ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಅಭಿನಯದ 'ಛಾವಾ' ಚಿತ್ರ ಎರಡನೇ ವಾರದಲ್ಲೂ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರವು ಪ್ರಮುಖ ಹಿಟ್ ಎಂದು ಸಾಬೀತಾಗಿದ್ದು, ಬಾಲಿವುಡ್ ಬಾಕ್ಸ್ ಆಫಿಸ್ ಹಾದಿಯನ್ನು ಹುರಿದುಂಬಿಸಿದೆ. ಎರಡನೇ ಸೋಮವಾರದ ಅದ್ಭುತ ಪ್ರದರ್ಶನದಿಂದಾಗಿ, 'ಛಾವಾ' ಜಾಗತಿಕವಾಗಿ 450 ಕೋಟಿ ರೂ. ಸಮೀಪಿಸಿದೆ. ಈ ಮೂಲಕ 2025ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಿತ್ರ ಮತ್ತು ವರ್ಷದ ಅತಿದೊಡ್ಡ ಭಾರತೀಯ ಹಿಟ್ ಆಗಿದ್ದು, ಬಾಲಿವುಡ್ ಗೆಲುವಿನ ನಗೆ ಬೀರಿದೆ.
11ನೇ ದಿನದ ಛಾವಾ ಬಾಕ್ಸ್ ಆಫೀಸ್ ಕಲೆಕ್ಷನ್: ಎರಡನೇ ಸೋಮವಾರದಂದು, ಛಾವಾ ಭಾರತದಲ್ಲಿ 18.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 345.25 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಎರಡನೇ ವಾರಾಂತ್ಯ ಅಂದರೆ ಶನಿವಾರ ಈ ಚಿತ್ರ 44 ಕೋಟಿ ರೂ. ಮತ್ತು ಭಾನುವಾರ 40 ಕೋಟಿ ರೂ. ಗಳಿಸಿತ್ತು. ಫೆಬ್ರವರಿ 14 ರಂದು 31 ಕೋಟಿ ರೂಪಾಯಿಯೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಸಿನಿಮಾ, ತನ್ನ ಮೊದಲ ವಾರದಲ್ಲಿ 219.25 ಕೋಟಿ ರೂ. ಗಳಿಸಿತ್ತು. ಫೆಬ್ರವರಿ 24, ಸೋಮವಾರದಂದು ಈ ಚಿತ್ರವು ಥಿಯೇಟರ್ಗಳಲ್ಲಿ ಶೇ.23.64%ರಷ್ಟು ಆಕ್ಯುಪೆನ್ಸಿ ಹೊಂದಿತ್ತು.
ದಿನ/ವಾರ | ಇಂಡಿಯಾ ನೆಟ್ ಕಲೆಕ್ಷನ್ |
ಮೊದಲ ವಾರ | 219.25 ಕೋಟಿ ರೂಪಾಯಿ. |
ಎಂಡನೇ ದಿನ | 23.5 ಕೋಟಿ ರೂಪಾಯಿ. |
ಒಂಭತ್ತನೇ ದಿನ | 44 ಕೋಟಿ ರೂಪಾಯಿ. |
ಹತ್ತನೇ ದಿನ | 40 ಕೋಟಿ ರೂಪಾಯಿ. |
ಹನ್ನೊಂದನೇ ದಿನ | 18.50 ಕೋಟಿ ರೂಪಾಯಿ (ಆರಂಭಿಕ ಅಂದಾಜು). |
ಒಟ್ಟು | 345.25 ಕೋಟಿ ರೂಪಾಯಿ. |
(ಬಾಕ್ಸ್ ಆಫೀಸ್ ಡಾಟಾ ಮೂಲ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್).
After delivering a phenomenal performance in its second weekend, #Chhaava continues its triumphant run with a rock-solid second Monday.
— taran adarsh (@taran_adarsh) February 25, 2025
While *most* films tend to slow down on weekdays, #Chhaava defies the trend, holding strong at the #Boxoffice... With strong evening and night… pic.twitter.com/8FS5yJYIPN
ಪ್ರಧಾನಿ ಮೋದಿ ಮೆಚ್ಚುಗೆ: ಶಿವಾಜಿ ಸಾವಂತ್ ಅವರ ಮರಾಠಿ ಕಾದಂಬರಿಯನ್ನಾಧರಿಸಿದ ಈ ಚಿತ್ರದಲ್ಲಿ ಡಯಾನಾ ಪೆಂಟಿ, ದಿವ್ಯಾ ದತ್ತಾ ಮತ್ತು ಅಶುತೋಷ್ ರಾಣಾ ಕೂಡಾ ನಟಿಸಿದ್ದಾರೆ. ದೆಹಲಿಯಲ್ಲಿ ನಡೆದ 98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸಿನಿಮಾ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. 130 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡ 'ಛಾವಾ' ಜಾಗತಿಕವಾಗಿ ಒಟ್ಟು 444.5 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ವಿಡಿಯೋ: ಮಹಾ ಕುಂಭಮೇಳದಲ್ಲಿ ಕತ್ರಿನಾ ಕೈಫ್, ಅಕ್ಷಯ್ ಕುಮಾರ್; ಸಿಎಂ ಯೋಗಿಗೆ ಧನ್ಯವಾದ
ಸತತ ನಾಲ್ಕನೇ ಬ್ಲಾಕ್‌ಬಸ್ಟರ್ ಹಿಟ್ ಕಂಡ ರಶ್ಮಿಕಾ: ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ಬಹುಬೇಡಿಕೆ ಹೊಂದಿರುವ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿಜೀವನದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಸಿಕಂದರ್, ಕುಬೇರ ಸೇರಿದಂತೆ ಹಲವು ಬಹುನಿರೀಕ್ಷಿತ ಚಿತ್ರಗಳು ನಟಿಯ ಕೈಯಲ್ಲಿವೆ. ಛಾವಾ ಯಶಸ್ಸು ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರಾಗಿ ಅವರ ಸ್ಥಾನವನ್ನು ಭದ್ರಪಡಿಸಿದೆ. ಛಾವಾ ಚಿತ್ರದ ಯಶಸ್ಸಿನೊಂದಿಗೆ, ವರಿಸು (2023), ಅನಿಮಲ್ (2023) ಮತ್ತು ಪುಷ್ಪ 2: ದಿ ರೂಲ್ (2024) ನಂತರ ಸತತ ನಾಲ್ಕನೇ ಬ್ಲಾಕ್‌ಬಸ್ಟರ್ ಹಿಟ್ ಕಂಡಿದ್ದಾರೆ. ಇನ್ನೂ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್ ಅವರ ವೃತ್ತಿಜೀವನ ಗಮನಿಸೋದಾದರೆ, ಭಾರತದಲ್ಲಿ 300 ಕೋಟಿ ರೂಪಾಯಿ ಗಡಿ ದಾಟಿದ ಅವರ ಮೊದಲ ಸಿನಿಮಾ ಇದಾಗಿದೆ.
ಇದನ್ನೂ ಓದಿ: 'ಎನ್ಟಿಆರ್ನೀಲ್' ಸಿನಿಮಾದ ಬಂಡವಾಳ ಇಷ್ಟೊಂದಾ! ಮೊದಲ ದೃಶ್ಯಕ್ಕೇ 3,000 ಕಲಾವಿದರು