Nothing Phone 3a Series Launch: ನಥಿಂಗ್ ಫೋನ್ 3ಎ ಸೀರಿಸ್ ಮಾರ್ಚ್ 4ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಲೋಕಾರ್ಪಣೆಗೊಳ್ಳಲಿದೆ. ಕಂಪನಿಯು ಈ ಸೀರಿಸ್ನಲ್ಲಿ 'ನಥಿಂಗ್ ಫೋನ್ 3ಎ' ಮತ್ತು 'ನಥಿಂಗ್ ಫೋನ್ 3ಎ ಪ್ರೊ' ಎಂಬ ಎರಡು ಫೋನ್‌ಗಳನ್ನು ಪರಿಚಯಿಸಬಹುದು.
ಕಂಪನಿ ಕೆಲವು ವಾರಗಳ ಹಿಂದೆ ಈ 'ನಥಿಂಗ್ ಫೋನ್ 3ಎ' ಸೀರಿಸ್ ಬಿಡುಗಡೆಯನ್ನು ಘೋಷಿಸಿತ್ತು. ಈ ವೇಳೆ ತನ್ನ ಕ್ಯಾಮೆರಾ ಡಿಸೈನ್ ಬಹಿರಂಗಪಡಿಸಿತ್ತು. ಇದೀಗ ಮುಂಬರುವ ಫೋನ್ ಸೀರಿಸ್ ಡಿಸೈನ್ ಅನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ.
Meet Phone (3a) Series. First hands-on experience with NEO Gamma.@1x_tech pic.twitter.com/U7vuinDVR7
— Nothing (@nothing) February 24, 2025
ಫೋನ್ 3ಎ ಸೀರಿಸ್ ಟೀಸರ್: ನಥಿಂಗ್ ತನ್ನ ಹೊಸ ಸೀರಿಸ್ನ ಟೀಸರ್ ಅನ್ನು ಅದರ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಈ ಪೋಸ್ಟ್ ಫೋನಿನ ರಿಯರ್ ಡಿಸೈನ್ ಅನ್ನು ಬಹಿರಂಗಪಡಿಸುತ್ತದೆ. ಫೋನ್‌ನ ಹಿಂಭಾಗದ ಮಧ್ಯದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಕಾಣಬಹುದು. ನಥಿಂಗ್ ಹಳೆಯ ಮಾದರಿಯ ಫೋನ್‌ಗಳಲ್ಲಿರುವಂತೆ ಮೂರು ಗ್ಲಿಫ್ ಎಲ್‌ಇಡಿಗಳೊಂದಿಗೆ ಬರುತ್ತಿದೆ.
ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಮೂರು ಕ್ಯಾಮೆರಾ ಸೆನ್ಸರ್‌ಗಳಿವೆ. ಇದು ಪೆರಿಸ್ಕೋಪ್ ಲೆನ್ಸ್ ಹೊಂದಿರುವ ಕ್ಯಾಮೆರಾ ಸೆನ್ಸಾರ್ ಜೊತೆ ಬರುತ್ತಿದೆ. ಫೋನ್‌ನ ಹಿಂಭಾಗದಲ್ಲಿ LED ಫ್ಲ್ಯಾಷ್ ಯುನಿಟ್ ಇದೆ. ಇವುಗಳ ಜೊತೆಗೆ ಈ ಫೋನಿನ ಬಲಭಾಗದಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಕಾಣಬಹುದು. ಕಂಪನಿ ತನ್ನ ಅಧಿಕೃತ ವಿಡಿಯೋವೊಂದರಲ್ಲಿ, 'ನಥಿಂಗ್ ಫೋನ್ 3ಎ' ಸೀರಿಸ್ನ ಗ್ಲಾಸ್ನ ಬ್ಯಾಕ್ ಪ್ಯಾನೆಲ್ ಜೊತೆ ಬರಲಿದೆ ಎಂದು ದೃಢಪಡಿಸಿದೆ.
