ETV Bharat / technology

ನೀರಿನಲ್ಲಿ ಬಿದ್ರೂ ಭಯ ಪಡುವ ಆತಂಕವಿಲ್ಲ; ಜಬರ್ದಸ್ತ್​ ವಾಟರ್​ಪ್ರೂಫ್​, ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ ರಿಯಲ್​ಮಿ 14ಎಕ್ಸ್ ಫೋನ್​ - REALME 14X 5G PRICE REVEAL

Realme 14x 5G: ಅತೀ ಶೀಘ್ರದಲ್ಲೇ Realme 14x 5G ಸ್ಮಾರ್ಟ್​ಫೋನ್​ ದೇಶಿಯ ಮಾರುಕಟ್ಟೆಗೆ ಕಾಲಿಡಲಿದೆ. 45W ಸ್ಪೀಡ್​ ಚಾರ್ಜಿಂಗ್ ಸಪೋರ್ಟ್​ನೊಂದಿಗೆ 6000mAh ಬ್ಯಾಟರಿವುಳ್ಳ ವಿಭಾಗದಲ್ಲಿ ಇದು ಮೊದಲ ಫೋನ್ ಎಂದು ಕಂಪನಿ ಹೇಳಿಕೊಂಡಿದೆ.

REALME 14X 5G  REALME 14X 5G PRICE  REALME 14X 5G FEATURES  REALME 14X 5G DETAILS
ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ ರಿಯಲ್​ಮಿ 14ಎಕ್ಸ್ ಫೋನ್​ (Photo Credit: Realme)
author img

By ETV Bharat Tech Team

Published : 3 hours ago

Realme 14x 5G : ಇನ್ನು ಕೆಲವೇ ದಿನಗಳಲ್ಲಿ ರಿಯಲ್​ಮಿ 14ಎಕ್ಸ್​ 5ಜಿ ಸ್ಮಾರ್ಟ್​ಫೋನ್​ ಜನರ ಕೈ ಸೇರಲಿದೆ. ಈ ಫೋನ್​ ದೇಶಿಯ ಮಾರುಕಟ್ಟೆಗೆ ಡಿಸೆಂಬರ್ 18 ರಂದು ಪ್ರವೇಶಿಸಲಿದೆ. ಬಿಡುಗಡೆಗೂ ಮುನ್ನ ಕಂಪನಿ ತನ್ನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿರುವುದು ಗೊತ್ತಿರುವ ಸಂಗತಿ. 6000mAh ಬ್ಯಾಟರಿಯುಳ್ಳ ವಿಭಾಗದಲ್ಲಿ ಇದು ಮೊದಲ ಫೋನ್ ಎಂದು ಕಂಪನಿ ಮಾಹಿತಿ ನೀಡಿದೆ.

ರಿಯಲ್​ಮಿ ಭಾರತದಲ್ಲಿ ತನ್ನ ಹೊಸ ಫೋನ್ ಬಿಡುಗಡೆ ಮಾಡಲು ಸಿದ್ಧವಾಗಿರುವುದು ಗೊತ್ತಿರುವ ಸಂಗತಿ. ಈ ಫೋನ್‌ ಮೈಕ್ರೋಸೈಟ್ ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ಸೈಟ್‌ನಲ್ಲಿ ಖರೀದಿಸಬಹುದಾಗಿದೆ.

ರಿಯಲ್​ಮಿ ಈಗಾಗಲೇ ಈ ಫೋನ್‌ನ ವಿನ್ಯಾಸ ಮತ್ತು ಬಣ್ಣದ ಆಯ್ಕೆಗಳನ್ನು ಬಹಿರಂಗಪಡಿಸಿದೆ. ಈಗ ಕಂಪನಿ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಮತ್ತು ಚಾರ್ಜಿಂಗ್ ವಿವರಗಳನ್ನು ಪ್ರಕಟಿಸಿದೆ. 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ನೊಂದಿಗೆ 6000mAh ಬ್ಯಾಟರಿ ಪ್ಯಾಕ್ ಮಾಡುವ 5G ವಿಭಾಗದಲ್ಲಿ Realme 14x ಮೊದಲ ಫೋನ್ ಆಗಿರುತ್ತದೆ ಎಂದು Realme ತನ್ನ ಅಧಿಕೃತ ಸೈಟ್‌ನಲ್ಲಿ ತಿಳಿಸಿದೆ.

