Jio vs Airtel vs Vi vs BSNL: ಟೆಲಿಕಾಂ ಸರ್ವೀಸ್ಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ (ವಿಐ) ಮತ್ತು ಬಿಎಸ್‌ಎನ್‌ಎಲ್ ಇತ್ತೀಚೆಗೆ ತಮ್ಮ ರೀಚಾರ್ಜ್ ಯೋಜನೆಗಳನ್ನು ಅಪ್ಡೇಟ್ ಮಾಡಿವೆ. ಇದರರ್ಥ ಪ್ರಿಪೇಯ್ಡ್ ಯೋಜನೆಯಲ್ಲಿ ಸಿಮ್ ಕಾರ್ಡ್ ಅನ್ನು ಸಕ್ರಿಯವಾಗಿಡುವ ವೆಚ್ಚ ಮೊದಲಿಗಿಂತ ಗಮನಾರ್ಹವಾಗಿ ಕಡಿಮೆ.
ಅತ್ಯಂತ ಅಗ್ಗದ ರೀಚಾರ್ಜ್ ಯೋಜನೆಗಳು ಇವು!:
ಜಿಯೋ ರೂ.189 ಯೋಜನೆ: ನೀವು ಜಿಯೋ ಬಳಕೆದಾರರಾಗಿದ್ದರೆ ನಿಮ್ಮ ಸಿಮ್ ಅನ್ನು ಸಕ್ರಿಯವಾಗಿಡಲು 189 ರೂ ರೀಚಾರ್ಜ್ ಯೋಜನೆ ಅತ್ಯಂತ ಕೈಗೆಟುಕುವ ಆಯ್ಕೆ. ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್, 300 ಮೆಸೇಜ್ ಮತ್ತು 2GB ಡೇಟಾ ನೀಡುತ್ತದೆ. ಹೆಚ್ಚುವರಿಯಾಗಿ JioTV, JioCloudನಂತಹ Jio ಅಪ್ಲಿಕೇಶನ್‌ಗಳಿಗೆ ಎಂಟ್ರಿ ನೀಡುತ್ತದೆ.
ಏರ್‌ಟೆಲ್ 199 ರೂ ಯೋಜನೆ: ಏರ್‌ಟೆಲ್ ಬಳಕೆದಾರರು ತಮ್ಮ ಸಿಮ್ ಅನ್ನು ಸಕ್ರಿಯವಾಗಿಡಲು ಅತ್ಯಂತ ಕೈಗೆಟುಕುವ ರೀಚಾರ್ಜ್ ಯೋಜನೆ 199 ರೂ. ಇದು ರಿಲಯನ್ಸ್ ಜಿಯೋದ ಅಗ್ಗದ ಯೋಜನೆಗಿಂತ ಕೇವಲ 10 ರೂ.ಕ್ಕಿಂತ ಹೆಚ್ಚು ದುಬಾರಿ. ಮಾನ್ಯತೆ ಜಿಯೋದಂತೆಯೇ 28 ದಿನ. ಗ್ರಾಹಕರು ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್ ಮತ್ತು ದಿನಕ್ಕೆ 100 ಮೆಸೇಜ್ಗಳನ್ನು ಪಡೆಯಲಿದ್ದಾರೆ. ಇದಲ್ಲದೇ ಒಟ್ಟು 2GB ಡೇಟಾ ಕೂಡಾ ಸಿಗುತ್ತದೆ.
ವೊಡಾಫೋನ್ ಐಡಿಯಾ(ವಿಐ): ವಿಐ ಬಳಕೆದಾರರಿಗೆ ಅತ್ಯಂತ ಕೈಗೆಟುಕುವ ರೀಚಾರ್ಜ್ ಯೋಜನೆಯು ಗ್ರಾಹಕರ ಸ್ಥಳವನ್ನು ಅವಲಂಬಿಸಿ ಬೆಲೆಯೂ ಬದಲಾಗುತ್ತದೆ. ಕೆಲವು ವಲಯಗಳಲ್ಲಿ 99 ರೂ ರೀಚಾರ್ಜ್ ಯೋಜನೆ ಇದೆ. ಇನ್ನು ಕೆಲವು ಪ್ರದೇಶಗಳಲ್ಲಿ 155 ರೂಪಾಯಿಗಳ ಯೋಜನೆ ಇದೆ. ಇವುಗಳಲ್ಲಿ 99 ರೂ ರೀಚಾರ್ಜ್ ಯೋಜನೆಯು 15 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ 500MB ಡೇಟಾ, 99 ರೂ ಟಾಕ್ ಟೈಮ್ ಮತ್ತು ಪ್ರಮಾಣಿತ ದರಗಳಲ್ಲಿ 1900ಗೆ ಪೋರ್ಟ್-ಔಟ್ ಮೆಸೇಜ್ ಕಳುಹಿಸುವ ಸಾಮರ್ಥ್ಯವನ್ನು ಹೊರತುಪಡಿಸಿ ಯಾವುದೇ ಮೆಸೇಜ್ ಪ್ರಯೋಜನಗಳಿಲ್ಲ. 155 ರೂ ರೀಚಾರ್ಜ್ ಯೋಜನೆಯು 20 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯು ಅನ್ಲಿಮಿಟೆಡ್ ಕಾಲ್ಸ್ ಕಾಲಿಂಗ್ಸ್, 300 ಮೆಸೇಜ್ ಮತ್ತು ಇಂಟರ್ನೆಟ್ ಬ್ರೌಸಿಂಗ್‌ಗಾಗಿ 1GB ಡೇಟಾ ನೀಡುತ್ತದೆ.
