ETV Bharat / state

ಮೈಸೂರು: ಕಾಡಾನೆಗಳ ಜಾಡು ಹಿಡಿಯಲು ಅರಣ್ಯ ಇಲಾಖೆಯಿಂದ ಡ್ರೋನ್ ಕ್ಯಾಮರಾ ಬಳಕೆ - DRONE CAMERA TO TRACK ELEPHANTS

ಕಾಡಿನಿಂದ ನಾಡಿಗೆ ಬರುವ ಕಾಡಾನೆಗಳನ್ನು ಪತ್ತೆ ಮಾಡಿ ಪುನಃ ಕಾಡಿಗೆ ಕಳುಹಿಸಲು ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾಗಳನ್ನು ಬಳಸುತ್ತಿದೆ.

Drone camera
ಕಾಡಾನೆಗಳನ್ನು ಟ್ರ್ಯಾಕ್ ಮಾಡಲು ಅರಣ್ಯ ಇಲಾಖೆಯಿಂದ ಡ್ರೋನ್ ಕ್ಯಾಮರಾ ಬಳಕೆ (ETV Bharat)
author img

By ETV Bharat Karnataka Team

Published : Dec 16, 2024, 9:59 PM IST

ಮೈಸೂರು: ಕಾಡಿನಿಂದ ನಾಡಿಗೆ ಲಗ್ಗೆ ಇಡುವ ಕಾಡಾನೆಗಳನ್ನು ಪುನಃ ಕಾಡಿಗೆ ಹಿಮ್ಮೆಟ್ಟಿಸಲು ಡ್ರೋನ್ ವಿಶಿಷ್ಟ ಕ್ಯಾಮರಾಗಳನ್ನು ಅರಣ್ಯ ಇಲಾಖೆ ಬಳಸುತ್ತಿದೆ. ಈ ಡ್ರೋನ್​ ಕ್ಯಾಮರಾದ ಬಳಕೆ ಹೇಗೆ ಮಾಡಲಾಗುತ್ತದೆ. ಈ ಕ್ಯಾಮರಾ ಯಾವ ರೀತಿ ಕೆಲಸ ಮಾಡುತ್ತದೆ. ಇದರ ಉಪಯೋಗವೇನು ಹಾಗೂ ಈ ಕ್ಯಾಮರಾ ಬಳಕೆಯಿಂದ ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ಹೇಗೆ ತಡೆಯಬಹುದು? ಎಂಬ ಬಗ್ಗೆ ಮೈಸೂರು ಅರಣ್ಯ ವಿಭಾಗದ ಡಿಸಿಎಫ್ ಬಸವರಾಜು ಈಟಿವಿ ಭಾರತಕ್ಕೆ ವಿವರಿಸಿದ್ದಾರೆ.

ಪ್ರತಿನಿತ್ಯ ಮನುಷ್ಯ ಮತ್ತು ಕಾಡುಪ್ರಾಣಿಗಳ ಸಂಘರ್ಷ ನಡೆಯುತ್ತಿರುತ್ತವೆ. ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಪ್ರದೇಶಗಳಲ್ಲಿ ರೈಲ್ವೆ ಕಂಬಿ ಅಳವಡಿಕೆ, ತಂತಿ ಬೇಲಿ, ಸೌರ ವಿದ್ಯುತ್‌ ಚಾಲಿತ ಬಂಧಿ ಬೇಡಿ, ಕಂದಕಗಳ ನಿರ್ಮಾಣ ಹಾಗೂ ಆನೆಗಳಿಗೆ ಕಾಲರ್‌ ಐಡಿಗಳ ಅಳವಡಿಕೆ ಸೇರಿದಂತೆ ಕಾಡಾನೆ ಹಾವಳಿಯನ್ನು ತಪ್ಪಿಸಲು ಹಲವು ತಂತ್ರಜ್ಞಾನಗಳನ್ನು ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಕಾಡುಪ್ರಾಣಿಗಳ ಚಲನವಲನದ ಮೇಲೆ ಕಣ್ಣಿಡಲು ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ.

