​​​​​ವೆಲ್​​​ ಗೆ ಬಿದ್ದ ಬಾಲಕಿ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.