ETV Bharat / spiritual

ಸಿಹಿ ಗೆಣಸು - ಶಿವರಾತ್ರಿಗೂ ಇರುವ ಸಂಬಂಧವೇನು?; ಆ ದಿನವೇ ಏಕೆ ತಿನ್ನಬೇಕು?, ಇದರ ಹಿಂದಿನ ಕಾರಣಗಳೇನು? - SWEET POTATO BENEFITS

ಮಹಾ ಶಿವರಾತ್ರಿಯ ದಿನದಂದು ಇದುವೇ ಅತ್ಯುತ್ತಮ ಆಹಾರ - ಉಪವಾಸ ಹಾಗೂ ಜಾಗರಣೆ ಮಾಡುವವರಿಗೆ ಇದು ತುಂಬಾ ಒಳ್ಳೆಯದು.

sweet-potato-benefits-and-why-do-people-eat-sweet-potatoes-on-maha-shivaratri
ಸಿಹಿ ಗೆಣಸು- ಶಿವರಾತ್ರಿಗೂ ಇರುವ ಸಂಬಂಧವೇನು ಗೊತ್ತಾ?; ಆ ದಿನವೇ ಏಕೆ ತಿನ್ನಬೇಕು? (ETV Bharat)
author img

By ETV Bharat Karnataka Team

Published : Feb 24, 2025, 6:30 AM IST

Sweet Potato Benefits :ಇನ್ನೇನು ಶಿವರಾತ್ರಿ ಬಂದೇ ಬಿಟ್ಟಿತು. ಮಹಾ ಶಿವರಾತ್ರಿಯ ದಿನ, ಉಪವಾಸ ಮತ್ತು ಜಾಗರಣೆ ಆಚರಣೆ ಮಾಡಲಾಗುತ್ತದೆ. ಭಗವಾನ್ ಶಿವನ ಆರಾಧನೆ ಮತ್ತು ಜಾಗರಣೆ ಬಳಿಕದ ಉಪವಾಸದ ನಂತರ ಸೇವಿಸುವ ಆಹಾರಗಳಲ್ಲಿ ಸಿಹಿ ಗೆಣಸು ಅತ್ಯಂತ ಪ್ರೀತಿಪಾತ್ರವಾದ ಆಹಾರವಾಗಿದೆ. ಹೆಚ್ಚಿನವರು ಶಿವರಾತ್ರಿಯ ದಿನ ಸಿಹಿಗೆಣಸು ತಿನ್ನಲು ಆಸಕ್ತಿ ತೋರಿಸುತ್ತಾರೆ. ಅದಕ್ಕೆ ಹಲವಾರು ಕಾರಣಗಳಿವೆ.

ಸಿಹಿಗೆಣಸು ಪ್ರಪಂಚದಾದ್ಯಂತ ಕಂಡುಬರುತ್ತದೆ. ಈ ಸಿಹಿ ಗೆಣಸನ್ನು ನಿಮ್ಮ ಆಹಾರದ ಭಾಗವಾಗಿ ಮಾಡಿಕೊಂಡರೆ ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು. ಸುಮಾರು 5 ಸಾವಿರ ವರ್ಷಗಳಿಂದ ಇರುವ ಈ ಸಿಹಿ ಗೆಣಸನ್ನು ಬಜೆಟ್ ಸ್ನೇಹಿ ಸೂಪರ್ ಫುಡ್ ಎಂದು ತಜ್ಞರು ಕರೆಯುತ್ತಾರೆ. ದೇಶದ ಪ್ರಮುಖ ಬೆಳೆಗಳಾದ ಅಕ್ಕಿ, ಜೋಳ, ಗೋಧಿ, ಆಲೂಗಡ್ಡೆಗಳ ಸಾಲಿನಲ್ಲಿ ಗೆಣಸು ಇರುವುದು ಕೂಡಾ ವಿಶೇಷ!

