ETV Bharat / bharat

’ಅವಳಲ್ಲ- ಅವನು‘.. ಲಲಿತ್​ ಸಿಂಗ್​ ಆಗಿ ಬದಲಾದ ಸವಿತಾ: ಗೆಳತಿಗಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ಯುವತಿ! - GENDER CHANGE FOR LOVE

ಯುವತಿಯರ ಮಧ್ಯೆ ಪ್ರೇಮಾಂಕುರವಾಗಿ ಅದರಲ್ಲಿ ಒಬ್ಬಾಕೆ ಲಿಂಗ ಬದಲಾವಣೆ ಮಾಡಿಕೊಂಡ ವಿಶೇಷ ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

ಗೆಳತಿಗಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ಯುವತಿ
ಗೆಳತಿಗಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ಯುವತಿ (ETV Bharat)
author img

By ETV Bharat Karnataka Team

Published : Jan 27, 2025, 10:21 PM IST

ಜೈಪುರ (ರಾಜಸ್ಥಾನ) : ತಾನು ಪ್ರೀತಿಸುತ್ತಿದ್ದ ಯುವತಿಗಾಗಿ ಮತ್ತೊಬ್ಬ ಯುವತಿ ಗಂಡಾಗಿ ಪರಿವರ್ತನೆಯಾದ ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಇಬ್ಬರೂ ವಿವಾಹವಾಗಿ ಉತ್ತರಪ್ರದೇಶದ ಮಥುರಾದಲ್ಲಿ ವಾಸವಾಗಿದ್ದಾರೆ. ಯುವತಿಯ ಕುಟುಂಬಸ್ಥರು ನಾಪತ್ತೆ ದೂರು ನೀಡಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಪೂರ್ಣ ವಿವರ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಭರತ್​ಪುರ ನಿವಾಸಿಯಾದ ಸವಿತಾ ಎಂಬಾಕೆ 2017 ರಲ್ಲಿ ಜೈಪುರಕ್ಕೆ ಅಧ್ಯಯನಕ್ಕಾಗಿ ಬಂದಿದ್ದಾರೆ. ಈ ವೇಳೆ ಇಲ್ಲಿನ ಯುವತಿ ಜೊತೆ ಸ್ನೇಹ ಬೆಳೆದಿದೆ. ಬಳಿಕ ಅದು ಪ್ರೀತಿಗೆ ತಿರುಗಿದೆ. ಇಬ್ಬರೂ ಯುವತಿಯರಾಗಿದ್ದರೂ ಇಬ್ಬರ ಮಧ್ಯೆ ಆಪ್ತತೆ ಬೆಳೆದಿದೆ.

ಕೋವಿಡ್ ಸಮಯದಲ್ಲಿ, ಸವಿತಾ ಭರತ್‌ಪುರಕ್ಕೆ ವಾಪಸ್​ ಆಗಿದ್ದಾರೆ. ಈ ವೇಳೆ ಇಬ್ಬರೂ ಬೇರ್ಪಟ್ಟಿದ್ದರು. ಹೀಗಿದ್ದಾಗ, ಮೊಬೈಲ್‌ ಮೂಲಕ ಮತ್ತೆ ಸಂಪರ್ಕ ಬೆಳೆಸಿಕೊಂಡಿದ್ದಾರೆ. 2021 ರಲ್ಲಿ ಕೊರೊನಾ ನಿಯಮಗಳು ಮುಗಿದ ಬಳಿಕ ಮರು ಭೇಟಿಯಾಗಿದ್ದಾರೆ. ಇದಾದ ನಂತರ ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ. ತನ್ನ ಪ್ರೀತಿಗಾಗಿ ಸವಿತಾ ಲಿಂಗ ಬದಲಾವಣೆಗೆ ನಿರ್ಧರಿಸಿದ್ದಳು.

