ETV Bharat / bharat

ರಸ್ತೆ ಬದಿ ಚಹಾ ಮಾರುತ್ತಿದ್ದ ವ್ಯಕ್ತಿ ಇಂದು ಫೈವ್​ ಸ್ಟಾರ್​​ ಹೋಟೆಲ್​ನಲ್ಲಿ ಟೀ ಕನ್ಸಲ್ಟಂಟ್! - A SUCCESS STORY OF TEA SELLER

ಶಿಕ್ಷಣವು ಕನಸಿನ ಹತ್ತಿರ ಕೊಂಡೊಯ್ಯುವ ಮಾರ್ಗ ಎಂಬುದು ಲಕ್ಷ್ಮಣ್​ ರಾವ್​ ಸಾಬೀತು ಮಾಡಿದ್ದಾರೆ. ಇಂದಿನ ತಮ್ಮ ಯಶಸ್ಸಿಗೆ ಶಿಕ್ಷಣದ ಮೇಲಿನ ಆಸಕ್ತಿಯೇ ಕಾರಣ ಎಂದಿದ್ದಾರೆ.

laxman-rao-tea-seller-to-working-in-five-star-hotel-in-delhi-know-about-his-journey
ಲಕ್ಷಣ್​ ರಾವ್ (ETV Bharat)
author img

By ETV Bharat Karnataka Team

Published : Feb 25, 2025, 3:29 PM IST

ನವದೆಹಲಿ : ಅಂದು ರಸ್ತೆ ಬದಿಯಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬ ಇಂದು ಫೈವ್​​ ಸ್ಟಾರ್​ ಹೋಟೆಲ್​ ಶ್ಯಾಂಗ್ರಿಲಾದಲ್ಲಿ ಟೀ ಕನ್ಸಲ್ಟಂಟ್​ ಆಗಿದ್ದಾರೆ. ಇದು ಲಕ್ಷ್ಮಣ್​ ರಾವ್​ ಅವರ ಯಶಸ್ಸಿನ ಕಥೆ. 40ನೇ ವಯಸ್ಸಿಗೆ 12ನೇ ತರಗತಿ ಪಾಸ್​ ಮಾಡಿ, 50ಕ್ಕೆ ಬಿಎ ಪದವಿ ಪಡೆದು 63ನೇ ವಯಸ್ಸಿಗೆ ಎಂಎ ಸ್ನಾತಕೋತ್ತರ ಪದವಿಯನ್ನು ಪಡೆದಿರುವುದು ಅವರ ಮತ್ತೊಂದು ಸಾಧನೆ. ಈ ಮೂಲಕ ಜೀನದ ಹೋರಾಟದಲ್ಲಿ ಶಿಕ್ಷಣದಲ್ಲಿ ಗೆಲುವು ಸಾಧಿಸಿ, ಜಗತ್ತಿಗೆ ಸ್ಪೂರ್ತಿಯಾಗಿದ್ದಾರೆ.

ಕನಸುಗಳಿಗಾಗಿ ಹೋರಾಟ : ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸಣ್ಣ ಗ್ರಾಮದಲ್ಲಿ 1952ರಲ್ಲಿ ಕಡುಬಡತನದ ಕುಟುಂಬದಲ್ಲಿ ಲಕ್ಷಣ ರಾವ್​ ಜನಿಸಿದರು. 10ನೇ ತರಗತಿ ಬಳಿಕ ಕುಟುಂಬದ ಜವಾಬ್ದಾರಿ ನಿರ್ವಹಣೆಗೆ ಓದು ಅರ್ಧಕ್ಕೆ ನಿಲ್ಲಿಸಿ, ಅಮರಾವತಿಯ ಗಿರಣಿಯಲ್ಲಿ ಕೆಲಸಕ್ಕೆ ಸೇರಿದರು. 1975ರಲ್ಲಿ ದೆಹಲಿಗೆ ಬಂದ ಇವರು ಮೊದಲು ಹೋಟೆಲ್​ನಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿದರು. ಇದಾದ ಬಳಿಕ ಐಟಿಒದಲ್ಲಿನ ವಿಷ್ಣು ದಿಗಂಬರ್​ ಮಾರ್ಗ್​​ನಲ್ಲಿ ಪಾನ್​ ಮತ್ತು ಟೀ ಶಾಪ್​ ತೆರೆದರು.

