ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಖ್ಯಾತಿಯ ಸುದೀಪ್ ನಿರೂಪಣೆಯಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಕಳೆದ ರಾತ್ರಿ ತನ್ನ ವಿಜೇತನನ್ನು ಘೋಷಿಸಿದೆ. ಸೀಸನ್ 11ರ ವಿಜೇತರಾಗಿ ಹನುಮಂತು ಹೊರಹೊಮ್ಮಿದ್ದಾರೆ. ಒಂದೊಳ್ಳೆ ವ್ಯಕ್ತಿತ್ವ ಗೆಲುವು ಕಂಡ ಖುಷಿ ಜೊತೆಗೆ ಇದು ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬಂದ ಕೊನೆ ಸೀಸನ್ ಎಂಬ ನೋವು ಅಭಿಮಾನಿಗಳಲ್ಲಿದೆ.
ಕಿಚ್ಚನ ನಿರ್ಧಾರ ಬದಲಾಗುತ್ತಾ? ಹೌದು, ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಸುದೀಪ್ ಇದು ನನ್ನ ನಿರೂಪಣೆಯಲ್ಲಿ ಬರುವ ಕೊನೆ ಸೀಸನ್ ಎಂದು ಎಂದು 11ನೇ ಸೀಸನ್ನ ಆರಂಭದಲ್ಲೇ ತಿಳಿಸಿದ್ದರು. ಪ್ರತೀ ವೀಕೆಂಡ್ ಸ್ಪರ್ಧಿಗಳ ಜೊತೆ ಚರ್ಚೆ ನಡೆಸುವಾಗ ಗಂಟೆಗಟ್ಟಲೆ ನಿಂತೇ ಮಾತನಾಡುತ್ತಿದ್ದ ಸುದೀಪ್ ಅವರನ್ನು ಇನ್ಮುಂದೆ ಕೋಟ್ಯಂತರ ಕನ್ನಡಿಗರು ಮಿಸ್ ಮಾಡಿಕೊಳ್ಳಲಿದ್ದಾರೆ. ಸುದೀಪ್ ಅವರು ಈಗಾಗಲೇ ಅಧಿಕೃತವಾಗಿ ತಿಳಿಸಿರುವಂತೆ ಇದು ಅವರ ಕೊನೆ ಬಿಗ್ ಬಾಸ್ ಆಗಲಿದೆಯೇ? ಅಥವಾ ಅಭಿಮಾನಿಗಳಿಗಾಗಿ ನಿರ್ಧಾರ ಬದಲಿಸಿಕೊಳ್ಳಲಿದ್ದಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.
It's The End of an Era in #BBKannada
— Kiccha Sudeep Trends™ (@TheSudeepTrends) January 26, 2025
Hats off to you Anna @KicchaSudeep ❤️#BBK11 #KicchaSudeep pic.twitter.com/PqOTykXbza
ಈ ಹಿಂದೆ ಹರಡಿತ್ತು ವದಂತಿ: ಬಿಗ್ ಬಾಸ್ ಸೀಸನ್ 11ರ ಘೋಷಣೆಗೂ ಕೆಲ ದಿನಗಳ ಮುನ್ನ ವದಂತಿಯೊಂದು ಹರಡಿತ್ತು. ಇನ್ಮುಂದೆ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅದಾಗ್ಯೂ, ಈ ಸೀಸನ್ ಅನ್ನು ಸುದೀಪ್ ಅವರೇ ನಡೆಸಿಕೊಡಲು ಮುಂದಾದರು. ಇದು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಖುಷಿ ತರಿಸಿತ್ತು.
ಯಾರ ಹೆಸರು ಕೇಳಿಬಂದಿತ್ತು? ಸುದೀಪ್ ಇನ್ಮುಂದೆ ಬಿಗ್ ಬಾಸ್ ನಡೆಸಿಕೊಡಲ್ಲ ಎಂಬ ವದಂತಿ ಹರಡಿದ ಬೆನ್ನಲ್ಲೇ, ಸೀಸನ್ 11 ಅನ್ನು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈ ಸೀಸನ್ನ ನಿರೂಪಕನಾಗಬಹುದು ಎಂಬ ಊಹಿಸಲಾಗಿತ್ತು. ಕಾಂತಾರ ಸ್ಟಾರ್ನ ಹೆಸರು ಕೆಲ ದಿನಗಳ ಕಾಲ ಬಿಗ್ ಬಾಸ್ ಜೊತೆ ಕೇಳಿಬಂದಿತ್ತು. ಫೈನಲಿ, ಸೀಸನ್ 11 ಅಧಿಕೃತವಾಗಿ ಘೋಷಣೆಗೊಂಡು, ಸುದೀಪ್ ಅವರೇ ನಿರೂಪಕ ಎಂಬುದು ಸ್ಪಷ್ಟವಾಯಿತು.
