Sea Food Health Benefits: ಹಕ್ಕಿ ಜ್ವರದಿಂದ ಕೋಳಿ ಮಾಂಸದ ಬೆಲೆ ಪಾತಾಳಕ್ಕೆ ಕುಸಿದಿದೆ. ಇದರ ಹಿನ್ನೆಲೆಯಲ್ಲಿ ಮೀನಿನ ಬೆಲೆ ಗಗನಕ್ಕೇರುತ್ತಿದೆ. ನದಿ ಹಾಗೂ ಕರಾವಳಿ ಪ್ರದೇಶಗಳಲ್ಲಿ ಬೆಲೆಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿದ್ದರೂ ಪಟ್ಟಣ ಹಾಗೂ ನಗರಗಳಲ್ಲಿ ಮೀನು ವ್ಯಾಪಾರಿಗಳು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಬೆಲೆಗಳ ವಿಷಯವನ್ನು ಬದಿಗಿಟ್ಟು, ಯಾವ ರೀತಿಯ ಮೀನು ನಿಜವಾಗಿಯೂ ಆರೋಗ್ಯಕ್ಕೆ ಉತ್ತಮ ಎಂಬುದು ನಿಮಗೆ ತಿಳಿದಿದೆಯೇ? ನದಿಗಳಲ್ಲಿ ಕಂಡುಬರುವ ಸಿಹಿನೀರಿನ ಮೀನುಗಳು ಹೆಚ್ಚು ಪೌಷ್ಟಿಕವಾಗಿದೆಯೇ ಅಥವಾ ಸಮುದ್ರದಲ್ಲಿರುವ ಉಪ್ಪು ನೀರಿನ ಮೀನುಗಳು ಹೆಚ್ಚು ಪೌಷ್ಟಿಕವಾಗಿದೆಯೇ?.

ಮಾಂಸಪ್ರಿಯರು ಹೆಚ್ಚು ಇಷ್ಟಪಡುವ ಆಹಾರವೆಂದರೆ ಅದು ಮೀನು. ಮಾಂಸಗಳಲ್ಲಿ ಮೀನು ಅತ್ಯಂತ ಪೌಷ್ಟಿಕ ಆಹಾರವಾಗಿದೆ. ತಿಂಗಳಿಗೆ ಹೆಚ್ಚು ಅಂದ್ರೆ ಎರಡು ಅಥವಾ ಮೂರು ಬಾರಿ ಚಿಕನ್ ಹಾಗೂ ಮಟನ್ ಸೇವಿಸಬೇಕು. ಆದರೆ, ಅದಕ್ಕಿಂತ ಹೆಚ್ಚು ಬಾರಿ ಮೀನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಜ್ಞರ ಮಾತು.
ಮೀನುಗಳಲ್ಲಿ ಹಲವು ವಿಧಗಳಿವೆ. ಕೆಲವರು ಅವುಗಳನ್ನು ಕಪ್ಪು ಮೀನು ಮತ್ತು ಬಿಳಿ ಮೀನು ಎಂದು ವರ್ಗೀಕರಿಸುತ್ತಾರೆ. ಇನ್ನು ಕೆಲವರು ಬಂಗುಡೆ ಮೀನು, ಕಟ್ಲಾ, ಜಿಲೆಬಿ, ಬುಲೆಟ್, ಟಾರ್ಲಿ, ಗೋಲ್ಡ್ ಮೀನು ಹಾಗೂ ಇತರೆ ಮೀನುಗಳ ಬಗ್ಗೆ ಮಾತನಾಡುತ್ತಾರೆ. ಜೊತೆಗೆ ಮೀನಿನ ಫ್ರೈ, ಮೀನಿನ ಕರಿ ಮತ್ತು ಮೀನಿನ ಸೂಪ್ ಇರುವಂತೆಯೇ ಮೀನಿನಲ್ಲಿಯೂ ಸಹ ವಿಧಗಳಿವೆ.