ಗಂಡಾಗಿ ಬದಲಾದ ಸವಿತಾ!: ಸವಿತಾ ಆಕೆಯ 'ಪ್ರೀತಿಯ' ಸ್ನೇಹಿತೆಗಾಗಿ ಲಿಂಗ ಬದಲಾವಣೆಗೆ ತಮ್ಮತಮ್ಮಲ್ಲೇ ನಿರ್ಧರಿಸಿದ್ದಾರೆ. ಇದಕ್ಕಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಸವಿತಾ ತನ್ನ ವೈದ್ಯ ಸೋದರ ಮಾವನಿಗೆ ತನ್ನ ಸ್ನೇಹಿತೆಯ ಮೇಲಿನ ಪ್ರೀತಿಯ ಬಗ್ಗೆ ಹೇಳಿದ್ದಾರೆ. ತಾನು ಲಿಂಗ ಬದಲಾವಣೆಗೆ ಇಚ್ಚಿಸಿದ್ದಾಗಿ ತಿಳಿಸಿದ್ದಾರೆ. ಆತ, ಇಂದೋರ್‌ನಲ್ಲಿರುವ ಆಸ್ಪತ್ರೆಯ ಸಂಪರ್ಕ ಮಾಡಿದ್ದಾರೆ . 2022 ರಲ್ಲಿ ಮೊದಲ ಸವಿತಾ ಆಸ್ಪತ್ರೆಗೆ ಭೇಟಿ ನೀಡಿದ್ದಾಳೆ. ನಂತರದ ಹತ್ತು ತಿಂಗಳಲ್ಲಿ ಮೂರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸವಿತಾ ಗಂಡಾಗಿ ಪರಿವರ್ತನೆಯಾಗಿದ್ದಾಳೆ. ಇದಕ್ಕೆ ಸುಮಾರು 15 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾಳೆ.

ಸವಿತಾ ಹೋಗಿ ಲಲಿತ್​ ಸಿಂಗ್​ ಆದಳು: ಲಿಂಗ ಬದಲಾವಣೆಯ ನಂತರ, ದಾಖಲೆಗಳಲ್ಲಿ ತನ್ನ ಹೆಸರನ್ನು ಸವಿತಾ ಬದಲಿಗೆ ಲಲಿತ್ ಸಿಂಗ್ ಎಂದು ನಮೂದಿಸಿದ್ದಾರೆ. 24 ನವೆಂಬರ್ 2024 ರಂದು ಜೈಪುರದ ಆರ್ಯ ಸಮಾಜದ ವೇದ ಸಂಸ್ಥಾನ ಮಂಡಳಿಯಲ್ಲಿ ವಿವಾಹವಾಗಿದ್ದಾರೆ. ಬಳಿಕ ಮಥುರಾಗೆ ಹೋಗಿ ನೆಲೆಸಿದ್ದಾರೆ.

ಇತ್ತ, ಸವಿತಾಳ (ಲಲಿತ್​ ಸಿಂಗ್​) ಗೆಳತಿ ಬಿ.ಎಡ್​ ಮಾಡುವುದಾಗಿ ಹೇಳಿ, ಅಲ್ಲಿಂದ ಜನವರಿ 10 ರಂದು ಮನೆ ಬಿಟ್ಟು ಬಂದಿದ್ದಳು. ಕೆಲ ದಿನಗಳ ಬಳಿಕ ಆಕೆಯ ಫೋನ್​ ಸ್ವಿಚ್ಡ್​ ​ಆಫ್​ ಮಾಡಿದ್ದಳು. ಪೋಷಕರು ಹುಡುಕಾಟ ನಡೆಸಿದರೂ ಸಿಗದಿದ್ದಾಗ, ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ. ತನಿಖೆಯಲ್ಲಿ ಯುವತಿಯ ಮೊಬೈಲ್​ ನೆಟ್​ವರ್ಕ್​ ಮಥುರಾದಲ್ಲಿ ಸಿಕ್ಕಿದೆ. ಪೊಲೀಸರು ಜಾಡು ಹಿಡಿದು ಪತ್ತೆ ಮಾಡಿದಾಗ, ಇಬ್ಬರೂ ವಿವಾಹವಾಗಿದ್ದು ತಿಳಿದುಬಂದಿದೆ.

ಪೊಲೀಸರು ಇಬ್ಬರನ್ನೂ ಜೈಪುರಕ್ಕೆ ಕರೆತಂದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿವಾಹವಾಗಿ ಒಟ್ಟಿಗೆ ವಾಸಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ವಯಸ್ಕರಾದ ಕಾರಣ ಪೊಲೀಸರು ಅವರನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: 'ಅವನಲ್ಲ ಅವಳು': ಲಿಂಗ ಬದಲಿಸಿಕೊಂಡ ಸಿನಿ ಸೆಲೆಬ್ರಿಟಿಗಳಿವರು; ಒಮ್ಮೆ ನೋಡಿಬಿಡಿ

ಅನಾರೋಗ್ಯಕ್ಕೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಯುವಕ ಬೆಳಗಾಗುವಷ್ಟರಲ್ಲಿ ಯುವತಿ! - Sex Change Surgery

ETV Bharat Logo

Copyright © 2025 Ushodaya Enterprises Pvt. Ltd., All Rights Reserved.