laxman-rao-tea-seller-to-working-in-five-star-hotel-in-delhi-know-about-his-journey
ಫೈವ್​ ಸ್ಟಾರ್​​ ಹೋಟೆಲ್​ನಲ್ಲಿ ಟೀ ಕನ್ಸಲ್ಟಂಟ್​ ಆಗಿರುವ ಲಕ್ಷ್ಮಣ್​ ರಾವ್​ (ETV Bharat)

ಫುಟ್​ಪಾತ್​ನಿಂದ ಫೈಸ್ಟಾರ್​ ಹೋಟೆಲ್​ವರೆಗೆ : ಟೀ ಮಾರಾಟ ಮಾಡುತ್ತಲೇ ಲಕ್ಷಣ್​ ರಾವ್​​ ಅಧ್ಯಯನ ಮುಂದುವರೆಸಿದರು. ಅವರ ಒಂದು ಲೇಖನವು ಹಾಂಗ್​ ಕಾಂಗ್​​ನಲ್ಲೂ ಪ್ರಕಟವಾಗಿದೆ. ಇದನ್ನು ಓದಿ ಪ್ರೇರಣೆಗೊಂಡ ಶ್ಯಾಂಗ್ರಿಲಾ ಹೋಟೆಲ್​ ಉಪಾಧ್ಯಕ್ಷರು ದೆಹಲಿಯಲ್ಲಿ ಇವರನ್ನು ಭೇಟಿಯಾಗಲು ಅಧಿಕಾರಿಗಳನ್ನು ಕಳುಹಿಸಿದ್ದರು. ಆರಂಭದಲ್ಲಿ ಲಕ್ಷ್ಮಣ್​ ರಾವ್​ಗೆ ಉದ್ಯೋಗದ ಆಫರ್​ ನೀಡಿದಾಗ ಅವರು ಅದನ್ನು ನಿರಾಕರಿಸಿದರು. ಹೀಗೆ ಮೂರು ಬಾರಿ ನಿರಾಕರಣೆ ಬಳಿಕ ನಾಲ್ಕನೇ ಬಾರಿ ಕೆಲಸಕ್ಕೆ ಒಪ್ಪಿಗೆ ನೀಡಿದ್ದಾರೆ. ಇದರ ಪರಿಣಾಮವಾಗಿ ಶ್ಯಾಂಗ್ರಿಲಾ ಹೋಟೆಲ್​ನಲ್ಲಿ ಟೀ ಕನ್ಸಲ್ಟಂಟ್​ ಆಗಿ ಕೆಲಸ ಮಾಡುತ್ತಿದ್ದು, ಅವರಿಗೆ ಗೌರವವನ್ನು ನೀಡಲಾಗುತ್ತಿದೆ.

ಉನ್ನತ ಸ್ಥಾನಕ್ಕೇರಿಸಿದ ಶಿಕ್ಷಣ : ಶಿಕ್ಷಣವೂ ಸ್ವಾಭಿಮಾನ, ಗೌರವ ಮತ್ತು ಗುರುತನ್ನು ನೀಡಿದೆ. 40ನೇ ವಯಸ್ಸಿನಲ್ಲಿ ನಾನು ಓದಲು ಶುರು ಮಾಡದಿದ್ದರೆ, ಇಂದು ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ಇರುತ್ತಿರಲಿಲ್ಲ. ಓದಿಗೆ ವಯಸ್ಸಿನ ಅಡ್ಡಿ ಇರುವುದಿಲ್ಲ. ಜೀವನದಲ್ಲಿ ಮುಂದೆ ಸಾಗಲು ಶಿಕ್ಷಣವನ್ನು ಅಪ್ಪಿಕೊಳ್ಳಬೇಕು. ಅದು ನಿಮ್ಮನ್ನು ಜಗತ್ತಿನಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದಿದ್ದಾರೆ.

