Smartphones Set To Be Released 2025:ಸ್ಮಾರ್ಟ್ಫೋನ್ ರಫ್ತು ವಿಷಯದಲ್ಲಿ ಭಾರತ ದಾಖಲೆ ಬರೆದಿರುವುದು ಗೊತ್ತಿರುವ ಸಂಗತಿ. ಹಾಗಂತ ದೇಶದಲ್ಲಿ ಸ್ಮಾರ್ಟ್ಫೋನ್ಗಳ ಹಾವಳಿ ಕಡಿಮೆ ಆಗಿದೆ ಅಂತಲ್ಲ. ದೇಶಿಯ ಮಾರುಕಟ್ಟೆಯಲ್ಲಿಯೂ ಸ್ಮಾರ್ಟ್‌ಫೋನ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಫೋನ್ ತಯಾರಿಕಾ ಕಂಪನಿಗಳು ಗ್ರಾಹಕರ ಅಭಿರುಚಿಗೆ ಮತ್ತು ಕಾಲಕ್ಕೆ ತಕ್ಕಂತ ಫೋನ್‌ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ, ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸ್ಪರ್ಧೆಯು ಕಠಿಣವಾಗುತ್ತಿರುವುದು ತಿಳಿದ ವಿಷಯ. ಆಗೊಮ್ಮೆ.. ಈಗೊಮ್ಮೆ. ಕಂಪನಿಗಳು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಹೀಗೆ ತಮ್ಮ ಪೋರ್ಟ್ ಫೋಲಿಯೊ ವಿಸ್ತರಿಸುತ್ತವೆ. ಆದರೆ ಇವುಗಳಲ್ಲಿ ಕೆಲವು ಫೋನ್‌ಗಳು ಮಾತ್ರ ಗ್ರಾಹಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆಯುತ್ತವೆ. ಈ ವರ್ಷವೂ ಇಂತಹ ಹಲವು ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದ್ದು, ಹೊಸ ವರ್ಷದಲ್ಲೂ ಹಲವು ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ. ಬನ್ನಿ, ಎಲ್ಲರ ಕಣ್ಣು ನೆಟ್ಟಿರುವ ಆ ಫೋನ್‌ಗಳ ಬಗ್ಗೆ ತಿಳಿದುಕೊಳ್ಳೋಣ.
ಸ್ಯಾಮ್ಸಂಗ್ ಗ್ಯಾಲೆಕ್ಸಿ ಎಸ್25 ಲೈನ್ಅಪ್:Samsung Galaxy S25 ಸೀರಿಸ್ ಅಡಿ 3 ಹೊಸ ಸ್ಮಾರ್ಟ್‌ಫೋನ್‌ಗಳನ್ನು ಜನವರಿ 2025 ರಲ್ಲಿ ಬಿಡುಗಡೆ ಮಾಡಲಿದೆ. ಈ ಮೂರು ಫೋನ್‌ಗಳು Galaxy S25, Samsung Galaxy S25 Plus ಮತ್ತು Samsung Galaxy Ultra ಆಗಿವೆ. Qualcomm ನ Snapdragon 8 Elite ಚಿಪ್‌ಸೆಟ್ ಈ ಸೀರಿಸ್ನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಎಲ್ಲ ಮೂರು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತವೆ. S24 ಸರಣಿಗೆ ಹೋಲಿಸಿದರೆ, S25 ಸೀರಿಸ್ ಉತ್ತಮ ಕ್ಯಾಮೆರಾ ಹೊಂದಿರುತ್ತದೆ. 5G ಸಂಪರ್ಕದೊಂದಿಗೆ, ಎಲ್ಲಾ ಮೂರು ಫೋನ್‌ಗಳು ಸ್ಪೀಡ್ ಚಾರ್ಜಿಂಗ್ ಸಪೋರ್ಟ್ ಹೊಂದಿರುತ್ತದೆ.
ಒನ್ಪ್ಲಸ್ 13:ಸ್ಯಾಮ್‌ಸಂಗ್‌ನಂತೆ ಒನ್ಪ್ಲಸ್ ತನ್ನ ಪ್ರಮುಖ ಮಾದರಿ OnePlus 13 ಜನವರಿ 2025 ರಲ್ಲಿ ಬಿಡುಗಡೆ ಮಾಡುತ್ತಿದೆ. ಉತ್ತಮ ಕಾರ್ಯಕ್ಷಮತೆಗಾಗಿ ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಅನ್ನು ಸಹ ಹೊಂದಿರುತ್ತದೆ. ಈ ಫೋನ್ ವಾಟರ್ ಮತ್ತು ಡಸ್ಟ್ ರಕ್ಷಣೆಗಾಗಿ IP69 ರೇಟಿಂಗ್ ಅನ್ನು ಪಡೆದುಕೊಂಡಿದೆ. ಡಿಸ್‌ಪ್ಲೇ ದೋಷಗಳಿಂದ ತೊಂದರೆಗೊಳಗಾದ ಕಂಪನಿಯು ಗ್ರೀನ್ ಲೈನ್ ಫ್ರೀ ಡಿಸ್‌ಪ್ಲೇ ತಂತ್ರಜ್ಞಾನದೊಂದಿಗೆ ಇದನ್ನು ಪ್ರಾರಂಭಿಸುತ್ತದೆ. ಇದು ಪವರ್ಫುಲ್ ಬ್ಯಾಟರಿ ಮತ್ತು ಕ್ಯಾಮೆರಾ ಸೆಟಪ್ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ನಥಿಂಗ್ ಫೋನ್ 3: ಈ ಫೋನ್ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮಾಹಿತಿ ಪ್ರಕಾರ, ಇದು Snapdragon 7s Gen 3 ಪ್ರೊಸೆಸರ್ ಅನ್ನು ಹೊಂದಿದೆ. ಇದು 8GB RAM ಮತ್ತು 512GB ಸಂಗ್ರಹಣೆ ಪಡೆಯಬಹುದು. AMOLED ಡಿಸ್ಪ್ಲೇಯೊಂದಿಗೆ ಬರುವ ಈ ಫೋನ್‌ನಿಂದ ಬಲವಾದ ಕಾರ್ಯಕ್ಷಮತೆ ನಿರೀಕ್ಷಿಸಲಾಗಿದೆ.