ETV Bharat / bharat

'2024ರ ಬಿಜೆಪಿ ಗೆಲುವಿಗೆ ಕಾಂಗ್ರೆಸ್ಸೇ ಕಾರಣ': ತಮ್ಮ ಹೊಸ ಪುಸ್ತಕದಲ್ಲಿ ಸಿಎಂ ಮಮತಾ ಆರೋಪ - MAMATA BANERJEE NEW BOOK

2024ರ ಲೋಕಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಹೊಸ ಪುಸ್ತಕದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (IANS)
author img

By ETV Bharat Karnataka Team

Published : Jan 29, 2025, 1:08 PM IST

ಕೋಲ್ಕತಾ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾವು ಬರೆದ ಹೊಸ ಪುಸ್ತಕದಲ್ಲಿ ಆರೋಪಿಸಿದ್ದಾರೆ.

ಕೋಲ್ಕತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಮೊದಲ ದಿನವಾದ ಮಂಗಳವಾರ ಮಧ್ಯಾಹ್ನ ಮುಖ್ಯಮಂತ್ರಿ ಮಮತಾ ಬರೆದ ಒಟ್ಟು ಮೂರು ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಈ ಪೈಕಿ 'ಬಂಗ್ಲಾರ್ ನಿರ್ಬಚೋನ್ ಓ ಅಮ್ರಾ (ಬಂಗಾಳ ಚುನಾವಣೆಗಳು ಮತ್ತು ನಾವು)' ಎಂಬ ಶೀರ್ಷಿಕೆಯ ಒಂದು ಪುಸ್ತಕದಲ್ಲಿ ಅವರು 2024ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳ ವಿಶ್ಲೇಷಣೆ ಮಾಡಿದ್ದಾರೆ.

ತೃಣಮೂಲ ಕಾಂಗ್ರೆಸ್​ನ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಕಾಂಗ್ರೆಸ್​ನ ವೈಫಲ್ಯದಿಂದಾಗಿ ಪ್ರತಿಪಕ್ಷಗಳ ಐಎನ್​ಡಿಐಎ ಮೈತ್ರಿಕೂಟವು ಚುನಾವಣಾ ಯಶಸ್ಸನ್ನು ಗಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಪುಸ್ತಕದಲ್ಲಿ ಹೇಳಿದ್ದಾರೆ.

"ಎಲ್ಲಾ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಟ್ಟುಗೂಡಿಸಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಬಲವಾದ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ನಿಲ್ಲಿಸುವುದು ನಮ್ಮ ಪ್ರಾಮಾಣಿಕ ಪ್ರಯತ್ನವಾಗಿತ್ತು. ಮೈತ್ರಿಕೂಟವು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮತ್ತು ಸಾಮಾನ್ಯ ಪ್ರಣಾಳಿಕೆಯೊಂದನ್ನು ಘೋಷಿಸಬೇಕೆಂದು ನಾವು ಆರಂಭದಿಂದಲೂ ಒತ್ತಾಯಿಸಿದ್ದೆವು. ಮೈತ್ರಿಕೂಟಕ್ಕೆ ಇಡಲಾದ ಹೆಸರನ್ನು ಕೂಡ ನಾನೇ ಸೂಚಿಸಿದ್ದೆ. ಆ ಸಮಯದಲ್ಲಿ ಕಾಂಗ್ರೆಸ್ಸಿಗೆ ಐಎನ್​ಡಿಐಎ ಮೈತ್ರಿಕೂಟದ ನಾಯಕನ ಸ್ಥಾನವನ್ನು ನೀಡಲಾಯಿತು. ಆದರೆ ಅದರ ಹೊರತಾಗಿಯೂ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಅಥವಾ ಯಾವುದೇ ಸಾಮಾನ್ಯ ಪ್ರಣಾಳಿಕೆಯನ್ನು ತಯಾರಿಸಲಾಗಲಿಲ್ಲ. ಮೈತ್ರಿಕೂಟದ ಘಟಕ ಪಕ್ಷಗಳು ಪರಸ್ಪರರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದವು. ಇದರಿಂದ ಬಿಜೆಪಿ ಬಹುಮತ ಪಡೆಯದಿದ್ದರೂ ಅದು ಮತ್ತೆ ಅಧಿಕಾರಕ್ಕೇರಲು ಸಹಾಯಕವಾಯಿತು" ಎಂದು ಮುಖ್ಯಮಂತ್ರಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐಎನ್​​ಡಿಐಎ ಮೈತ್ರಿಕೂಟದ ಘಟಕ ಪಕ್ಷಗಳ ಬೆಂಬಲದ ಕಾರಣದಿಂದಲೇ ಅನೇಕ ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಯಿತು ಎಂದು ಸಿಎಂ ಮಮತಾ ಪ್ರತಿಪಾದಿಸಿದ್ದಾರೆ.

