ETV Bharat / state

ರಾಯಚೂರು: ಮಲಿಯಾಬಾದ್​ ಸುತ್ತಲಿನ ಜನರ ನಿದ್ದಗೆಡಿಸಿದ್ದ ಚಿರತೆ ಸೆರೆ - LEOPARD CAPTURED

ತಿಂಗಳ ಹಿಂದೆಯೇ ಅರಣ್ಯ ಇಲಾಖೆ ಇಟ್ಟಿದ್ದ ಬೋನ್​ ಇದುವರೆಗೂ ಬಿದ್ದಿರದ ಚಿರತೆ ಇಂದು ಬೆಳಗಿನ ಜಾವ ಬೋನ್​ನೊಳಗೆ ಸೆರೆಯಾಗಿದೆ.

LEOPARD THAT DISTURBED PEOPLE AROUND MALIABAD CAPTURED
ಮಲಿಯಾಬಾದ್​ ಸುತ್ತಲಿನ ಜನರ ನಿದ್ದಗೆಡಿಸಿದ್ದ ಚಿರತೆ ಸೆರೆ (ETV Bharat)
author img

By ETV Bharat Karnataka Team

Published : Feb 25, 2025, 2:27 PM IST

Updated : Feb 25, 2025, 2:52 PM IST

ರಾಯಚೂರು: ಮಲಿಯಬಾದ್‌ ಗ್ರಾಮ ಹಾಗೂ ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ, ಅರಣ್ಯ ಇಲಾಖೆ ಇರಿಸಿದ್ದ ಬೋನ್‌ನಲ್ಲಿ ಇಂದು ಸೆರೆಯಾಗಿದೆ.

ಮಲಿಯಬಾದ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ, ಹಸುಗಳು, ಕುರಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕಿತ್ತು. ಅಲ್ಲದೇ ಹತ್ತಿರದಲ್ಲಿದ್ದ ಗೋ ಶಾಲೆಯಲ್ಲಿನ ಹಸುಗಳ ಮೇಲೂ ದಾಳಿ ನಡೆಸಿತ್ತು.

ಮಲಿಯಬಾದ್​ ಗುಡ್ಡದಲ್ಲಿ ಚಿರತೆ ವಾಸವಾಗಿದ್ದರಿಂದ ಗುಡ್ಡದ ಸುತ್ತಮುತ್ತಲಲ್ಲಿ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗುವುದು ಮತ್ತು ದನಕರುಗಳನ್ನು ಮೇಯಿಸಲು ಕರೆದುಕೊಂಡು ಹೋಗುವುದೇ ದೊಡ್ಡ ಸಮಸ್ಯೆಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ನಂತರ ಪರಿಶೀಲನೆ ನಡೆಸಿ, ಸಿಸಿ ಕ್ಯಾಮೆರಾಗಳು, ಡ್ರೋನ್ ಸಹಾಯದ ಮೂಲಕ ಚಿರತೆ ಓಡಾಟವನ್ನು ಪರಿಶೀಲನೆ ನಡೆಸಿ ಹಲವು ಕಡೆಗಳಲ್ಲಿ ಬೋನ್​ಗಳನ್ನು ಅಳವಡಿಸಲಾಗಿತ್ತು.

ಹಲವು ದಿನಗಳ ಹಿಂದೆ ಬೋನ್ ಅಳವಡಿಸಿದರೂ ಚಿರತೆ ಬೋನಿನೊಳಗೆ ಬಿದ್ದಿರಲಿಲ್ಲ. ಆದರೆ ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಬೊನಿನೊಳಗಡೆ ಸೆರೆ ಸಿಕ್ಕಿದ್ದು, ಟ್ರ್ಯಾಕ್ಟರ್​ನಲ್ಲಿ ಬೋನ್ ಸಮೇತ ಚಿರತೆಯನ್ನು ತೆಗೆದುಕೊಂಡು ಹೋಗುವಾಗ ಊರಿನ ಜನರು ಚಿರತೆ ನೋಡಲು ಮುಗಿಬಿದ್ದಿದ್ದರು.

ಸೆರೆ ಸಿಕ್ಕಿರುವ ಚಿರತೆ ಸುಮಾರು 4 ವರ್ಷದ ಗಂಡು ಚಿರತೆಯಾಗಿದೆ. ಸದ್ಯ ಕಮಲಾಪುರ ಮೃಗಾಲಯಕ್ಕೆ ರವಾನಿಸಲಾಗಿದೆ ಎಂದು ಡಿಎಫ್‌ಒ ಪ್ರವೀಣ್ ತಿಳಿಸಿದ್ದಾರೆ.

ಇದನ್ನೂ ಓದಿ: ಹಾವೇರಿ : ಕಾಲುವೆ ಪೈಪ್​​ಲೈನ್​ನಲ್ಲಿ ಅಡಗಿದ್ದ ಚಿರತೆ 8 ಗಂಟೆ ಕಾರ್ಯಾಚರಣೆ ಬಳಿಕ ಸೆರೆ- VIDEO

Last Updated : Feb 25, 2025, 2:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.