ETV Bharat / health

ಹವಾಮಾನ ಬದಲಾವಣೆಯಿಂದ ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆ: ಅಧ್ಯಯನ - WEATHER CHANGE EFFECT ON HEALTH

Weather Change Effects on Health: ಹವಾಮಾನ ಬದಲಾವಣೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. 2030ರ ವೇಳೆಗೆ ವಿಶ್ವದಾದ್ಯಂತ ಪ್ರತಿವರ್ಷ 2.50 ಲಕ್ಷ ಜನರು ಸಾಯುವ ಸಾಧ್ಯತೆಯಿದೆ ಎಂದು ಅಧ್ಯಯನವೊಂದು ತಿಳಿಸಿದೆ.

WEATHER CHANGE EFFECT ON HEALTH  WEATHER CHANGES EFFECTS ON BODY  WILL WEATHER CHANGES MAKE YOU SICK  DOES WEATHER CHANGE GET YOU SICK
ಸಾಂದರ್ಭಿಕ ಚಿತ್ರ (ANI)
author img

By ETV Bharat Health Team

Published : 2 hours ago

Weather Change Effect On Health: ಚಳಿಗಾಲ, ಮಳೆಗಾಲ, ಬೇಸಿಗೆ ಕಾಲದಲ್ಲಿ ಆಗುವಂತಹ ಹವಾಮಾನ ಬದಲಾವಣೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಕಾಯಿಲೆಗಳಿಂದ 2030ರ ವೇಳೆಗೆ ವಿಶ್ವಾದ್ಯಂತ 2.50 ಲಕ್ಷ ಸಾವು ಸಂಭವಿಸುವ ಅಪಾಯವಿದೆ ಎಂದು ಹಲವು ಅಧ್ಯಯನಗಳು ಬಹಿರಂಗಪಡಿಸಿವೆ. ಸಂಶೋಧನೆಗಳು ತಿಳಿಸಿರುವಂತಹ ಕಾಯಿಲೆಗಳು ಯಾವುವು ಎಂಬುದನ್ನು ತಿಳಿಯೋಣ.

ಹೃದ್ರೋಗಗಳ ಸಮಸ್ಯೆ: ಹವಾಮಾನ ಬದಲಾವಣೆಯಿಂದ ದೀರ್ಘಾವಧಿಯ ಅಧಿಕ ತಾಪಮಾನವು ದೇಹದಲ್ಲಿ ನೀರಿನ ಅಂಶವನ್ನು ಕಳೆದುಕೊಳ್ಳುತ್ತದೆ. ರಕ್ತದೊತ್ತಡದಲ್ಲಿ ಬದಲಾವಣೆ ಹಾಗೂ ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗಬಹುದು. ಇವೆಲ್ಲವೂ ಹೃದಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಇದರ ಪರಿಣಾಮವಾಗಿ ಹೃದಯಾಘಾತ, ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ. ಸನ್ ಬರ್ನ್ ಕೂಡ ಹೃದಯಕ್ಕೆ ಹಾನಿ ಮಾಡುತ್ತದೆ. ಹೆಚ್ಚಿನ ತಾಪಮಾನದಿಂದ, ಹೆರಿಗೆ ವಿಳಂಬ ಹಾಗೂ ಗರ್ಭಪಾತದಂತಹ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಂಶೋಧಕರು ಗರ್ಭಿಣಿಯರಿಗೆ ಎಚ್ಚರಿಕೆ ನೀಡಿದ್ದಾರೆ.

ಉಸಿರಾಟದ ತೊಂದರೆ: ಹವಾಮಾನ ಬದಲಾವಣೆಯಿಂದ ವಾಯುಮಾಲಿನ್ಯ ತೀವ್ರಗೊಳ್ಳುತ್ತದೆ. ಧೂಳು ಮತ್ತು ಅಲರ್ಜಿ ಸಮಸ್ಯೆಗಳು ಕೂಡ ಹೆಚ್ಚಾಗುತ್ತವೆ. ಉಸಿರಾಟದ ಸಮಸ್ಯೆಗಳು ಸಹ ಉಲ್ಬಣವಾಗುತ್ತವೆ. ಯುರೋಪಿಯನ್ ರೆಸ್ಪಿರೇಟರಿ ಜರ್ನಲ್‌ನಲ್ಲಿನ (The European Respiratory Journal) ಹವಾಮಾನ ಬದಲಾವಣೆ ಮತ್ತು ಉಸಿರಾಟದ ಕಾಯಿಲೆಯ ಅಧ್ಯಯನವು (Climate change and respiratory disease) ಅಸ್ತಮಾ ಹಾಗೂ COPDಯ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ ಎಂದು ಸಂಶೋಧನೆ ತೋರಿಸಿದೆ.

