ಬೆಂಗಳೂರು/ಹೈದರಾಬಾದ್: ದೇಶದಲ್ಲಿ ಚಿನ್ನದ ದರ ಇಂದು ಮತ್ತೆ ಕೊಂಚ ಏರಿಕೆ ಕಂಡಿದ್ದು, ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ.
ಸೋಮವಾರ 10 ಗ್ರಾಂ ಚಿನ್ನಕ್ಕೆ 89,080 ರೂ ಇದ್ದ ದರ, ಮಂಗಳವಾರ 150 ರೂ ಹೆಚ್ಚಳ ಕಾಣುವ ಮೂಲಕ 89,230 ರೂಗೆ ಏರಿಕೆ ಕಂಡಿದೆ. ಇನ್ನು ಸೋಮವಾರ ಕೆಜಿ ಬೆಳ್ಳಿಗೆ 99,148 ರೂ ಇದ್ದದ್ದು, ಇಂದು 310 ರೂ ಇಳಿಕೆಯೊಂದಿಗೆ 98,838 ರೂ ಗೆ ಕುಸಿತ ಕಂಡಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ: 99.9 ಪ್ಯೂರಿಟಿಯ 10 ಗ್ರಾಂ ಬಂಗಾರದ ಬೆಲೆ 89233 ರೂ .ದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಒಂದು ಕೇಜಿ ಬೆಳ್ಳಿಗೆ ಇಂದು 97065 ರೂ. ದರವಿದೆ.
ಹೈದರಾಬಾದ್ನಲ್ಲಿ ಫೆ. 25ರಂದು ಚಿನ್ನದ ದರ: 10 ಗ್ರಾಂ ಚಿನ್ನದ ದರ 89,230 ರೂ ಇದ್ದರೆ, ಬೆಳ್ಳಿ ದರ ಕೆಜಿಗೆ 98.838 ರೂ ಇದೆ.
ಗಮನಿಸಿ: ಇಲ್ಲಿ ಉಲ್ಲೇಖ ಮಾಡಿರುವ ದರಗಳು ಬೆಳಗ್ಗೆ ಮಾರುಕಟ್ಟೆ ಆರಂಭದ ಬೆಲೆಗಳು ಆಗಿದ್ದು, ಇದು ನಂತರದ ಬೆಳವಣಿಗೆಯಲ್ಲಿ ಬದಲಾಗುವ ಸಾಧ್ಯತೆಗಳಿರುತ್ತವೆ ಎಂಬುದು ಗಮನದಲ್ಲಿರಲಿ.
ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡಿದ್ದು, ಸೋಮವಾರ ಒಂದು ಔನ್ಸ್ ಚಿನ್ನದ ದರ 2,941 ಡಾಲರ್ ಇದ್ದು, ಮಂಗಳವಾರ ಇದರ ದರದಲ್ಲಿ 2 ಡಾಲರ್ ಕುಸಿತದಿಂದ 2,939 ಡಾಲರ್ ದಾಖಲಾಗಿದೆ. ಬೆಳ್ಳಿ ದರ 32.42 ಡಾಲರ್ ದಾಖಲಾಗಿದೆ.
ಷೇರು ಮಾರುಕಟ್ಟೆ: ದೇಶಿ ಷೇರುಪೇಟೆ ಸೂಚ್ಯಂಕಗಳು ಮಂಗಳವಾರ ಸ್ಥಿರವಾಗಿ ಆರಂಭಗೊಂಡಿವೆ. ಮಾರುಕಟ್ಟೆಯಲ್ಲಿ ದುರ್ಬಲ ಸಂಕೇತಗಳ ನಡುವೆ ಹೂಡಿಕೆದಾರರು ಎಚ್ಚರಿಕೆಯಿಂದ ವರ್ತಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಏರಿಳಿತ ಕಂಡು ಬಂದಿದೆ. ಐಟಿ ಮತ್ತು ಮೆಟಲ್ ವಲಯದ ಷೇರುಗಳ ಖರೀದಿಯು ಸೂಚ್ಯಂಕಗಳ ಮೇಲೆ ಒತ್ತಡ ಹೆಚ್ಚಿಸಿದೆ.
ಐದು ವಹಿವಾಟುಗಳಲ್ಲಿ ಇಳಿಕೆ ಕಂಡಿದ್ದ ಮುಂಬೈ ಷೇರು ವಿನಿಮಯ ಸೂಚ್ಯಂಕ ಸೆನ್ಸೆನ್ಸ್ ನಲ್ಲಿ ಇಂದು 101 ಅಂಕಗಳ ಏರಿಕೆಯೊಂದಿಗೆ ಪ್ರಸ್ತುತ 75,555 ಅಂಕಗಳೊಂದಿಗೆ ವಹಿವಾಟು ಮುಂದುವರೆಸಿದೆ. ನಿಫ್ಟಿ 9 ಅಂಕಗಳ ಕುಸಿತದೊಂದಿಗೆ ವ್ಯವಹರಿಸುತ್ತಿದೆ.
