ETV Bharat / education-and-career

2025 - 26ರ ಶೈಕ್ಷಣಿಕ ಸಾಲಿನ ವೇಳಾಪಟ್ಟಿ ಪ್ರಕಟಿಸಿದ ಪಿಯು ಬೋರ್ಡ್​​ - PRE UNIVERSITY ACADEMIC YEAR

ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿ ಮುಕ್ತಾಯವಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷ ಯಾವಾಗಿನಿಂದ ಪ್ರಾರಂಭ, ಪರೀಕ್ಷೆ, ಮಧ್ಯಂತರ ರಜೆ ಸೇರಿದಂತೆ ಸಕಲ ವಿವರಗಳನ್ನು ಪಿಯು ಬೋರ್ಡ್​ ಪ್ರಕಟಿಸಿದೆ.

pre-university-academic-year-2025-26-detail-by-pu-board
ಪಿಯು ಬೋರ್ಡ್​ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Feb 25, 2025, 12:33 PM IST

ಬೆಂಗಳೂರು: 2025-26ನೇ ಸಾಲಿನ ಪಿಯು ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಎಸ್​ಎಸ್​ಎಲ್​ಸಿ ಫಲಿತಾಂಶ ಬಂದ ಬೆನ್ನಲ್ಲೇ ಜೂನ್​ 2ರಿಂದ ಕಾಲೇಜುಗಳು ಆರಂಭವಾಗಲಿವೆ.

ದ್ವಿತೀಯ ಪಿಯು ದಾಖಲಾತಿ ಪ್ರಕ್ರಿಯೆ ಮೇ 22ರಿಂದಲೇ ಪ್ರಾರಂಭವಾಗಲಿದ್ದು, ಜೂನ್​ 2ರಿಂದ ತರಗತಿಗಳು ಆರಂಭಗೊಳ್ಳಲಿವೆ. ಸೆಪ್ಟೆಂಬರ್​ 22ರಿಂದ ಅಕ್ಟೋಬರ್​ 7ರವರೆಗೆ ಮಧ್ಯಂತರ ರಜೆ ಇರಲಿದೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿ ಮೊದಲ ಅವಧಿ ಜೂನ್​ 2 ರಿಂದ ಸೆಪ್ಟೆಂಬರ್​ 21ರವರೆಗೆ ಇರಲಿದ್ದು, ಎರಡನೇ ಅವಧಿ ಅಕ್ಟೋಬರ್​ 8 ರಿಂದ 2026ರ ಮಾರ್ಚ್​ 31ರವರೆಗೆ ಇರಲಿದೆ. 2026ರ ಏಪ್ರಿಲ್​ 1ರಿಂದ ಬೇಸಿಗೆ ರಜೆ ಅವಧಿ ಪ್ರಾರಂಭವಾಗಲಿದೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಕ್ಟೋಬರ್​ 9 ರಿಂದ 27ರವರೆಗೆ ಮದ್ಯ ವಾರ್ಷಿಕ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ 2026ರ ಜನವರಿ 21ರಿಂದ ಪ್ರಾರಂಭವಾಗಲಿದೆ.

ಪ್ರಥಮ ಪಿಯು ವಾರ್ಷಿಕ ಪರೀಕ್ಷೆ 2026ರ ಫೆ, 10 ರಿಂದ ಪ್ರಾರಂಭವಾದರೆ, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ 2026ರ ಫೆಬ್ರವರಿ 26ರಿಂದ ಮಾರ್ಚ್​​ 21ರವರೆಗೆ ಸಾಗಲಿದೆ. ಮಾರ್ಚ್​ 31ರಂದು ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು ಮೇ ಮೊದಲ ಪಿಯುಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಮೇ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪಿಯು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಅಂಗವೈಕಲ್ಯ ಮೆಟ್ಟಿನಿಂತು ಸಾಧನೆ; ಜೆಇಇ ಮೇನ್ಸ್​ನಲ್ಲಿ ವಿಕಲಚೇತನ ವರ್ಗದಲ್ಲಿ ದೇಶಕ್ಕೆ ಹಿಮನೇಶ ಟಾಪರ್

ಇದನ್ನೂ ಓದಿ: ಪರೀಕ್ಷಾ ದಿನಗಳಲ್ಲಿ ಮಕ್ಕಳ ಆಹಾರ ಕ್ರಮ ಹೇಗಿರಬೇಕು ? ಇಲ್ಲಿದೆ ತಜ್ಞರ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.