ಪ್ರಯಾಗ್ರಾಜ್(ಉತ್ತರ ಪ್ರದೇಶ): ಮಹಾಕುಂಭ ಮೇಳದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಪ್ರಮುಖವಾಗಿ ಐದು ಬದಲಾವಣೆಗೆ ಮುಂದಾಗಿದೆ. ಈ ಬದಲಾವಣೆಗಳನ್ನು ತಕ್ಷಣ ಜಾರಿ ಮಾಡಿ, ಕುಂಭ ಮೇಳವನ್ನು ಸುರಕ್ಷಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
- ನೋ-ವೆಹಿಕಲ್ ಝೋನ್: ಮಹಾ ಕುಂಭ ಮೇಳದ ಪ್ರದೇಶಕ್ಕೆ ಎಲ್ಲಾ ರೀತಿಯ ವಾಹನಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ.
- ವಿವಿಐಪಿ ಪಾಸ್ ರದ್ದು: ಯಾವುದೇ ವಿನಾಯಿತಿ ಇಲ್ಲದೇ ವಿಶೇಷ ಪಾಸ್ಗಳ ಪ್ರವೇಶಕ್ಕೆ ಅನುಮತಿ ಇಲ್ಲ.
- ಒನ್ ವೇ ಮಾರ್ಗ: ಭಕ್ತರಿಗೆ ಅನುಕೂಲವಾಗುವಂತೆ ಏಕ ಮುಖ ಮಾರ್ಗದಲ್ಲಿ ಟ್ರಾಫಿಕ್ ವ್ಯವಸ್ಥೆ ಜಾರಿಗೆ ನಿರ್ಧಾರ.
- ವಾಹನ ಪ್ರವೇಶಕ್ಕೆ ನಿರ್ಬಂಧ: ಪ್ರಯಾಗ್ರಾಜ್ ನೆರೆಹೊರೆ ಜಿಲ್ಲೆಯಿಂದ ಹೊರಬರುವ ವಾಹನಗಳ ಆಗಮನವನ್ನು ನಿರ್ಬಂಧಿಸುವ ಮೂಲಕ ದಟ್ಟಣೆ ಕಡಿಮೆ ಮಾಡಲಾಗಿದೆ.
- ಫೆ. 4ರವರೆಗೆ ಕಟ್ಟುನಿಟ್ಟಿನ ನಿರ್ಬಂಧ: ನಗರದಲ್ಲಿ ಫೆ. 4ರವರೆಗೆ ನಾಲ್ಕು ಚಕ್ರದ ವಾಹನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಮಹಾಕುಂಭ ಮೇಳ - ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ 30 ಜನರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಘೋಷಣೆ ಮಾಡಿದ ಸಿಎಂ ಯೋಗಿ