ಮುಖ್ಯವಾಗಿ ನದಿ ಮೀನು, ಕೊಳದ ಮೀನು, ಸಮುದ್ರ ಮೀನು ಮತ್ತು ಮಣ್ಣಿನ ಹೊಂಡಗಳಲ್ಲಿ ಕಂಡುಬರುವ ಮೀನುಗಳು ಸೇರಿದಂತೆ ಹಲವು ಬಗೆಯ ಮೀನುಗಳಿವೆ. ಅವೆಲ್ಲವನ್ನೂ ನದಿ ಮೀನು ಮತ್ತು ಸಮುದ್ರ ಮೀನು ಎಂದು ಎರಡು ಮುಖ್ಯ ವಿಧಗಳಾಗಿ ವಿಂಗಡಿಸಬಹುದು. ಸಿಹಿನೀರಿನ ಮೀನುಗಳಿಗಿಂತ ಉಪ್ಪುನೀರಿನ ಮೀನುಗಳು ಹೆಚ್ಚು ಪೌಷ್ಟಿಕವಾಗಿವೆ ಎಂದು ತಜ್ಞರು ತಿಳಿಸುತ್ತಾರೆ. ಮೀನುಗಳು ವಿವಿಧ ರೀತಿಯ ಪೋಷಕಾಂಶಗಳನ್ನು ಹೊಂದಿವೆ. ಮೀನುಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಮೀನುಗಳಲ್ಲಿ ಕಂಡುಬರುವ ಪ್ರಮುಖ ಪೋಷಕಾಂಶಗಳು:
- ಮೀನಿನಲ್ಲಿ ಕಂಡುಬರುವ ಉತ್ತಮ ಗುಣಮಟ್ಟದ ಪ್ರೋಟೀನ್ ಸ್ನಾಯುಗಳ ನಿರ್ಮಾಣ ಮತ್ತು ದುರಸ್ತಿಗೆ ಸಹಾಯ ಮಾಡುತ್ತದೆ.
- ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳ. ಇವು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.
- ಮೀನಿನಲ್ಲಿ ವಿಟಮಿನ್ ಡಿ, ವಿಟಮಿನ್ ಬಿ2 (ರಿಬೋಫ್ಲಾವಿನ್), ವಿಟಮಿನ್ ಬಿ12 ಮತ್ತು ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ಅಯೋಡಿನ್ ಹಾಗೂ ಮೆಗ್ನೀಸಿಯಮ್‌ನಂತಹ ಖನಿಜಗಳಿವೆ.
- ಮೀನು ಸೆಲೆನಿಯಮ್, ನಿಯಾಸಿನ್ ಮತ್ತು ಟೌರಿನ್‌ನಂತಹ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ಮೀನಿನಲ್ಲಿ ಕಂಡುಬರುವ ಉತ್ತಮ ಕೊಬ್ಬುಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.
ಸಿಹಿನೀರಿನ ಮೀನುಗಳಲ್ಲಿ ಪೋಷಕಾಂಶಗಳೇನು?: ನದಿ, ಸರೋವರಗಳು ಮತ್ತು ಕೊಳಗಳಲ್ಲಿ ಬೆಳೆಯುವ ಮೀನುಗಳು ಹುಳುಗಳು, ಸಸ್ಯಗಳು, ಪಾಚಿ ಹಾಗೂ ಕೀಟಗಳನ್ನು ತಿನ್ನುವ ಮೂಲಕ ಬೆಳೆಯುತ್ತವೆ. ಈ ರೀತಿಯ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಕಡಿಮೆ ಇರುತ್ತವೆ.

ಸಮುದ್ರ ಮೀನುಗಳಲ್ಲಿ ಅಧಿಕ ಪೌಷ್ಟಿಕಾಂಶ: ನದಿ ಮೀನುಗಳಿಗೆ ಹೋಲಿಸಿದರೆ ಸಮುದ್ರ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಹೆಚ್ಚಿರುತ್ತವೆ. ಸಾಲ್ಮನ್, ಟ್ಯೂನ್, ಮ್ಯಾಕೆರೆಲ್, ಸಾರ್ಡೀನ್ ಮತ್ತು ಹೆರಿಂಗ್‌ನಂತಹ ಸಣ್ಣ ಮೀನುಗಳು ದೊಡ್ಡ ಮೀನುಗಳಿಗಿಂತ ಹೆಚ್ಚು ಆರೋಗ್ಯಕರವಾಗಿವೆ. ಅವು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತವೆ. ನದಿ ಮೀನುಗಳಿಗಿಂತ ಸಮುದ್ರ ಮೀನುಗಳಲ್ಲಿ ಹೆಚ್ಚಿನ ಉಪ್ಪು ಇರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.