ಕನಿಷ್ಠ ಶಿಕ್ಷಣದ ಅಗತ್ಯ : ಲಕ್ಷಣ್​ ರಾವ್​​ ಹೇಳುವಂತೆ, ನಾಯಕನಾಗಲು ಕನಿಷ್ಠ ಶಿಕ್ಷಣವನ್ನಾದರೂ ವ್ಯಕ್ತಿ ಪಡೆದಿರಬೇಕು. ಇದರಿಂದಲೇ ಸಮಾಜ ಮತ್ತು ದೇಶವನ್ನು ಬದಲಾಯಿಸಲು ಸಾಧ್ಯ ಎನ್ನುತ್ತಾರೆ.

ಲಕ್ಷಣ ರಾವ್​​ (ETV Bharat)

ಲಕ್ಷಣ್​ ರಾವ್​ ಕೇವಲ ತಮ್ಮನ್ನು ಮಾತ್ರ ಬದಲಾಯಿಸಿಕೊಂಡಿಲ್ಲ. ಕುಟುಂಬಕ್ಕೆ ಹೊಸ ದಿಕ್ಕನ್ನು ತೋರಿಸಿದ್ದಾರೆ. ಅವರ ಇಬ್ಬರು ಮಕ್ಕಳು ಎಂಬಿಎ ಪದವಿ ಪಡೆದಿದ್ದು, ಇಂದು ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಈ ಯಶಸ್ಸು ಹಲವರನ್ನು ಪ್ರೇರೇಪಿಸಿ, ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪ್ರೋತ್ಸಾಹಿಸುತ್ತಿದ್ದಾರೆ.

63ನೇ ವಯಸ್ಸಿಗೆ ಎಂಎ ಸ್ನಾತಕೋತ್ತರ ಪದವಿ ಪಡೆದಿರುವ ಲಕ್ಷ್ಮಣ್​ ರಾವ್​ (ETV Bharat)

ಜೀವನದಲ್ಲಿ ಎಂತಹ ಕಷ್ಟಗಳೇ ಎದುರಾದರೂ ಶಿಕ್ಷಣ ಅದಕ್ಕೆ ಅಸ್ತ್ರವಾಗಿದೆ. ಶಿಕ್ಷಣದಿಂದ ಎಲ್ಲಾ ಕಷ್ಟಗಳನ್ನು ಹಿಮ್ಮೆಟ್ಟಿಸಬಹುದು. ಶಿಕ್ಷಣದ ಕನಸಿಗೆ ಯಾವುದೇ ಮಿತಿ ಇಲ್ಲ ಎಂಬುದನ್ನು ಮರೆಯಬಾರದು ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿ ಲಕ್ಷ್ಮಣ್​ ರಾವ್​ ಇದ್ದಾರೆ.

ಇದನ್ನೂ ಓದಿ: ಸಾಲದಿಂದ ಮುಕ್ತಗೊಳಿಸಿದ ಕ್ಯಾಬೇಜ್ : ಮನೆ, ಬೈಕ್​, ಲಗ್ನ ಪತ್ರಿಕೆ ಮೇಲೆಯೂ "ಎಲ್ಲ ಕ್ಯಾಬೇಜ್ ಪುಣ್ಯದ ಫಲ" ಎಂಬ ತಲೆ ಬರಹ!

ಇದನ್ನೂ ಓದಿ: IIT ಹೈದರಾಬಾದ್​ನ ಮಿಷನ್​ 365;ನಿತ್ಯವೂ ಒಂದು ಪೇಟೆಂಟ್​ ಪಡೆಯುವ ಗುರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.