ನಿರ್ದಿಷ್ಟವಾಗಿ ಪಶ್ಚಿಮ ಬಂಗಾಳದ ಚುನಾವಣೆಗಳ ಬಗ್ಗೆ ನೋಡುವುದಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಸಿಪಿಐ (ಎಂ) ನೇತೃತ್ವದ ಎಡರಂಗದೊಂದಿಗೆ ಸೀಟು ಹಂಚಿಕೆ ಮಾಡಿಕೊಂಡಿದ್ದರೂ, ವಾಸ್ತವವಾಗಿ ಅದು ಬಿಜೆಪಿಯೊಂದಿಗೆ ರಹಸ್ಯ ಹೊಂದಾಣಿಕೆ ಮಾಡಿಕೊಂಡಿದ್ದ ತೃಣಮೂಲ ಕಾಂಗ್ರೆಸ್ ವಿರೋಧಿ ವ್ಯವಸ್ಥೆಯಾಗಿತ್ತು ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ನ ಚುನಾವಣಾ ಯಶಸ್ಸಿಗೆ ತಮ್ಮ ಸರ್ಕಾರ ಕೈಗೊಂಡ ವಿವಿಧ ಅಭಿವೃದ್ಧಿ ಚಟುವಟಿಕೆಗಳೇ ಕಾರಣ ಎಂದು ಮಮತಾ ಹೇಳಿಕೊಂಡಿದ್ದಾರೆ.

ಫಲಿತಾಂಶ ಹೇಗಿತ್ತು?: 2024ರ ಲೋಕಸಭಾ ಚುನಾವಣೆಯಲ್ಲಿ, ತೃಣಮೂಲ ಕಾಂಗ್ರೆಸ್ ತನ್ನ ಬಲವನ್ನು 2019ರಲ್ಲಿ ಇದ್ದ 22ರಿಂದ 29ಕ್ಕೆ ಹೆಚ್ಚಿಸಿಕೊಂಡರೆ, ಬಿಜೆಪಿ ಬಲ 2019ರಲ್ಲಿದ್ದ 18ರಿಂದ 12ಕ್ಕೆ ಇಳಿದಿತ್ತು. ಕಾಂಗ್ರೆಸ್ ಒಂದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾದರೆ, ಸಿಪಿಐ (ಎಂ) ನೇತೃತ್ವದ ಎಡರಂಗ ಶೂನ್ಯ ಸಂಪಾದನೆ ಮಾಡಿತ್ತು.

ಇದನ್ನೂ ಓದಿ: ಜೆಪಿಸಿ ಸಭೆ ಮುಕ್ತಾಯ: ವಕ್ಫ್ ಕರಡು ವರದಿ 14-11 ಮತಗಳ ಅಂತರದಿಂದ ಪಾಸ್ - WAQF JPC

ETV Bharat Logo

Copyright © 2025 Ushodaya Enterprises Pvt. Ltd., All Rights Reserved.