ETV Bharat / business

ಎಕ್ಸ್ ಶೋರೂಂ ಪ್ರೈಸ್​ Vs ಆನ್ ರೋಡ್ ಪ್ರೈಸ್​ - ಇವೆರಡರ ನಡುವಿನ ವ್ಯತ್ಯಾಸವೇನು? - WHAT IS VEHICLE EX SHOWROOM PRICE

ವಾಹನದ ಎಕ್ಸ್ ಶೋರೂಂ ಬೆಲೆಗೂ ಆನ್ ರೋಡ್ ದರಕ್ಕೂ ವ್ಯತ್ಯಾಸವಾಗುವುದು ಏಕೆ? ; ಇವುಗಳ ನಡುವಣ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳೋಣ

EX SHOWROOM PRICE VS ON ROAD PRICE
ಎಕ್ಸ್ ಶೋರೂಂ ಪ್ರೈಸ್​ Vs ಆನ್ ರೋಡ್ ಪ್ರೈಸ್​ - ಇವೆರಡರ ನಡುವಿನ ವ್ಯತ್ಯಾಸವೇನು? (ETV Bharat)
author img

By ETV Bharat Karnataka Team

Published : Feb 25, 2025, 6:32 AM IST

Ex Showroom Price Vs On Road Price: ಯಾವುದೇ ವಾಹನ ಖರೀದಿಸುವಾಗ ನಾವು ಎರಡು ರೀತಿಯ ಬೆಲೆಗಳನ್ನು ಕೇಳುತ್ತೇವೆ. ಅವುಗಳಲ್ಲಿ ಒಂದು 'ಎಕ್ಸ್ ಶೋ ರೂಂ ಬೆಲೆ' ಇನ್ನೊಂದು 'ಆನ್ ರೋಡ್ ಬೆಲೆ. ಇವುಗಳ ಅರ್ಥವೇನು? ಈ ಎರಡು ವಿಧದ ಬೆಲೆಗಳ ನಡುವಿನ ವ್ಯತ್ಯಾಸವೇನು? ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಎಕ್ಸ್ ಶೋ ರೂಂ ಬೆಲೆ : ವಾಹನದ ಎಕ್ಸ್ ಶೋರೂಂ ಬೆಲೆ ಬಗ್ಗೆ ತಿಳಿದುಕೊಳ್ಳುವುದಾದರೆ ನೋಂದಣಿ ಶುಲ್ಕಗಳು, ರಸ್ತೆ ತೆರಿಗೆ, ವಿಮಾ ಪಾಲಿಸಿ ಇತ್ಯಾದಿ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ. ರಸ್ತೆಗಳಲ್ಲಿ ವಾಹನಗಳನ್ನು ಓಡಿಸಬೇಕಾದರೆ ನಾವೆಲ್ಲ ಕೆಲವು ನಿಯಮಗಳನ್ನು ಅನುಸರಿಸಬೇಕು. ನಿಯಮ ಪಾಲಿಸದ ವಾಹನ ಸವಾರರು ಭಾರಿ ದಂಡ ತೆರಬೇಕಾಗುತ್ತದೆ. ನಿರ್ದಿಷ್ಟವಾಗಿ, ವಾಹನವನ್ನು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ನೋಂದಾಯಿಸಬೇಕಾಗುತ್ತದೆ. ರಸ್ತೆ ತೆರಿಗೆ ಪಾವತಿಸಿ. ವಾಹನಕ್ಕೆ ವಿಮಾ ಪಾಲಿಸಿ ತೆಗೆದುಕೊಳ್ಳಬೇಕು. ಎಕ್ಸ್ ಶೋರೂಂ ಬೆಲೆಯು ಸರ್ಕಾರಕ್ಕೆ ಪಾವತಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ವಾಹನ ಡೀಲರ್‌ನ ಲಾಭವನ್ನು ಒಳಗೊಂಡಿರುತ್ತದೆ. ಈ ಬೆಲೆಯನ್ನೇ ಸಾಮಾನ್ಯವಾಗಿ ಜಾಹೀರಾತುಗಳಲ್ಲಿ ತೋರಿಸಲಾಗುತ್ತದೆ.

