ETV Bharat / business

ನಿಮಗಿದು ಗೊತ್ತಾ..? 14.65 ಲಕ್ಷದವರೆಗಿನ ಸಂಬಳದ ಮೇಲೆಯೂ ನೀವು ತೆರಿಗೆ ಪಾವತಿಸಬೇಕಾಗಿಲ್ಲ; ಹೇಗೆ ಎಂದು ತಿಳಿಯಿರಿ! - TAX CALCULATION AS PER FY26 SLABS

ನಿಮ್ಮ CTC ವಾರ್ಷಿಕವಾಗಿ 14.65 ಲಕ್ಷ ರೂಪಾಯಿಗಳಾಗಿದ್ದು, ನೀವು NPS ಮತ್ತು EPFನ ಪ್ರಯೋಜನಗಳನ್ನು ಪಡೆದುಕೊಂಡಿದ್ದರೆ, ಆಗ ನಿಮ್ಮ ತೆರಿಗೆ ಶೂನ್ಯವಾಗಿರುತ್ತದೆ.

taxpayers-will-not-have-to-pay-tax-on-income-up-to-14-lakh-tax-
ನಿಮಗಿದು ಗೊತ್ತಾ..? 14.65 ಲಕ್ಷದವರೆಗಿನ ಸಂಬಳದ ಮೇಲೆ ನೀವು ತೆರಿಗೆ ಪಾವತಿಸಬೇಕಾಗಿಲ್ಲ; ಹೇಗೆ ಎಂದು ತಿಳಿಯಿರಿ! (Getty Image)
author img

By ETV Bharat Karnataka Team

Published : Feb 25, 2025, 10:00 AM IST

ನವದೆಹಲಿ: ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್​​​ ನಲ್ಲಿ 12 ಲಕ್ಷ ರೂಪಾಯಿವರೆಗಿನ ಇನ್​​​ ಕಮ್​ ಹೊಂದಿರುವ ವೇತನದಾರರಿಗೆ ಆದಾಯ ತೆರಿಗೆ ವಿಷಯದಲ್ಲಿ ದೊಡ್ಡ ಗಿಫ್ಟ್​ ಕೊಟ್ಟಿದ್ದಾರೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ 12 ಲಕ್ಷದವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಆದಾಗ್ಯೂ, ಕೆಲವು ಸ್ಮಾರ್ಟ್ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ರೂ 14.65 ಲಕ್ಷ ಆದಾಯದ ಮೇಲೆಯೂ ಶೂನ್ಯ ತೆರಿಗೆ ಪಾವತಿಸಬಹುದು.

ತೆರಿಗೆ ಉಳಿಸುವುದು ಹೇಗೆ?: ಆಂಗ್ಲ ಮಾಧ್ಯಮವೊಂದರ ಬಿಸಿನೆಸ್​ ವರದಿಯ ಪ್ರಕಾರ Tax2Win ಲೆಕ್ಕಾಚಾರಗಳನ್ನು ಉಲ್ಲೇಖಿಸಿ, 14.65 ಲಕ್ಷ ರೂಪಾಯಿಗಳ CTC ಹೊಂದಿರುವ ಸಂಬಳದ ಉದ್ಯೋಗಿಗಳು ಶೂನ್ಯ ತೆರಿಗೆಯನ್ನು ಪಾವತಿಸಬಹುದು. Tax2Winನ CEO ಮತ್ತು ಸಹ - ಸಂಸ್ಥಾಪಕ ಅಭಿಷೇಕ್ ಸೋನಿ ಅವರು 14.65 ಲಕ್ಷ ರೂಪಾಯಿಗಳ ಸಿಟಿಸಿ ಹೊಂದಿರುವ ಸಂಬಳದ ಉದ್ಯೋಗಿಗಳು ಹೊಸ ಆದಾಯ ತೆರಿಗೆ ವ್ಯವಸ್ಥೆಯ ಅಡಿ ಹೇಗೆ ಶೂನ್ಯ ತೆರಿಗೆ ಪಾವತಿಸಬಹುದು ಎಂಬುದನ್ನು ವಿವರಿಸಿದ್ದಾರೆ.

