ETV Bharat / entertainment

'ನನಗೆ ಹೊಂದಿಕೆಯಾಗುವ ರಾಜನ ಆಗಮನ ನಿರೀಕ್ಷಿಸುತ್ತಿದ್ದೇನೆ': ನಿವೇದಿತಾ ಗೌಡ ಹೀಗಂದಿದ್ದು ಯಾರಿಗೆ? - NIVEDITHA GOWDA

ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ನಿವೇದಿತಾ ಗೌಡ ಅವರ ಹೊಸ ಪೋಸ್ಟ್​​ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

Niveditha Gowda, chandan shetty
ನಿವೇದಿತಾ ಗೌಡ, ಚಂದನ್​​ ಶೆಟ್ಟಿ (Photo: ETV Bharat)
author img

By ETV Bharat Entertainment Team

Published : Feb 25, 2025, 2:17 PM IST

ಸೋಷಿಯಲ್​ ಮೀಡಿಯಾ ಇನ್​​ಫ್ಲುಯೆನ್ಸರ್​ ಆಗೋದಂದ್ರೆ ಸುಲಭದ ಮಾತಲ್ಲ. ಅಭಿಮಾನಿಗಳ ಮೆಚ್ಚುಗೆ ಜೊತೆ ಜೊತೆಗೆ ವಿರೋಧಿಗಳ ಟ್ರೋಲ್​​ಗಳನ್ನೂ ಎದುರಿಸಬೇಕಾಗುತ್ತದೆ. ಎಲ್ಲವನ್ನೂ ಎದುರಿಸಿ, ಸೋಷಿಯಲ್​ ಮೀಡಿಯಾ ಸ್ಟಾರ್ ಅನ್ನೋ ಪಟ್ಟ ಗಿಟ್ಟಿಸಿಕೊಳ್ಳಬೇಕಾಗುತ್ತದೆ. ಹೀಗೆ ಕನ್ನಡದಲ್ಲಿ ವ್ಯಾಪಕವಾಗಿ ಗಮನ ಸೆಳೆದಿರುವ ಸಾಮಾಜಿಕ ಜಾಲತಾಣ ಪ್ರಭಾವಿ ಅಂದ್ರೆ ಅವರು ನಿವೇದಿತಾ ಗೌಡ. ಹೌದು, ಬಿಗ್​ ಬಾಸ್​ ಖ್ಯಾತಿಯ ನಿವೇದಿತಾ ಗೌಡ ತಮ್ಮದೇ ಆದ ಜನಪ್ರಿಯತೆ ಸಂಪಾದಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಇವರ ಹೊಸ ಪೋಸ್ಟ್​ ನೆಟ್ಟಿಗರನ್ನು ಬಹುವಾಗಿ ಸೆಳೆದಿದೆ.

ಹೊಸ ಇನ್​ಸ್ಟಾಗ್ರಾಮ್​​ ಪೋಸ್ಟ್​​ನಲ್ಲೇನಿದೆ? ತಮ್ಮ ಸುಂದರ ವಿಡಿಯೋ ಹಂಚಿಕೊಂಡಿರುವ ನಟಿ, ''ನನ್ನ ಬೆಸ್ಟ್​ ಫ್ರೆಂಡ್ ಚಿಂತನಾ ಲಹರಿಯನ್ನು​ ಎಷ್ಟು ಎತ್ತರಕ್ಕೆ ಏರಿಸಿದರೆಂದರೆ, ನಾನೀಗ ಸಿಂಹಾಸನ, ಕಿರೀಟ ಮತ್ತು ಅದಕ್ಕೆ ಹೊಂದಿಕೆಯಾಗುವ ಇಡೀ ರಾಜ್ಯವನ್ನೇ ಹೊಂದಿರುವ ವ್ಯಕ್ತಿ ನನ್ನೆದುರು ಬರಬೇಕೆಂದು ನಿರೀಕ್ಷಿಸುತ್ತಿದ್ದೇನೆ'' (My best friend set the bar so high that now I expect a man to come with a throne, a crown and a whole kingdom to match) ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರಿನ ಫೇಮಸ್​ ಒರಾಯನ್ ಮಾಲ್​ ಎದುರು ಕ್ಲಿಕ್ಕಿಸಿಕೊಂಡಿರುವಂತೆ ತೋರಿರುವ ವಿಡಿಯೋದಲ್ಲಿ ನಿವೇದಿತಾ ಗೌಡ ಬ್ಲ್ಯಾಕ್​ ಮಾರ್ಡನ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರ ಬೆಸ್ಟ್​ ಫ್ರೆಂಡ್​ ಸೆರೆ ಹಿಡಿದಿದ್ದಾರೆ. ಜೊತೆಗೆ ನಿವೇದಿತಾ ಅವರನ್ನು ದೇವತೆಗೆ ಹೋಲಿಸಿದ್ದಾರೆ.