ಮೊದಲ ಬಾರಿಗೆ ಅಲರ್ಜಿಗಳು ಮತ್ತು ಅಲರ್ಜಿ-ಸಂಬಂಧಿತ ಅಸ್ತಮಾ ಸಮಸ್ಯೆಯು ಸಹ ಉದ್ಭವಿಸುವ ಸಾಧ್ಯತೆಯಿದೆ. ಗಾಳಿಯಲ್ಲಿ ಹೆಚ್ಚು ಆಮ್ಲಜನಕವಿಲ್ಲ. ಶ್ವಾಸಕೋಶ ಹಾಗೂ ಹೃದಯದ ಮೇಲೆ ಹೆಚ್ಚು ಭಾರ ಉಂಟಾಗುತ್ತದೆ. ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನ ದಾಖಲಾದರೆ, ಚಳಿಗಾಲದಲ್ಲಿ ತಾಪಮಾನವು ತುಂಬಾ ಕಡಿಮೆಯಾಗುತ್ತದೆ. ವಾಯುಮಾಲಿನ್ಯವು ತೀವ್ರವಾಗುತ್ತಿರುವುದರಿಂದ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕೀಟಗಳ ಸಮಸ್ಯೆ: ಹೆಚ್ಚಿನ ತಾಪಮಾನವು ನಮಗೆ ತೊಂದರೆಯಾಗಿದ್ದರೂ, ರೋಗಗಳನ್ನು ಹರಡುವ ಕೀಟಗಳು ಮತ್ತು ಹುಳುಗಳು ಅವುಗಳನ್ನು ತುಂಬಾ ಇಷ್ಟಪಡುತ್ತವೆ. ಉಷ್ಣತೆಯ ಹೆಚ್ಚಳದಿಂದ ಲೈಮ್ ಕಾಯಿಲೆಯಂತಹ ಹರಡುವ ಕೀಟಗಳು ಹೊಸ ಪ್ರದೇಶಗಳಿಗೆ ಕಾಣಿಸಿಕೊಳ್ಳುತ್ತವೆ ಎಂದು ಸಂಶೋಧಕರು ವಿವರಿಸುತ್ತಾರೆ. ಮುಖ್ಯವಾಗಿ ಸೊಳ್ಳೆಗಳು ಹೆಚ್ಚು ಕಾಲ ಬದುಕುವುದು ಮಾತ್ರವಲ್ಲದೆ ಚಳಿಗಾಲದಲ್ಲಿ ಚಳಿ ಇಲ್ಲದಿದ್ದಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಇದರಿಂದ ಡೆಂಗಿ, ಮಲೇರಿಯಾದಂತಹ ರೋಗಗಳು ತಲೆದೋರುವ ಸಾಧ್ಯತೆಯು ಇದೆ.

ನೀರಿನಿಂದ ಹರಡುವ ರೋಗಗಳು: ಹವಾಮಾನ ಬದಲಾವಣೆಯು ಅನಿರೀಕ್ಷಿತ ಚಂಡಮಾರುತಗಳು ಹಾಗೂ ಪ್ರವಾಹಗಳನ್ನು ಉಂಟುಮಾಡುತ್ತದೆ. ಇದರಿಂದ ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳ ಬೆಳವಣಿಗೆಗೆ ಉತ್ತಮ ಅವಕಾಶವನ್ನು ಒದಗಿಸುತ್ತವೆ. ಕಲುಷಿತ ನೀರು ತೀವ್ರ ಹೊಟ್ಟೆ ನೋವು, ವಾಂತಿ ಮತ್ತು ಭೇದಿಗೆ ಕಾರಣವಾಗಬಹುದು. ಕೆಲವೊಮ್ಮೆ ಇವು ದೇಹದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಮಳೆನೀರಿನಲ್ಲಿ ಒದ್ದೆಯಾಗುವುದರಿಂದ ಕೈ ಮತ್ತು ಕಾಲುಗಳಲ್ಲಿ ಸೆಲ್ಯುಲೈಟಿಸ್‌ನಂತಹ ಸಮಸ್ಯೆಗಳು ಉಂಟಾಗುತ್ತವೆ ಎಂದು ಸಂಶೋಧಕರು ವಿವರಿಸುತ್ತಾರೆ.

ಶಿಲೀಂಧ್ರಗಳ ಸೋಂಕು: ಹೆಚ್ಚಿನ ತಾಪಮಾನವು ಬಿಸಿ ಹಾಗೂ ಶುಷ್ಕ ವಾತಾವರಣದಲ್ಲಿ ಬೆಳೆಯುವ ಶಿಲೀಂಧ್ರಗಳಿಗೆ ವರದಾನವಾಗಿದೆ. ಶಿಲೀಂಧ್ರವು ಹೊಸ ಪ್ರದೇಶಗಳಿಗೆ ಹರಡುವುದರಿಂದ ಶಿಲೀಂಧ್ರಗಳ ಸೋಂಕುಗಳು ದೊಡ್ಡ ಅಪಾಯವನ್ನು ಉಂಟು ಮಾಡುವ ಸಾಧ್ಯಯು ಇರುತ್ತದೆ. ಹೊಸ ಶಿಲೀಂಧ್ರಗಳು ಹೆಚ್ಚು ಶಾಖವನ್ನು ಸಹಿಸಿಕೊಳ್ಳುತ್ತವೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಈ ವೆಬ್​ಸೈಟ್ ವೀಕ್ಷಿಸಿ: https://publications.ersnet.org/content/erj/34/2/295#:~:text=Climate%20change%2C%20and%20its%20driver,changes%20in%20the%20frequency%20of

ಓದುಗರಿಗೆ ಮುಖ್ಯ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಮಿಲಿಟರಿ ನಿದ್ರೆಯ ಟ್ರಿಕ್ ನಿಮಗೆ ಗೊತ್ತೇ? ಹೀಗೆ ಮಾಡಿದರೆ ಎರಡೇ ನಿಮಿಷದಲ್ಲಿ ನಿದ್ರೆಗೆ ಜಾರುತ್ತೀರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.