Garlic Benefits: ಮನೆಯಲ್ಲಿ ನಾವು ಸಿದ್ಧಪಡಿಸುವ ಹೆಚ್ಚಿನ ಅಡುಗೆಗಳಿಗೆ ಬೆಳ್ಳುಳ್ಳಿಯನ್ನು ಒಂದಲ್ಲೊಂದು ರೂಪದಲ್ಲಿ ಬಳಸುತ್ತೇವೆ. ಬೆಳ್ಳುಳ್ಳಿ ಖಾರ. ಭಕ್ಷ್ಯಗಳಿಗೆ ಸಖತ್ ರುಚಿ ನೀಡುತ್ತದೆ. ಬೆಳ್ಳುಳ್ಳಿಯನ್ನು ಕೇವಲ ರುಚಿ ಮಾತ್ರವಲ್ಲ, ಹಲವು ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ ಎಂದು ಪೌಷ್ಟಿಕತಜ್ಞೆ ಡಾ.ಅಂಜಲಿ ದೇವಿ ಹೇಳಿದ್ದಾರೆ.
'ಬೆಳ್ಳುಳ್ಳಿಯಲ್ಲಿ ಅನೇಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ನಾವು ಸೇವಿಸುವ ಆಹಾರಗಳಿಂದ ಬ್ಯಾಕ್ಟೀರಿಯಾಗಳು ದೇಹ ಪ್ರವೇಶಿಸುವುದನ್ನು ತಡೆಯಲು ಬೆಳ್ಳುಳ್ಳಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಬೆಳ್ಳುಳ್ಳಿಯು ಹೃದಯ ಕಾಯಿಲೆ, ಮಧುಮೇಹ ಇರುವವರಿಗೆ ಹೆಚ್ಚು ಪ್ರಯೋಜನಕಾರಿ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಜೊತೆಗೆ, ಹೃದಯಾಘಾತವನ್ನು ತಡೆಯುತ್ತದೆ. ಹಾಲುಣಿಸುವ ತಾಯಂದಿರು ಬೆಳ್ಳುಳ್ಳಿ ಸೇವಿಸುವುದರಿಂದ ಹಾಲಿನ ಉತ್ಪಾದನೆ ಹೆಚ್ಚಿಸಬಹುದು. ಬೆಳ್ಳುಳ್ಳಿಯನ್ನು ಅನೇಕ ಔಷಧಿಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತಿದೆ'.
-ಡಾ.ಅಂಜಲಿ ದೇವಿ, ಪೌಷ್ಟಿಕತಜ್ಞೆ
ಬೆಳ್ಳುಳ್ಳಿ ಜೀರ್ಣಕ್ರಿಯೆಗೆ ಒಳ್ಳೆಯದು: ಬೆಳ್ಳುಳ್ಳಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯ ಕಾಪಾಡಿಕೊಳ್ಳುತ್ತದೆ. ಇದು ತೂಕ ನಿಯಂತ್ರಣದಲ್ಲೂ ಪ್ರಮುಖಪಾತ್ರ ವಹಿಸುತ್ತದೆ. ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಮಧುಮೇಹ ನಿಯಂತ್ರಣದಲ್ಲಿಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರೊಂದಿಗೆ ವಿವಿಧ ಸೋಂಕುಗಳನ್ನು ನಿಯಂತ್ರಣದಲ್ಲಿ ಇಡುತ್ತದೆ. ಪರಿಣಾಮವಾಗಿ ಜ್ವರ, ಕೆಮ್ಮು, ಶೀತ ಹರಡಲು ಅವಕಾಶವಿಲ್ಲ. ಬೆಳ್ಳುಳ್ಳಿ ರಸವನ್ನು ಜೇನುತುಪ್ಪದೊಂದಿಗೆ ಕೆಲವು ಹನಿ ಬೆರೆಸಿ ಕುಡಿದರೆ ಕರುಳಿನಲ್ಲಿರುವ ಜಂತುಗಳು ಸಾಯುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
ಬೆಳ್ಳುಳ್ಳಿಯಲ್ಲಿವೆ ಪೋಷಕಾಂಶಗಳು: ವಿವಿಧ ರೀತಿಯ ಪೋಷಕಾಂಶಗಳು ಬೆಳ್ಳುಳ್ಳಿಯಲ್ಲಿವೆ. ಇದರಲ್ಲಿ ಸಾಕಷ್ಟು ಪ್ರಮಾಣದ ಮ್ಯಾಂಗನೀಸ್, ಸೆಲೆನಿಯಮ್, ವಿಟಮಿನ್ ಬಿ6, ಸಿ ಹಾಗೂ ಫೈಬರ್ ಇದೆ. ವಿಟಮಿನ್ ಸಿ ಕಾಲಜನ್ ಉತ್ಪಾದಿಸುತ್ತದೆ. ಇದು ಆರೋಗ್ಯಕರ ಸ್ನಾಯುಗಳಿಗೆ, ಚರ್ಮಕ್ಕೆ ಅವಶ್ಯಕವಾಗಿದೆ. ಬೆಳ್ಳುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಆಲ್ಝೈಮರ್ ಹಾಗೂ ಬುದ್ಧಿಮಾಂದ್ಯತೆಯಂತಹ ಕಾಯಿಲೆಗಳನ್ನು ತಡೆಯುತ್ತದೆ.
ಹೆಚ್ಚಿನ ಮಟ್ಟದ ಮೆಗ್ನೀಸಿಯಂ ಮೂಳೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಕೀಲು ನೋವು ನಿವಾರಿಸುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಇದರಲ್ಲಿರುವ ಸಂಯುಕ್ತಗಳು ಯಕೃತ್ತಿನಿಂದ ವಿಷವನ್ನು ಹೊರಹಾಕುತ್ತವೆ. ಜೊತೆಗೆ ಮೂತ್ರನಾಳದ ಸೋಂಕುಗಳನ್ನು ನಿವಾರಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.
ಓದುಗರಿಗೆ ಸೂಚನೆ : ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.