ವಿಡಿಯೋ ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​ನಲ್ಲಿ ವೈರಲ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ ತಮ್ಮ ವಿಚ್ಛೇದನ ಘೋಷಿಸಿರುವ ನಿವೇದಿತಾ ಸದ್ಯ ರಾಜನ ಆಗಮನಕ್ಕೆ ಎದುರು ನೋಡುತ್ತಿದ್ದಾರೆ. ಹಾಗಾಗಿ ಅವರು ಮಾಜಿ ಪತಿ ಚಂದನ್​ ಶೆಟ್ಟಿ ಅವರ ಬಗ್ಗೆ ಮಾತನಾಡುತ್ತಿದ್ದಾರೋ ಅಥವಾ ಹೊಸ ಬದುಕಿನ ಆಸೆ ಹೊತ್ತಿದ್ದಾರೋ ಎಂಬ ಗೊಂದಲದಲ್ಲಿ ನೆಟ್ಟಿಗರಿದ್ದಾರೆ. ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ನಿವೇದಿತಾ ಗೌಡ ಚಂದನ್ ಶೆಟ್ಟಿ ವಿಚ್ಛೇದನ: ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಎಂದು ಜನಪ್ರಿಯತೆ ಸಂಪಾದಿಸಿದ್ದ ಬಿಗ್ ಬಾಸ್ ತಾರಾ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ 2024ರ ಜೂನ್​ 7ರಂದು ತಮ್ಮ ವಿಚ್ಛೇದನ ಘೋಷಿಸಿದರು. ಜೀವನ ಶೈಲಿ ವಿಭಿನ್ನವಾಗಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್​​ ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ವಿಶ್ವಾದ್ಯಂತ 11 ದಿನದಲ್ಲಿ 445 ಕೋಟಿ: ರಶ್ಮಿಕಾ ಹಿಟ್​ ಸಿನಿಮಾಗಳ ನಾಯಕಿ, ವಿಕ್ಕಿ ವೃತ್ತಿಜೀವನದಲ್ಲಿ ದಾಖಲೆ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 5ರಲ್ಲಿ ಮೊದಲು ಪರಿಚಿತರಾದರು. ಸ್ನೇಹ ಪ್ರೀತಿಗೆ ತಿರುಗಿತು. 2019ರಲ್ಲಿ ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಶೆಟ್ಟಿ ಅವರು ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. 2020ರಲ್ಲಿ ಹಸೆಮಣೆ ಏರಿದರು.‌ 'ರಾಜ-ರಾಣಿ' ಸೇರಿ ಹಲವು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ರೀಲ್ಸ್​​ಗಳನ್ನು ಮಾಡಿ ಗಮನ ಸೆಳೆದಿದ್ದರು. ಫೈನಲಿ, ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ 2024ರ ಜೂನ್​ನಲ್ಲಿ ಫುಲ್​​ಸ್ಟಾಪ್​ ಇಟ್ಟರು.

ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ನಟಿ ವೈಷ್ಣವಿ ಗೌಡ ಪವಿತ್ರ ಸ್ನಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.