MahaShivratri Wishes 2025: ಇದು ಶಿವನಾಮ ಸ್ಮರಣೆಯ ಕಾಲ. ಮಹಾಶಿವರಾತ್ರಿಯ ಈ ವಿಶೇಷ ಸಂದರ್ಭದಲ್ಲಿ ನೀವು ನಿಮ್ಮ ಕುಟುಂಬದವರಿಗೆ, ಪ್ರೀತಿಪಾತ್ರರಿಗೆ ಈ ಸಂದರ್ಭದಲ್ಲಿ ನಿಮ್ಮ ಪ್ರೀತಿ ತುಂಬಿದ ಸಂದೇಶಗಳನ್ನು ಕಳುಹಿಸಬಹುದು. ನಾವು ನಿಮಗಾಗಿ ಮನಸಿನ ಭಾವನೆಗಳನ್ನು ಹೇಳುವ ಹಬ್ಬದ ಖುಷಿಯನ್ನು ಹಂಚಿಕೊಳ್ಳುವ ಅದ್ಬುತ ಸಂದೇಶ ಸಾರುವ ಮನೆ-ಮನ ಬೆಳಗುವ ಸಂದೇಶಗಳನ್ನು ತಂದಿದ್ದೇವೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಈ ಭಾವ ಪೂರ್ಣ ಸಂದೇಶಗಳನ್ನು ಹಂಚಿಕೊಳ್ಳಬಹುದು ಮತ್ತು ಅವರ ಮುಖದಲ್ಲಿ ಸಂತೋಷ ಅರಳುವಂತೆ ಮಾಡಬಹುದು
ಮಹಾಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ ನಾವು ನಿಮಗಾಗಿ ಆಸಕ್ತಿದಾಯಕ ಸಂದೇಶಗಳನ್ನು ತಂದಿದ್ದೇವೆ. ಈ ಸಂದೇಶಗಳಲ್ಲಿ ನಿಮಗೆ ಸರಿ ಅನಿಸಿದ, ಮನಸಿಗೆ ಹಿತ ನೀಡುವ, ಪ್ರೀತಿಪಾತ್ರರನ್ನು ಇಂಪ್ರೆಸ್ ಮಾಡುವ ಅಣಿಮುತ್ತುಗಳನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬಹುದು. ಜೀವನದ ಉಲ್ಲಾಸವನ್ನು ಹೆಚ್ಚಿಸುವ ಈ ಸಂದೇಶಗಳೊಂದಿಗೆ ಮಹಾಶಿವರಾತ್ರಿಯ ಶುಭಾಶಯಗಳನ್ನು ಹೇಳಿ
- ಶಿವನೇ ಸತ್ಯ, ಶಿವನೇ ಸುಂದರ, ಶಿವನು ಕರುಣಾ ಸಾಗರ, ಮಹಾಶಿವರಾತ್ರಿಯ ಶುಭಾಶಯಗಳು
- ದೇಹವನ್ನು ಅರಿತು ಮನಸ್ಸನ್ನು ತಿಳಿದು ಭಾವನೆಗಳನ್ನು ಅರಿತು ಶಿವನಾಮ ಸ್ಮರಣೆ ಮಾಡಿ, ಎಲ್ಲವೂ ಒಳ್ಳೆಯದಾಗುತ್ತೆ. ನೀವು ಹಾಗೂ ನಿಮ್ಮ ಕುಟುಂಬಕ್ಕೂ ಮಹಾಶಿವರಾತ್ರಿಯ ಶುಭಾಶಯಗಳು.
- ಓಂನಲ್ಲಿ ನಂಬಿಕೆ, ಓಂನಲ್ಲಿನ ಶಕ್ತಿ, ಓಂನಲ್ಲಿ ಇಡೀ ಜಗತ್ತು, ಜೈ ಶಿವಶಂಕರ್, ಮಹಾಶಿವರಾತ್ರಿಯ ಶುಭಾಶಯಗಳು.
- ಕಾಲವೂ ನೀನೇ ಮತ್ತು ಮಹಾಕಾಲನೂ ನೀನೇ, ಲೋಕವೂ ನೀನೇ, ತ್ರಿಲೋಕವೂ ನೀನೇ, ಶಿವನೂ ನೀನೇ ಮತ್ತು ಸತ್ಯವೂ ನೀನೇ, ಮಹಾಶಿವರಾತ್ರಿಯ ಶುಭಾಶಯಗಳು.
- ಓಂ ತ್ರ್ಯಂಬಕಂ ಯಜಾಮಹೇ, ಸುಗಂಧಿ ಪುಷ್ಟಿವರ್ಧನಂ, ಉರ್ವಾರುಕಮಿವ್ ಬಂಧನನ್ ಮೃತ್ಯೋಮೂರ್ಕ್ಷೀಯ ಮಾಮೃತಾತ್ - ಹ್ಯಾಪಿ ಮಹಾ ಶಿವರಾತ್ರಿ
ಇದನ್ನು ಓದಿ: ಸಿಹಿ ಗೆಣಸು - ಶಿವರಾತ್ರಿಗೂ ಇರುವ ಸಂಬಂಧವೇನು?; ಆ ದಿನವೇ ಏಕೆ ತಿನ್ನಬೇಕು?, ಇದರ ಹಿಂದಿನ ಕಾರಣಗಳೇನು?