ಶಿವರಾತ್ರಿಯ ದಿನವೇ ಗೆಣಸನ್ನು ಏಕೆ ತಿನ್ನುತ್ತಾರೆ?: ಮಹಾ ಶಿವರಾತ್ರಿಯ ದಿನದಂದು ಭಕ್ತರು ಉಪವಾಸ ಮಾಡುತ್ತಾರೆ. ದಿನವಿಡಿ ಉಪವಾಸ ಇದ್ದು ಸಂಜೆ ವೇಳೆಗೆ ಅಂತ್ಯಗೊಳಿಸುತ್ತಾರೆ. ಹೀಗೆ ಉಪವಾಸ ಅಂತ್ಯಗೊಳಿಸಲು ಬೇಯಿಸಿದ ಸಿಹಿಗೆಣಸು ಸೇವಿಸುತ್ತಾರೆ. ಆದರೆ, ಇವುಗಳನ್ನು ತಿನ್ನುವುದರಿಂದ ಬೇಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಎನ್ನುತ್ತಾರೆ ತಜ್ಞರು. ಇದು ದೀರ್ಘಕಾಲದವರೆಗೆ ಶಕ್ತಿ ನೀಡುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಶಿವರಾತ್ರಿಯ ದಿನ, ಹೆಚ್ಚಿನವರು ಎಚ್ಚರದಿಂದ ಇದ್ದು, ಶಿವನ ಜಪ ಮಾಡುತ್ತಾರೆ. ಶಿವನಾಮ ಸ್ಮರಣೆ ಮಾಡಿ, ಆತನ ಕೃಪೆಗೆ ಪಾತ್ರರಾಗುತ್ತಾರೆ. ರಾತ್ರಿಯಿಡಿ ಎಚ್ಚರವಾಗಿರಲು ಸಿಹಿ ಗೆಣಸು ತಿನ್ನುವುದರಿಂದ ದೇಹದ ಮೇಲೆ ನಿದ್ರಾಹೀನತೆಯ ಪರಿಣಾಮ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಶಿವರಾತ್ರಿ ಉಪವಾಸ ಮಾಡುವವರು ಇದನ್ನು ತಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳುತ್ತಾರೆ ಅಂತಾರೆ ತಜ್ಞರು.

ಇದರಲ್ಲಿವೆ ಸಾಕಷ್ಟು ಪೋಷಕಾಂಶಗಳು!: ದೇಹದ ತೂಕ ಕಡಿಮೆ ಮಾಡಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಿಹಿ ಗೆಣಸು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಗೆಣಸನ್ನು ಮೂಲ ಆಹಾರ ಎಂದು ಕರೆಯುವುದುಂಟು. ಗೆಣಸು ಸೇವಿಸುವ ಮೂಲಕ ದೇಹವು ಅನೇಕ ಖನಿಜಗಳು ಮತ್ತು ವಿಟಮಿನ್​ ಗಳನ್ನು ಪಡೆಯುತ್ತದೆ. ವಿಶೇಷವಾಗಿ ಬೀಟಾ ಕ್ಯಾರೋಟಿನ್, ವಿಟಮಿನ್ ಎ, ಸಿ, ಇ, ಬಿ -6, ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶಗಳು ಗೆಣಸಿನಲ್ಲಿ ಕಂಡು ಬರುತ್ತವೆ ಎಂದು ತಜ್ಞರು ಹೇಳುತ್ತಾರೆ.

ಹಸುಳೆಗಳ ಪಕ್ಕಾ ಆಹಾರ: ಶಿಶುಗಳಿಗೆ ಪರಿಚಯಿಸಲಾಗುವ ಮೊದಲ ಆಹಾರದಲ್ಲಿ ಗೆಣಸನ್ನು ಖಂಡಿತವಾಗಿ ಸೇರಿಸಲೇಬೇಕು. ಮಕ್ಕಳಿಗೆ ಸೀಸನಲ್ ಕೆಮ್ಮು ಮತ್ತು ನೆಗಡಿ ಸಮಸ್ಯೆಗೆ ಇದು ಪರಿಹಾರ ಒದಗಿಸಬಲ್ಲದು. ಒಂದು ಗೆಣಸನ್ನು ಪ್ರತಿದಿನ ತಿನ್ನುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸುಧಾರಿಸುತ್ತದೆ.