ಮೈಸೂರು ಅರಣ್ಯ ವಿಭಾಗದ ಡಿಸಿಎಫ್ ಬಸವರಾಜು ಮಾತನಾಡಿದರು. (ETV Bharat)

ಡ್ರೋನ್​ ಕ್ಯಾಮರಾದ ವಿಶೇಷತೆಗಳೇನು?: ಥರ್ಮಲ್‌ ಇಮೇಜ್‌ ಟ್ರ್ಯಾಕಿಂಗ್ ಸಿಸ್ಟಮ್‌ ಆಗಿರುವ ಈ ಡ್ರೋನ್​ ಕ್ಯಾಮರಾ ಮುಖ್ಯವಾಗಿ ನಿಧಾನವಾಗಿ ಚಲಿಸುವ ಕಾಡಾನೆಗಳನ್ನು ಕಾಡಿನಿಂದ ನಾಡಿನ ಕಡೆ ಬಂದ ತಕ್ಷಣ ಲೊಕೇಷನ್ ಸಹಿತ ಅವುಗಳ ಚಿತ್ರಗಳನ್ನ ಸೆರೆಹಿಡಿದು, ಅರಣ್ಯ ಇಲಾಖೆಗೆ ಕಳುಹಿಸುತ್ತವೆ. ತಕ್ಷಣ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಲು ಅನುಕೂಲವಾದ ಮಾಹಿತಿ ನೀಡುತ್ತದೆ.

ಡಿಸಿಎಫ್ ಬಸವರಾಜು ಹೇಳಿದ್ದೇನು?: ಕಾಡಿನಿಂದ ನಾಡಿಗೆ ಲಗ್ಗೆ ಇಡುವ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ಅರಣ್ಯ ಇಲಾಖೆಯು ಥರ್ಮಲ್‌ ಇಮೇಜ್ ಟ್ರ್ಯಾಕಿಂಗ್ ಸಿಸ್ಟಮ್ (ಡ್ರೋನ್) ತಂತ್ರಜ್ಞಾನವನ್ನು ಕಾರ್ಯರೂಪಕ್ಕೆ ತಂದಿದೆ ಎಂದು ಹೇಳಿದರು.

ಈ ಡ್ರೋನ್​ಗಳನ್ನು ನಾವು ಕಾಡಿನ ಒಳಗಡೆ ಅಥವಾ ಪೊದೆಗಳ ನಡುವೆ ಹಾರಿಸಿ ಕಾಡು ಪ್ರಾಣಿಗಳ ಇರುವಿಕೆಯನ್ನು ತಿಳಿದುಕೊಳ್ಳುತ್ತೇವೆ. ಅದು ಯಾವ‌ ದಿಕ್ಕಿನಲ್ಲಿ ಚಲಿಸುತ್ತದೆ ಎಂಬುದನ್ನೂ ಸಹ ತಿಳಿದುಕೊಳ್ಳಬಹುದು. ನಮ್ಮ ಸಿಬ್ಬಂದಿ ಹೋಗಲು ಸಾಧ್ಯವಿಲ್ಲದಂತಹ ಜಾಗಗಳಲ್ಲಿ ಡ್ರೋನ್ ಕ್ಯಾಮರಾ ಬಳಸಿ ಕಾಡು ಪ್ರಾಣಿ ಇರುವುದನ್ನು ಪತ್ತೆ ಹಚ್ಚುತ್ತೇವೆ. ಇದರ ಜೊತೆಗೆ ಆ ಪ್ರಾಣಿ ಯಾವ ದಿಕ್ಕಿಗೆ ಚಲಿಸುತ್ತದೆ ಎಂಬುದನ್ನು ತಿಳಿದು ಆ ಭಾಗದ ಜನರಿಗೆ ಮುಂಜಾಗ್ರತೆ ಮೂಡಿಸಲು ಅನುಕೂಲವಾಗುತ್ತದೆ ಎಂದರು.