BSNL 59 ರೂ ಯೋಜನೆ: ಎಲ್ಲಕ್ಕಿಂತ ಹೆಚ್ಚಾಗಿ ಬಿಎಸ್‌ಎನ್‌ಎಲ್ ಏಳು ದಿನಗಳ ಮಾನ್ಯತೆಯೊಂದಿಗೆ ಅತ್ಯಂತ ಕೈಗೆಟುಕುವ ರೀಚಾರ್ಜ್ ಯೋಜನೆಯನ್ನು 59 ರೂ.ಗೆ ನೀಡುತ್ತದೆ. ಈ ರೀಚಾರ್ಜ್ ಯೋಜನೆಯು ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್ ಮತ್ತು 1GB ದೈನಂದಿನ ಡೇಟಾವನ್ನು ನೀಡುತ್ತದೆ. ಆದ್ರೂ ನೀವು ರೀಚಾರ್ಜ್ ಯೋಜನೆಯನ್ನು ಸ್ವಲ್ಪ ಸಮಯದವರೆಗೆ ವಿಸ್ತರಿಸಲು ಬಯಸಿದರೆ, ನೀವು 99 ರೂ.ಗೆ ರೀಚಾರ್ಜ್ ಮಾಡಬಹುದು. ಇದು 17 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಆದರೂ ಕಂಪನಿಯು ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕಾಲ್ಸ್ ಮಾತ್ರ ನೀಡುತ್ತದೆ. ಈ ಯೋಜನೆಯು ಮೆಸೇಜ್ ಮತ್ತು ಡೇಟಾದಂತಹ ಇತರ ಪ್ರಯೋಜನಗಳೊಂದಿಗೆ ಬರುವುದಿಲ್ಲ.
ಯಾವುದು ಉತ್ತಮ ರೀಚಾರ್ಜ್ ಪ್ಲಾನ್?: ಬಿಎಸ್‌ಎನ್‌ಎಲ್ 59 ರೂ ಯೋಜನೆಯು ಅತ್ಯಂತ ಕೈಗೆಟುಕುವ ರೀಚಾರ್ಜ್ ಯೋಜನೆಯಾಗಿದೆ. ಆದರೆ ಇದು ಕೇವಲ ಒಂದು ವಾರದವರೆಗೆ ಮಾನ್ಯವಾಗಿರುತ್ತದೆ. ಜಿಯೋದ 189 ರೂ. ರೀಚಾರ್ಜ್ ಪ್ಲಾನ್ ಒಂದು ತಿಂಗಳಿಗೆ ಆಗಿದ್ದು, ಇದು ಏರ್‌ಟೆಲ್‌ನ 199 ರೂ. ಗಿಂತ ಅಗ್ಗವಾಗಿದೆ. ಆದರೆ ಈ ಏರ್‌ಟೆಲ್ ಯೋಜನೆಯು ಜಿಯೋಗೆ ಹೋಲಿಸಿದರೆ ಹೆಚ್ಚಿನ ದೈನಂದಿನ ಮೆಸೇಜ್ಗಳನ್ನು ನೀಡುತ್ತದೆ. ಗಮನಿಸಬೇಕಾದ ಅಂಶವೆಂದರೆ ವಿಐಯ 99 ರೂ. ರೀಚಾರ್ಜ್ ಯೋಜನೆಯು ಖಾಸಗಿ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಅತ್ಯಂತ ಅಗ್ಗವಾಗಿದೆ. ಆದರೆ ಇದು ಕನಿಷ್ಠ ಪ್ರಯೋಜನಗಳನ್ನು ಮಾತ್ರ ನೀಡುತ್ತದೆ.
ಇದನ್ನೂ ಓದಿ: MyJio ಆ್ಯಪ್ ಇನ್ಮುಂದೆ ಬರೀ ರೀಚಾರ್ಜ್ಗೆ ಮಾತ್ರವಲ್ಲ, ಕರೆಂಟ್ ಬಿಲ್ ಕಟ್ಟುವುದಕ್ಕೂ ಸಹಕಾರಿ