ಉದಾಹರಣೆ ನೀಡುವುದಾದರೆ,

  • ವಾರ್ಷಿಕ ಆದಾಯ (CTC) - ರೂ 14,65,000
  • ಮೂಲ ವೇತನ (ಸಿಟಿಸಿಯ ಶೇಕಡಾ 50) - ರೂ 7,32,500
  • NPS ಉದ್ಯೋಗದಾತರ ಕೊಡುಗೆ (ಮೂಲದ 14%) - ರೂ 1,02,550
  • EPF ಉದ್ಯೋಗದಾತರ ಕೊಡುಗೆ (12% ಮೂಲ) - ರೂ 87,900
  • ಪ್ರಮಾಣಿತ ಕಡಿತ(Standard Deduction) - ರೂ 75,000
  • ತೆರಿಗೆಯ ಆದಾಯ (ಕಡಿತಗಳ ನಂತರ) - ರೂ 11,99,550 ಲಕ್ಷ ರೂ.

ಈ ಕಡಿತಗಳೊಂದಿಗೆ ನಿಮ್ಮ ತೆರಿಗೆಯ ಆದಾಯವು 12 ಲಕ್ಷದ ಒಳಗೆ ಬರಲಿದೆ. ಹೊಸ ವ್ಯವಸ್ಥೆಯ ಅಡಿ ನೀವು ಶೂನ್ಯ ತೆರಿಗೆಗೆ ಅರ್ಹರಾಗುತ್ತೀರಿ. ಆದಾಗ್ಯೂ, ಅದರ ಪ್ರಯೋಜನಗಳನ್ನು ಪಡೆಯಲು, ಉದ್ಯೋಗಿಗಳು ತಮ್ಮ ವೇತನ ರಚನೆಯಲ್ಲಿ NPS ಮತ್ತು EPF ಕೊಡುಗೆಗಳನ್ನು ಸೇರಿಸಬೇಕಾಗುತ್ತದೆ.

ಸ್ಲ್ಯಾಬ್‌ನಲ್ಲಿಯೂ ಬದಲಾವಣೆ: ಹೊಸ ತೆರಿಗೆ ಸ್ಲ್ಯಾಬ್ ಅಡಿ ಆದಾಯವು ರೂ 12 ಲಕ್ಷಕ್ಕಿಂತ ಹೆಚ್ಚಿದ್ದರೆ, ಆ ವ್ಯಕ್ತಿಯು ರೂ 4 ಲಕ್ಷದವರೆಗಿನ ಆರಂಭಿಕ ಆದಾಯದ ಮೇಲೆ ವಿನಾಯಿತಿ ಪಡೆಯುತ್ತಾರೆ. 4 ರಿಂದ 8 ಲಕ್ಷ ಆದಾಯದ ಮೇಲೆ ಶೇ 5, 8 ರಿಂದ 12 ಲಕ್ಷದವರೆಗೆ ಶೇ 10, ರೂ 12 ರಿಂದ 16 ಲಕ್ಷದವರೆಗೆ ಶೇ 15, 16 ರಿಂದ 20 ಲಕ್ಷದವರೆಗೆ ಶೇ 20, 20 ರಿಂದ 24 ಲಕ್ಷದವರೆಗೆ ಶೇ 25 ಮತ್ತು ರೂ 24 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇ 30 ತೆರಿಗೆ ವಿಧಿಸಲಾಗುತ್ತದೆ.

ಇದನ್ನು ಓದಿ: ಇನ್ನೆರಡು ವರ್ಷಗಳಲ್ಲಿ 1.25 ಲಕ್ಷ ರೂಗೆ ಏರಿಕೆಯಾಗಲಿದೆ ಬಂಗಾರ!: ತಜ್ಞರ ಅಂದಾಜು, ಕಾರಣಗಳೇನು?

ಶುಭಸುದ್ದಿ: ವೈಯಕ್ತಿಕ, ಗೃಹ, ಕಾರು ಸಾಲಗಳ ಮೇಲಿನ ಬಡ್ಡಿದರ ಕಡಿತ: ಯಾವ ಬ್ಯಾಂಕ್‌ನಲ್ಲಿ ಎಷ್ಟು Interest?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.