'ಬಿಗ್ ಬಾಸ್ ಕನ್ನಡ ಸೀಸನ್ 11'ರ ಗ್ರ್ಯಾಂಡ್ ಫಿನಾಲೆ ಕಳೆದ ರಾತ್ರಿ ಪ್ರಸಾರ ಕಂಡಿದ್ದು, ಹನುಮಂತು ವಿಜೇತರಾಗಿ ಗೆಲುವಿನ ನಗೆ ಬೀರಿದ್ದಾರೆ. ಟಾಪ್ 5 ಕಂಟೆಸ್ಟೆಂಟ್ಗಳಲ್ಲಿ ಒಬ್ಬರಾಗಿದ್ದ ಉಗ್ರಂ ಮಂಜು ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಬಿಗ್ ಬಾಸ್ ಫಿನಾಲೆ ತಲುಪಿದ್ದ ಸ್ಪರ್ಧಿಗಳಿಗೆ ಬಹುಮಾನ ನೀಡಲಾಗಿದೆ. ಅದರಂತೆ ಉಗ್ರಂ ಮಂಜು ಅವರಿಗೂ ಸರ್ಪ್ರೈಸ್ ಸಿಕ್ಕಿದೆ. ಕ್ಯಾಶ್ಪ್ರೈಸ್ಗಳು ಅನೌನ್ಸ್ ಆಗುತ್ತಿದ್ದಂತೆ ಮಂಜಣ್ಣ ದಾನ ಧರ್ಮಕ್ಕೆ ಮುಂದಾಗಿದ್ದಾರೆ. ಮೊದಲು ಸಿಕ್ಕ 2 ಲಕ್ಷ ರೂಪಾಯಿ ವಯೋವೃದ್ಧರ ಸಹಾಯಕ್ಕೆ ಬಳಸಿ ಎಂದು ವೇದಿಕೆ ಮೇಲೆ ಅನೌನ್ಸ್ ಮಾಡಿದ್ರು. ನಂತರ 1 ಲಕ್ಷ ಸಿಗುತ್ತಿದ್ದಂತೆ, ರೈತರಿಗೆ ಬಳಸಲು ತಮ್ಮ ತಂದೆ ಬಳಿ ಹೇಳುತ್ತಿದ್ದಂತೆ ಸುದೀಪ್ ತಡೆದು ವೇದಿಕೆಯಲ್ಲೇ ಬುದ್ಧಿವಾದ ಹೇಳಿದ್ರು.
ದಾನ ಧರ್ಮ ಮಾಡ್ಬೇಕು, ಆದರೆ ದಡ್ಡತನ ಇರಬಾರದು. ಆ ಹಣ ನಿಮಗೆ ಸಿಕ್ಕಿರೋದು. ಇಲ್ಲಿವರೆಗೆ ತಲುಪಿದ್ದಕ್ಕೆ ಗುರುತಿಸಿ ಗೌರವಿಸುತ್ತಿದ್ದಾರೆ. ಆ ಹಣ ನಿಮಗೆ ಸೇರಿದ್ದು, ನೀವೇ ಇಟ್ಟುಕೊಳ್ಳಿ. ನಿಮ್ಮ ಪರವಾಗಿ ನಾನು 2 ಲಕ್ಷ ನೀಡುತ್ತೇನೆ. ಆ 1 ಲಕ್ಷ ನಿಮ್ಮ ತಂದೆಗೆ ಕೊಡಿ. ಅವರೇ ದೊಡ್ಡ ರೈತರು ಎಂದು ತಿಳಿಸಿ ಮಾನವೀಯತೆ ಮೆರೆದರು.
ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾದಾಗ ಉಗ್ರಂ ಮಂಜು ವಿಭಿನ್ನವಾಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶ ಕಂಡಿದ್ದರು. ಟಪ್ಫೆಸ್ಟ್ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡಿದ್ದ ಅವರು ಟಾಪ್ 2 ಅಥವಾ 3ರಲ್ಲಿ ಇರುತ್ತಾರೆ ಎಂದೇ ಪ್ರೇಕ್ಷಕರು ನಂಬಿದ್ದರು. ಬಹುತೇಕರು ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದ್ರೆ ಮಂಜು ಐದನೇ ಸ್ಥಾನಕ್ಕೆ ಸಮಾಧಾನಪಡುವಂತಾಗಿದೆ. ಬಿಗ್ ಬಾಸ್ ತಂಡಕ್ಕೆ ಧನ್ಯವಾದ ಅರ್ಪಿಸಿದ ಅವರು ಬೆಂಬಲ ತೋರಿದ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸಿದರು. ಜೊತೆಗೆ ನಿರೂಪಕ ಸುದೀಪ್ ಅವರಿಗೂ ಮನತುಂಬಿ ಧನ್ಯವಾದ ಸಮರ್ಪಿಸಿದರು.
ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರು:
- ವಿಜೇತ: ಹನುಮಂತು.
- ರನ್ನರ್ ಅಪ್: ತ್ರಿವಿಕ್ರಮ್.
- ಮೂರನೇ ಸ್ಥಾನ: ರಜತ್ ಕಿಶನ್.
- ನಾಲ್ಕನೇ ಸ್ಥಾನ: ಮೋಕ್ಷಿತಾ.
- ಐದನೇ ಸ್ಥಾನ: ಮಂಜು.
- ಆರನೇ ಸ್ಥಾನ: ಭವ್ಯಾ.
ಇದನ್ನೂ ಓದಿ: ಬಿಗ್ ಬಾಸ್ ಗೆದ್ದ ಹಳ್ಳಿ ಹೈದ ಹನುಮಂತು: ಸುದೀಪ್ ಕೈಯಿಂದ ಟ್ರೋಫಿ ಸ್ವೀಕರಿಸಿದ ಕೊನೆಯ ವಿಜೇತ
ಹನುಮಂತು: ತಮ್ಮ ಸರಳತೆ, ಮುಗ್ಧತೆಯಿಂದಲೇ ಸಖತ್ ಸದ್ದು ಮಾಡಿದ್ದ ಹನುಮಂತು ಅವರು 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಫಿನಾಲೆಗೆ ತಲುಪಿದ ಮೊದಲ ಸ್ಪರ್ಧಿ ಇದೀಗ ಬಿಗ್ ಬಾಸ್ ಟ್ರೋಫಿ ಹಿಡಿದು ಇತಿಹಾಸ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: 5.23 ಕೋಟಿಗೂ ಹೆಚ್ಚು ಮತ ಪಡೆದ ಬಿಗ್ಬಾಸ್ ವಿನ್ನರ್ ಹನುಮಂತುಗೆ ಸಿಕ್ಕ ಹಣವೆಷ್ಟು?