ಒಮ್ಮೆ ಚಾರ್ಜ್​​ ಮಾಡಿದರೆ 15 ಗಂಟೆ ನಿರಂತರ ವಿಡಿಯೋ ವೀಕ್ಷಣೆ: ಕಂಪನಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಫೋನ್ 38 ನಿಮಿಷಗಳಲ್ಲಿ 0 ರಿಂದ 50 ಪ್ರತಿಶತದವರೆಗೆ ಚಾರ್ಜ್ ಆಗುತ್ತದೆ ಮತ್ತು 100 ಪ್ರತಿಶತ ಚಾರ್ಜ್ ಮಾಡಲು 93 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸಿಂಗಲ್​ ಚಾರ್ಜ್‌ನಲ್ಲಿ ಫೋನ್ ಎರಡು ದಿನಗಳವರೆಗೆ ಕಾರ್ಯ ನಿರ್ವಹಿಸಲಿದೆ. ಪೂರ್ಣ ಚಾರ್ಜ್‌ನಲ್ಲಿ ನೀವು 45.4 ಗಂಟೆಗಳ ಕಾಲ ಕರೆಗಳನ್ನು ಮಾಡಬಹುದು ಅಥವಾ 15.8 ಗಂಟೆಗಳ ಕಾಲ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ನೀರಿನಲ್ಲಿ ಬಿದ್ದರೂ ಭಯಪಡೋಕೆ ಹೋಗಲೇಬೇಡಿ: ಫೋನ್ ಬ್ಲ್ಯಾಕ್​, ಗೋಲ್ಡ್​ ಮತ್ತು ಕರೆಡ್​ ಬಣ್ಣಗಳಲ್ಲಿ ಬರಲಿದೆ. ಫೋನ್ ನೀರಿನಲ್ಲಿ ಬಿದ್ದರೂ ಆತಂಕ ಪಡುವ ಅಗತ್ಯವಿಲ್ಲ. ಫೋನ್ ಡಸ್ಟ್​ ಮತ್ತು ವಾಟರ್​ ಸುರಕ್ಷಿತವಾಗಿರಲು IP69 ವಾಟರ್​ಪ್ರೂಫ್​ ರೇಟಿಂಗ್‌ನೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿದೆ. 15 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ IP69 ರೇಟಿಂಗ್ ಹೊಂದಿರುವ ಭಾರತದ ಮೊದಲ ಫೋನ್ ಇದಾಗಿದೆ.

ಮೂರು ರೂಪಾಂತರಗಳಲ್ಲಿ ಲಭ್ಯ: Realme 14x 5G ಮೂರು ರೂಪಾಂತರಗಳಲ್ಲಿ ಬರಲಿದೆ. 6GB+128GB, 8GB+128GB ಮತ್ತು 8GB+256GB. ಇದು 6.67-ಇಂಚಿನ HD ಪ್ಲಸ್ IPS LCD ಸ್ಕ್ರೀನ್​ ಹೊಂದುವ ನಿರೀಕ್ಷೆಯಿದೆ.

ಭಾರತದಲ್ಲಿ Realme 12x 5G ಬೆಲೆಯು 4GB + 128GB ರೂಪಾಂತರಕ್ಕೆ ರೂ 11,999, 6GB + 128GB ರೂಪಾಂತರಕ್ಕೆ ರೂ 13,499 ಮತ್ತು 8GB + 128GB ರೂಪಾಂತರಕ್ಕೆ ರೂ 14,999 ಆಗಿತ್ತು. ಇದನ್ನು ಕೋರಲ್ ರೆಡ್, ಟ್ವಿಲೈಟ್ ಪರ್ಪಲ್ ಮತ್ತು ವುಡ್‌ಲ್ಯಾಂಡ್ ಗ್ರೀನ್ ಶೇಡ್‌ಗಳಲ್ಲಿ ಪರಿಚಯಿಸಲಾಗಿದೆ.

ಓದಿ: ನೀವು ಸ್ಮಾರ್ಟ್​ವಾಚ್​ ಪ್ರಿಯರೇ, ಹಾಗಾದ್ರೆ ಇಲ್ಲಿವೆ ಕೇವಲ 1 ಸಾವಿರ ರೂ.ಒಳಗಿನ ಸಾಧನಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.