ಸಿಹಿ ಗೆಣಸಿನ ಪ್ರಯೋಜನಗಳು!:

  • ಸಿಹಿಗೆಣಸಿನಲ್ಲಿರುವ ಫೈಬರ್ ಉದರದ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಆಹಾರದ ಜೀರ್ಣಕ್ರಿಯೆ ಇದು ಸುಲಭಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.
  • ಇದು ಸ್ನಾಯುಗಳ ಚಲನೆ ಮತ್ತು ಮೂಳೆಗಳ ಬಲವರ್ದನೆಗೆ ಸಹಾಯ ಮಾಡುತ್ತದೆ.
  • ಇದರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಆ್ಯಂಟಿ ಆಕ್ಸಿಡೆಂಟ್ ಗಳು ಅಧಿಕವಾಗಿವೆ. ಇದು ದೀರ್ಘಕಾಲದ ಕಾಯಿಲೆಗಳನ್ನು ಸಹ ತಡೆಯುತ್ತದೆ.
  • ಸಿಹಿಗೆಣಸಿನಲ್ಲಿರುವ ವಿಟಮಿನ್ ಎ, ಕಣ್ಣುಗಳನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹಲವಾರು ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ.
  • ಸಿಹಿ ಗೆಣಸನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ಇದರ ಪೊಟ್ಯಾಶಿಯಂ ಹೃದಯವನ್ನು ಆರೋಗ್ಯವಾಗಿಡುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
  • ಗರ್ಭಿಣಿಯರಿಗೆ ಸಿಹಿ ಗೆಣಸು ಉತ್ತಮ ಪೋಷಕಾಂಶವಾಗಿದೆ. ಇದು ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
  • ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಸಿಹಿ ಗೆಣಸನ್ನು ನಿಯಮಿತವಾಗಿ ಸೇವಿಸಬಹುದು. ಇದು ಕ್ಯಾಲೋರಿಗಳಲ್ಲಿ ಕಡಿಮೆ ಮತ್ತು ಹೆಚ್ಚಿನ ಫೈಬರ್ ಹೊಂದಿದೆ - ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಮಂದತೆಯನ್ನು ತಡೆಯುತ್ತದೆ.
  • ಸಿಹಿ ಗೆಣಸು ವಿಟಮಿನ್ ಬಿ-6 ನಲ್ಲಿ ಸಮೃದ್ಧವಾಗಿದೆ, ಇದು ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಾಗಿರುತ್ತದೆ. ಇದು ಒತ್ತಡ ಕಡಿಮೆ ಮಾಡಲು ಮತ್ತು ಸ್ಮರಣೆಯನ್ನು ಸುಧಾರಿಸಲು ಸಹ ಉಪಯುಕ್ತವಾಗಿದೆ!
  • ಸಿಹಿ ಗೆಣಸು ಕೂದಲು ಮತ್ತು ತ್ವಚೆಗೆ ತುಂಬಾ ಒಳ್ಳೆಯದು. ಇದರಲ್ಲಿ ಅಧಿಕವಾಗಿರುವ ವಿಟಮಿನ್ ಸಿ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಕಾಲಜನ್ ಉತ್ಪಾದನೆ ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹೆಚ್ಚಿನ ಪ್ರಮಾಣದ ವಿಟಮಿನ್ ಎ ಕೂದಲಿಗೆ ಬಲವನ್ನು ನೀಡುತ್ತದೆ ಮತ್ತು ತಲೆಹೊಟ್ಟು ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಸೂಚನೆ : ಸಿಹಿ ಗೆಣಸಿನ ಆರೋಗ್ಯ ಪ್ರಯೋಜನಗಳ ಕುರಿತು ಇಲ್ಲಿ ನೀಡಲಾದ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.