ಲಾಭದಲ್ಲಿರುವ ಷೇರುಗಳು: ಎಂಅಂಡ್ಎಂ, ಝೊಮೊಟೊ ಮಾರುತಿ ಸುಜುಕಿ, ನೆಸ್ಲೆ ಇಂಡಿಯಾ, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಎಚ್ಯುಎಲ್, ಭಾರ್ತಿ ಏರ್‌ಟೆಲ್, ಕೋಟಕ್ ಮಹೀಂದ್ರಾ ಬ್ಯಾಂಕ್, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್
ನಷ್ಟದ ಷೇರುಗಳು: ಎಲ್ ಅಂಡ್ ಟಿ, ಪವರ್ ಗ್ರೀಡ್ ಕಾರ್ಪೊರೇಷನ್, ಎನ್ಟಿಪಿಸಿ, ಟಿಸಿಎಸ್, ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್, ಎಚ್ಸಿಎಲ್ ಟೆಕ್ನಾಲಜಿಸ್
ರೂಪಾಯಿ ಮೌಲ್ಯ: ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು 86.88 ರೂ ಇದೆ.
ಚಿನ್ನ- ಬೆಳ್ಳಿ ದರ ಏರಿಳಿತಕ್ಕೆ ಕಾರಣವಾಗಿರುವ ಅಂಶಗಳು:
ದೇಶಿಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳ ಏರಿಳಿತಕ್ಕೆ ಅನೇಕ ಕಾರಣಗಳಿವೆ. ಅವುಗಳೆಂದರೆ,
ಜಾಗತಿಕ ಬೇಡಿಕೆ: ಜಾಗತಿಕವಾಗಿ ಒಟ್ಟಾರೆಯಾಗಿ ಚಿನ್ನ ಮತ್ತು ಬೆಳ್ಳಿ ಬೇಡಿಕೆ ಹೆಚ್ಚಿದ್ದು, ಇದು ಕೂಡ ದರ ಬದಲಾವಣೆಯಲ್ಲಿ ಪ್ರಮುಖವಾಗಿದೆ.
ಕರೆನ್ಸಿ ಏರಿಳಿತ: ಕರೆನ್ಸಿಗಳ ಮೌಲ್ಯಗಳ ಬದಲಾವಣೆ ಅದರಲ್ಲೂ ವಿಶೇಷವಾಗಿ ಅಮೆರಿಕ ಡಾಲರ್ಗೆ ಹೋಲಿಕೆ ಮಾಡಿದರೆ ಚಿನ್ನ ಮತ್ತು ಬೆಳ್ಳಿಯನ್ನು ಹೂಡಿಕೆಯಾಗಿ ಇರಿಸುವುದರಿಂದ ಲಾಭ ಮಾಡಿಕೊಳ್ಳಬಹುದು ಎಂಬ ಹೂಡಿಕೆದಾರರ ಯೋಚನೆ.
ಬಡ್ಡಿ ದರಗಳು: ಹೆಚ್ಚಿನ ಬಡ್ಡಿದರಗಳು ಚಿನ್ನ ಮತ್ತು ಬೆಳ್ಳಿ ಮೇಲೆ ಹೆಚ್ಚಿನ ಹೂಡಿಕೆ ಮಾಡುವಂತೆ ಮಾಡಿದೆ.
ಸರ್ಕಾರಿ ನಿಯಮಗಳು: ಚಿನ್ನ ಮತ್ತು ಬೆಳ್ಳಿ ವ್ಯಾಪಾರಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳು ಮತ್ತು ನಿಯಮಗಳು ಬೆಲೆಗಳ ಮೇಲೆ ಪರಿಣಾಮ ಬೀರಬಹುದು.
ಜಾಗತಿಕ ಘಟನೆಗಳು: ಆರ್ಥಿಕ ಪರಿಸ್ಥಿತಿಗಳು, ಭೌಗೋಳಿಕ ರಾಜಕೀಯ ಘಟನೆಗಳು ಮತ್ತು ಇತರ ಜಾಗತಿಕ ಅಂಶಗಳು ಬೆಲೆಬಾಳುವ ಲೋಹಗಳ ಬೇಡಿಕೆ ಮತ್ತು ಬೆಲೆಯ ಮೇಲೆ ಪ್ರಭಾವ ಬೀರುತ್ತದೆ.
ಇದನ್ನೂ ಓದಿ: ನಿಮಗಿದು ಗೊತ್ತಾ..? 14.65 ಲಕ್ಷದವರೆಗಿನ ಸಂಬಳದ ಮೇಲೆಯೂ ನೀವು ತೆರಿಗೆ ಪಾವತಿಸಬೇಕಾಗಿಲ್ಲ; ಹೇಗೆ ಎಂದು ತಿಳಿಯಿರಿ!
ಇದನ್ನೂ ಓದಿ: ಇನ್ನೆರಡು ವರ್ಷಗಳಲ್ಲಿ 1.25 ಲಕ್ಷ ರೂಗೆ ಏರಿಕೆಯಾಗಲಿದೆ ಬಂಗಾರ!: ತಜ್ಞರ ಅಂದಾಜು, ಕಾರಣಗಳೇನು?