🥺❤️ @KicchaSudeep#BBK11 #KicchaSudeep pic.twitter.com/FHet5G6G4z
— Kiccha Sudeep Trends™ (@TheSudeepTrends) January 26, 2025
'ನನ್ನ ಸಹೋದರನೇ' - ಸುದೀಪ್: ವದಂತಿಗಳನ್ನುದ್ದೇಶಿಸಿ ಮಾತನಾಡಿದ್ದ ಸುದೀಪ್, ನನ್ನ ಸಹೋದರನ ಹೆಸರೇ ಕೇಳಿಬಂದಿದ್ದಲ್ಲವೇ? ಮತ್ಯಾರದ್ದೂ ಅಲ್ಲವಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ: 5.23 ಕೋಟಿಗೂ ಹೆಚ್ಚು ಮತ ಪಡೆದ ಬಿಗ್ಬಾಸ್ ವಿನ್ನರ್ ಹನುಮಂತುಗೆ ಸಿಕ್ಕ ಹಣವೆಷ್ಟು?
Thank you all for the great response shown towards #BBK11.
— Kichcha Sudeepa (@KicchaSudeep) October 13, 2024
The TVR (number) speaks in volumes about the love you all have shown towards the show and me.
It's been a great 10+1 years of travel together, and it's time for me to move on with what I need to do. This will be my last… pic.twitter.com/uCV6qch6eS
ಮುಂದಿನ ನಿರೂಪಕ ಯಾರು? ಅಕ್ಟೋಬರ್ನಲ್ಲಿ ಬಿಗ್ ಬಾಸ್ಗೆ ಸುದೀಪ್ ವಿದಾಯ ತಿಳಿಸಿದ್ದಾರೆ. ಇದು ನನ್ನ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಕೊನೆ ಸೀಸನ್ ಎಂದು ಅಧಿಕೃತವಾಗಿ ತಿಳಿಸಿದ್ದಾರೆ. ಮುಂದಿನ ಸೀಸನ್ಗಳು ಸುದೀಪ್ ಇಲ್ಲದೇ ನಡೆಯುತ್ತಾ? ಅಚ್ಚುಕಟ್ಟಾದ ನಿರೂಪಣೆಯ ಜವಾಬ್ದಾರಿ ಯಾರು ವಹಿಸಿಕೊಳ್ಳಲಿದ್ದಾರೆ? ಅನ್ನೋದು ಅಭಿಮಾನಿಗಳ ಪ್ರಶ್ನೆ.
ಇದನ್ನೂ ಓದಿ: ಬಿಗ್ ಬಾಸ್ ಗೆದ್ದ ಹಳ್ಳಿ ಹೈದ ಹನುಮಂತು: ಸುದೀಪ್ ಕೈಯಿಂದ ಟ್ರೋಫಿ ಸ್ವೀಕರಿಸಿದ ಕೊನೆಯ ವಿಜೇತ
BB is smthn I have enjoyed from past 11 seasons. Thank u all for all the love you have shown. Coming finale is my last as a host, and I hope to entertain u all to my best.
— Kichcha Sudeepa (@KicchaSudeep) January 19, 2025
It's an unforgettable journey, I'm glad to have handled it to my best.
Thank you, @ColorsKannada, for this…
ಅಭಿಮಾನಿಗಳು ಬೇಸರ: ಸುದೀಪ್ ಅವರ ನಿರೂಪಣಾ ಶೈಲಿಯಿಂದಲೇ ಬಿಗ್ ಬಾಸ್ ಈ ಮಟ್ಟಕ್ಕೆ ಬೆಳೆದು ನಿಂತಿದೆ ಅಂದ್ರೆ ಅತಿಶಯೋಕ್ತಿಯಲ್ಲ. ವೀಕೆಂಡ್ ಎಪಿಸೋಡ್ಗಳಿಗೆ ಸಪರೇಟ್ ಫ್ಯಾನ್ ಬೇಸ್ ಇತ್ತು. ಆದ್ರೆ ಇನ್ಮುಂದೆ ಸುದೀಪ್ ಕಾರ್ಯಕ್ರಮ ನಡೆಸಿಕೊಡೋದಿಲ್ಲ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಾಸ್ ಯುಗದ ಅಂತ್ಯ ಎಂಬರ್ಥದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹರಿದಾಡುತ್ತಿವೆ. ಜೊತೆಗೆ, ಸುದೀಪ್ ಅವರ ಈವರೆಗಿನ ನಿರೂಪಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.