ನಥಿಂಗ್ ಫೋನ್ 3ಎ ಸರಣಿಯ ವಿಶೇಷತೆಗಳು: 'ನಥಿಂಗ್ ಫೋನ್ 3ಎ' ಸೀರಿಸ್ನ ಟೀಸರ್ ಪ್ರಕಾರ, ಕಂಪನಿಯು ಈ ಸೀರಿಸ್ನ ಉನ್ನತ-ಮಟ್ಟದ ಮಾದರಿಯಾದ 'ನಥಿಂಗ್ ಫೋನ್ 3ಎ ಪ್ರೊ' ಮಾದರಿಯಲ್ಲಿ ಮಾತ್ರ ಪೆರಿಸ್ಕೋಪ್ ಕ್ಯಾಮೆರಾವನ್ನು ಒದಗಿಸುವ ಸಾಧ್ಯತೆಯಿದೆ. ಫೋನ್ ರಿಯರ್ನಲ್ಲಿ 50MP ಪ್ರೈಮೇರಿ ಸೆನ್ಸಾರ್ ಹೊಂದಿರುತ್ತದೆ ಎಂದು ಕಂಪನಿ ಈಗಾಗಲೇ ಬಹಿರಂಗಪಡಿಸಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ ಬರುತ್ತದೆ.
ಫೋನ್‌ನ ಸೆಕೆಂಡ್ ರಿಯರ್ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್‌ನೊಂದಿಗೆ ಬರುತ್ತದೆ. ಇದರ ಮೂರನೇ ಕ್ಯಾಮೆರಾ 50MP ಸೋನಿ ಪೆರಿಸ್ಕೋಪ್ ಲೆನ್ಸ್‌ನೊಂದಿಗೆ OIS ಬೆಂಬಲದೊಂದಿಗೆ ಬರುತ್ತದೆ. ಇವುಗಳ ಜೊತೆಗೆ ಕಂಪನಿ ಸೆಲ್ಫಿಗಳು ಮತ್ತು ವಿಡಿಯೋ ಕಾಲ್ಗಾಗಿ ಈ ಫೋನ್‌ನಲ್ಲಿ 50MP ಫ್ರಂಟ್ ಕ್ಯಾಮೆರಾ ಸಹ ನೀಡಬಹುದು.
Phone (3a) Series.
— Nothing (@nothing) February 24, 2025
Where technical intricacy meets purity. The essence of Nothing. pic.twitter.com/02UEwkgROl
ಈ ಸೀರಿಸ್ ಮೂಲ ಮಾದರಿ ‘ನಥಿಂಗ್ ಫೋನ್ 3ಎ’ನಲ್ಲಿ ಕಂಪನಿಯು ಮೂರು ರಿಯರ್ ಕ್ಯಾಮೆರಾಗಳನ್ನು ನೀಡಲಿದೆ ಎಂದು ತೋರುತ್ತದೆ. ಈ ಸೀರಿಸ್ನ ಎರಡೂ ಮಾದರಿಗಳು ಪ್ರೊಸೆಸರ್‌ಗಾಗಿ ಸ್ನಾಪ್‌ಡ್ರಾಗನ್ 7s Gen 3 SoC ಚಿಪ್‌ಸೆಟ್ ಒಳಗೊಂಡಿರಬಹುದು. ಈ ಎರಡೂ ಫೋನ್ ಮಾದರಿಗಳು ನಥಿಂಗ್ಸ್ ನಥಿಂಗ್ ಓಎಸ್ 3 ನಲ್ಲಿ ಕಾರ್ಯನಿರ್ವಹಿಸಬಹುದು. ಇದು ಬಹುಶಃ ಗೂಗಲ್‌ನ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ 'ಆಂಡ್ರಾಯ್ಡ್ 15' ಅನ್ನು ಆಧರಿಸಿದೆ.
ಇದನ್ನೂ ಓದಿ: ಸೂರ್ಯನಿಗೆ PUNCH? ಹೊಸ ಯೋಜನೆಯೊಂದಿಗೆ ಸಜ್ಜಾದ ನಾಸಾ: ಏನಿದರ ಪ್ರಯೋಜನ?