wild-elephants
ಕಾಡಾನೆಗಳು (ETV Bharat)

ಸಾಕಷ್ಟು ಪ್ರಾಣಿಗಳು ರಾತ್ರಿಯ ವೇಳೆ ಚಲಿಸುವ ಕಾರಣ ಸಾಮಾನ್ಯ ಡ್ರೋನ್​ಗಳು ಇಲ್ಲಿ ಉಪಯೋಗವಾಗುವುದಿಲ್ಲ. ಅದಕ್ಕಾಗಿ ನಾವು ಥರ್ಮಲ್ ಡ್ರೋನ್ ಎನ್ನುವ ಆಧುನಿಕ ತಂತ್ರಜ್ಞಾನವನ್ನು ಅಳವಡಿಕೆ‌ ಮಾಡಿದ್ದೇವೆ. ಇದು‌ ಪ್ರಾಣಿಗಳ ದೇಹದ ಉಷ್ಣಾಂಶದ ಸಹಾಯದಿಂದ ಪ್ರಾಣಿಯ ನಿರ್ದಿಷ್ಟ ಸ್ಥಳದ ಬಗ್ಗೆ ಮಾಹಿತಿ ನೀಡುತ್ತದೆ. ಸಾಮಾನ್ಯವಾಗಿ ರಾತ್ರಿ ವೇಳೆ ಪ್ರಾಣಿಗಳು ಸಾಕಷ್ಟು ಸಂಚಾರ ಮಾಡುವ ಕಾರಣ ಈ ಡ್ರೋನ್ ಮೂಲಕ ಅವುಗಳನ್ನು ಕಂಡುಹಿಡಿದು ಯಾವುದೇ ರೀತಿಯ ಅವಘಡ ಸಂಭವಿಸದಂತೆ ತಡೆಗಟ್ಟಬಹುದಾಗಿದೆ ಎಂದು ಹೇಳಿದರು.

ಇದು ಬ್ಯಾಟರಿ ಆಪರೇಟರ್ ಮೂಲಕ ಕೆಲಸ ಮಾಡುತ್ತದೆ. ಒಂದು ಬ್ಯಾಟರಿ 35 ರಿಂದ 45 ನಿಮಿಷ ಹಾರಾಟ ನಡೆಸುತ್ತದೆ. ಸುಮಾರು 2 ಕಿಲೋ ಮೀಟರ್​ವರೆಗೂ ರೇಂಜ್ ಇರುತ್ತದೆ. ಒಂದು ಸ್ಥಳದಿಂದ ಸುಮಾರು ಎರಡು ಕಿಲೋಮೀಟರ್​ವರೆಗೂ ಕೂಡ ಪ್ರಾಣಿಗಳನ್ನು ಹಿಂಬಾಲಿಸಿಕೊಂಡು ಹೋಗಬಹುದು ಮತ್ತು ಪತ್ತೆ ಹಚ್ಚಬಹುದು. 120 ಮೀಟರ್ ಮೇಲ್ಗಡೆ ನಾವು ಈ ಡ್ರೋನ್​ಗಳನ್ನು ಹಾರಿಸಬಹುದು ಎಂದು ತಿಳಿಸಿದರು.