ಆನ್-ರೋಡ್ ಪ್ರೈಸ್​​; 'ಆನ್ - ರೋಡ್ ಬೆಲೆ' ಎಂದರೆ ಶೋರೂಮ್‌ನಿಂದ ಬರುವ ವಾಹನವನ್ನು ರಸ್ತೆಗೆ ಇಳಿಸಬೇಕು ಎಂದರೆ ಅದಕ್ಕೆ ತೆರಬೇಕಾದ ತೆರಿಗೆಯನ್ನು ಒಳಗೊಂಡಿರುತ್ತದೆ. ಈ ಬೆಲೆಯು ವಾಹನದ ಎಕ್ಸ್ ಶೋ ರೂಂ ದರ, ನೋಂದಣಿ ಶುಲ್ಕಗಳು, ರಸ್ತೆ ತೆರಿಗೆ, ವಿಮಾ ಪಾಲಿಸಿ ಮತ್ತು ಇತರ ಶುಲ್ಕಗಳನ್ನು ಒಳಗೊಂಡಿರುತ್ತದೆ. ನೀವು ವಾಹನದಲ್ಲಿ ಯಾವುದೇ ಹೆಚ್ಚುವರಿ ವೈಶಿಷ್ಟ್ಯ ಬಯಸಿದರೆ ನೀವು ಡೀಲರ್ ಸಂಪರ್ಕಿಸಬಹುದು. ವಿತರಕರು ಖರೀದಿದಾರರಿಂದ ಅಗತ್ಯ ಶುಲ್ಕಗಳನ್ನು ಪಡೆದುಕೊಂಡು ಹೆಚ್ಚುವರಿ ವೈಶಿಷ್ಟ್ಯಗಳನ್ನು ಅಳವಡಿಸಿದ ಬಳಿಕ ವಾಹನವನ್ನು ಗ್ರಾಹಕರಿಗೆ ನೀಡುತ್ತಾರೆ. ಈ ಎಲ್ಲ ವೆಚ್ಚಗಳನ್ನು ಸೇರಿಸಿ, ಆನ್-ರೋಡ್ ಬಿಲ್ ಖರೀದಿದಾರರಿಗೆ ನೀಡಲಾಗುತ್ತದೆ. ವಾಹನದ ಎಕ್ಸ್ ಶೋರೂಂ ಬೆಲೆಯನ್ನು ಆನ್ ರೋಡ್ ಬೆಲೆಗೆ ಪರಿವರ್ತಿಸುವ ಕ್ಯಾಲ್ಕುಲೇಟರ್‌ಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಅಥವಾ ಈ ಬಗೆಗಿನ ಹೆಚ್ಚಿನ ವಿವರಗಳಿಗಾಗಿ ನೇರವಾಗಿ ವಿತರಕರನ್ನು ಸಂಪರ್ಕಿಸಬಹುದು.

ಎಕ್ಸ್ ಶೋ ರೂಂ ಬೆಲೆ, ಆನ್ ರೋಡ್ ಬೆಲೆಗಳ ನಡುವಣ ವ್ಯತ್ಯಾಸ!: ವಾಹನದ ಎಕ್ಸ್ ಶೋರೂಂ ಬೆಲೆ ಮತ್ತು ಆನ್ ರೋಡ್ ಬೆಲೆಯ ನಡುವೆ ಕೆಲವು ಮೂಲಭೂತ ವ್ಯತ್ಯಾಸಗಳಿವೆ. ಎಕ್ಸ್ ಶೋರೂಂ ಬೆಲೆಯು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಿರುವುದಿಲ್ಲ. ಇದು ವಾಹನ ತಯಾರಕರು ನಿಗದಿಪಡಿಸಿದ ಬೆಲೆ, ಡೀಲರ್ ಲಾಭ ಮತ್ತು ಜಿಎಸ್‌ಟಿ ಮಾತ್ರ ಒಳಗೊಂಡಿರುತ್ತದೆ. ಇದಕ್ಕೆ ವಿರುದ್ಧವಾಗಿ, ಆನ್ - ರೋಡ್ ಬೆಲೆಯು ನೋಂದಣಿ ಶುಲ್ಕಗಳು, ವಿಮಾ ಪಾಲಿಸಿ ವೆಚ್ಚಗಳು, ರಸ್ತೆ ತೆರಿಗೆ ಮತ್ತು ಇತರ ಶುಲ್ಕಗಳನ್ನು ಒಳಗೊಂಡಿರುತ್ತದೆ. ವಾಹನಕ್ಕೆ ಹೆಚ್ಚುವರಿ ಬಿಡಿಭಾಗಗಳನ್ನು ಸೇರಿಸಿದರೆ, ಅವುಗಳ ವೆಚ್ಚವನ್ನು ಆನ್-ರೋಡ್ ದರದಲ್ಲಿ ಸೇರಿಸಲಾಗುತ್ತದೆ. ಆದ್ದರಿಂದ ಎಕ್ಸ್ ಶೋರೂಂ ಬೆಲೆ ಆನ್ ರೋಡ್ ಬೆಲೆಗಿಂತ ಕಡಿಮೆ ಇರುತ್ತದೆ. ವಿತರಕರು ವಾಹನಗಳನ್ನು ಆನ್ - ರೋಡ್ ಬೆಲೆಗೆ ಮಾತ್ರ ಮಾರಾಟ ಮಾಡುತ್ತಾರೆ.

ಇದನ್ನು ಓದಿ: ಟಾಟಾ ಸಫಾರಿಯ 27ನೇ ವರ್ಷಾಚರಣೆಗೆ ಮ್ಯಾಟ್​ ಬ್ಲಾಕ್​ ಸ್ಟೆಲ್ತ್​ ಎಡಿಷನ್​ ಬಿಡುಗಡೆ; ಬೆಲೆ, ವೈಶಿಷ್ಟ್ಯ ಹೀಗಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.