ಕಳೆದ ಜೂನ್​ನಲ್ಲಿ ಮಂಡ್ಯಕ್ಕೆ 10 ಕಾಡು ಆನೆಗಳು ಬಂದಿದ್ದವು. ಶ್ರೀರಂಗಪಟ್ಟಣ ಹಂಪಾಪುರದಲ್ಲಿನ ಕಬ್ಬಿನ ಗದ್ದೆಯಲ್ಲಿ ಆನೆಗಳು ಬೀಡು ಬಿಟ್ಟಿದ್ದವು. ನಾವು ಆಗ ಮೊದಲನೇ ಬಾರಿ ಥರ್ಮಲ್ ಡ್ರೋನ್ ಕ್ಯಾಮರಾ ಬಳಸಿ ಕಬ್ಬಿನ ಗದ್ದೆಯ ಮೇಲೆ ಹಾರಿಸಿದೆವು. ಡ್ರೋನ್ ಕ್ಯಾಮೆರಾದ ರೆಕ್ಕೆಗಳು ದುಂಬಿಯ ಮಾದರಿಯಲ್ಲಿ ಶಬ್ದ ಮಾಡುತ್ತವೆ. ಇದರಿಂದ ಕಾಡಾನೆಗಳು ಆ ಶಬ್ದಕ್ಕೆ ಹೆದರಿ ಓಡಿ ಹೋಗಲು ಪ್ರಾರಂಭಿಸಿದವು. ಇದು ನಾವು ಪ್ರಾಯೋಗಿಕವಾಗಿ ಮಾಡಿದ್ದೆವು. ಅದು ಬಹಳ ಉಪಯುಕ್ತವಾಯಿತು ಎಂದರು.

wild-elephants
ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ಕಾಡಾನೆಗಳು (ETV Bharat)

ಈಗಾಗಲೇ ರಾಮನಗರ, ಚನ್ನಪಟ್ಟಣ, ಹೆಚ್. ಡಿ ಕೋಟೆ, ಸರಗೂರು, ನಾಗರಹೊಳೆ ಮತ್ತು ಬಂಡೀಪುರ ಸುತ್ತಮುತ್ತಲಿನ ಕಾಡಂಚಿನ ಪ್ರದೇಶಗಳಲ್ಲಿ ಕಾಡಿನಿಂದ ನಾಡಿಗೆ ಬಂದ ಆನೆಗಳನ್ನು ಓಡಿಸಲು ಬಳಸಲಾಗುತ್ತಿದೆ ಎಂದು ತಿಳಿಸಿದರು.

ಕಾಡಾನೆ‌ಗಳು ರಾತ್ರಿ ವೇಳೆಯಲ್ಲಿ ‌ಪಕ್ಕದಲ್ಲಿ‌ ಇದ್ದರೂ ಕಣ್ಣಿಗೆ ಕಾಣುವುದಿಲ್ಲ. ಇಂತಹ ವೇಳೆಯಲ್ಲಿ ನಮ್ಮ‌ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ‌ಡ್ರೋನ್ ಸಹಕಾರಿಯಾಗಿದೆ. ನಮ್ಮಲ್ಲಿ ಈ ಡ್ರೋನ್ ಬಳಸಲು ಇಬ್ಬರು ನುರಿತರಿಗೆ ತರಬೇತಿ ನೀಡಲಾಗಿದೆ. ನಿಧಾನಗತಿಯಲ್ಲಿ ಸಾಗುವ ಆನೆಗಳ ಕಾರ್ಯಾಚರಣೆ ಬಹಳ ಸುಲಭವಾಗಿದೆ. ಆದರೆ ವೇಗದ ಗತಿಯಲ್ಲಿ ಸಾಗುವ ಹುಲಿ ಮತ್ತು ಚಿರತೆ ಕಾರ್ಯಾಚರಣೆಗಳಲ್ಲಿ ಎರಡು ಡ್ರೋನ್​ಗಳನ್ನು ಬಳಸಲಾಗುತ್ತದೆ. ನಾಗರಿಕ ವಿಮಾನ ನಿಲ್ದಾಣ ಸಂಸ್ಥೆಯ ನಿಯಮಾವಳಿಗಳ ಪ್ರಕಾರವೇ ನಾವು ಇದನ್ನು ಬಳಕೆ‌‌ ಮಾಡುತ್ತೇವೆ ಎಂದರು.

ಇದನ್ನೂ ಓದಿ: ರಾಮನಗರ: ಕಾಡಾನೆಗಳ ಚಲನವಲನ ಪತ್ತೆಗೆ ಡ್ರೋನ್ ತಂತ್ರಜ್ಞಾನ ಬಳಕೆ - ELEPHANT MOVEMENT TRACKING

ETV Bharat Logo

Copyright © 2025 Ushodaya Enterprises Pvt. Ltd., All Rights Reserved.