ETV Bharat / technology

ಪವರ್​ಫುಲ್​ ಸಿಎನ್​ಜಿ ಕಮರ್ಶಿಯಲ್​ ವಾಹನ ಪರಿಚಯಿಸಿದ ಮಹೀಂದ್ರಾ; 480 ಕಿ.ಮೀ ರೇಂಜ್​, ಇದರ ಬೆಲೆ ಎಷ್ಟು ಗೊತ್ತಾ? - MAHINDRA VEERO CNG LAUNCHED

Mahindra Veero CNG Launched: ಮಹೀಂದ್ರಾ ತನ್ನ ಹೊಸ ವೀರೋ ಸಿಎನ್‌ಜಿ ಲೈಟ್​ ಕಮರ್ಶಿಯಲ್​ ವಾಹನವನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿ ಎರಡು ರೂಪಾಂತರಗಳಲ್ಲಿ ಪರಿಚಯಿಸಿದ್ದು, ಅದರ ವೈಶಿಷ್ಟ್ಯ, ಬೆಲೆಯ ವಿವರ ಇಲ್ಲಿದೆ..

MAHINDRA VEERO CNG SPECIFICATIONS  MAHINDRA VEERO CNG LAUNCHED  MAHINDRA VEERO CNG PRICE  MAHINDRA VEERO CNG FEATURES
ಪವರ್​ಫುಲ್​ ಸಿಎನ್​ಜಿ ಕಮರ್ಶಿಯಲ್​ ವಾಹನ ಪರಿಚಯಿಸಿದ ಮಹೀಂದ್ರಾ (Photo Credit: Mahindra & Mahindra)
author img

By ETV Bharat Tech Team

Published : Jan 30, 2025, 3:58 PM IST

Mahindra Veero CNG Launched: ದೇಶೀಯ ವಾಹನ ತಯಾರಕ ಮಹೀಂದ್ರಾ ತನ್ನ ಹೊಸ ವೀರೋ ಸಿಎನ್‌ಜಿ ಲೈಟ್ ಕಮರ್ಶಿಯಲ್​ ವಾಹನವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದನ್ನು ಮೊದಲು ಸೆಪ್ಟೆಂಬರ್ 2024 ರಲ್ಲಿ ಪ್ರದರ್ಶಿಸಲಾಗಿದ್ದು, ಸದ್ಯ ಇದರ ಮಾರಾಟ ಪ್ರಾರಂಭವಾಗುತ್ತಿದೆ. ಕಂಪನಿಯು ಮಹೀಂದ್ರಾ ವೀರೋ ಸಿಎನ್‌ಜಿಯನ್ನು ಎರಡು ರೂಪಾಂತರಗಳಲ್ಲಿ ಹೊರ ತಂದಿದೆ.

ಬೇಸ್ 1.4 XXL SD V2 CNG ರೂಪಾಂತರದ ಬೆಲೆ 8.99 ಲಕ್ಷ ರೂ. (ಎಕ್ಸ್ ಶೋ ರೂಂ), ಟಾಪ್-ಸ್ಪೆಕ್ 1.4 XXL SD V4 (A) CNG ರೂಪಾಂತರದ ಬೆಲೆ 9.39 ಲಕ್ಷ ರೂ. (ಎಕ್ಸ್ ಶೋ ರೂಂ) ಆಗಿದೆ.

ಮಹೀಂದ್ರಾ ವೀರೋ 250 ಸಿಸಿ : ಮಹೀಂದ್ರಾ ಈಗಾಗಲೇ 3.5 ಟನ್‌ಗಳಿಗಿಂತ ಕಡಿಮೆ ತೂಕದ ಲಘು ವಾಣಿಜ್ಯ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಅಲ್ಲಿ ಶೇಕಡ 51.2 ಮಾರುಕಟ್ಟೆ ಪಾಲನ್ನು ಹೊಂದಿದೆ. ಹೊಸ ಮಹೀಂದ್ರಾ ವೀರೋ ಸಿಎನ್‌ಜಿಯೊಂದಿಗೆ ಕಂಪನಿಯು ಈ ವಿಭಾಗದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಇದು ಭಾರತೀಯ ಮಾರುಕಟ್ಟೆಗಳಲ್ಲಿ ನಿರಂತರವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಇದು ಇ-ಕಾಮರ್ಸ್ ವ್ಯವಹಾರಗಳಿಗೆ ಸೂಕ್ತವಾಗಿದೆ.

ಮಹೀಂದ್ರಾ ವೀರೋವನ್ನು ಕಂಪನಿಯ ಮಾಡ್ಯುಲರ್ ಅರ್ಬನ್ ಪ್ರಾಸ್ಪರ್ ಪ್ಲಾಟ್‌ಫಾರ್ಮ್ (UPP) ಮೇಲೆ ನಿರ್ಮಿಸಲಾಗಿದೆ. ಸುರಕ್ಷತೆ, ಸಾಮರ್ಥ್ಯ ಮತ್ತು ಇಂಧನ ದಕ್ಷತೆಯ ವಿಷಯದಲ್ಲಿ ಹೊಸ ಮಾನದಂಡಗಳನ್ನು ಪರಿಚಯಿಸುವ ಮೂಲಕ ಇದು ಲಘು ವಾಣಿಜ್ಯ ವಾಹನ ವಿಭಾಗವನ್ನು ಮರು ವ್ಯಾಖ್ಯಾನಿಸುತ್ತದೆ. ಇದರ ಕ್ಯಾಬಿನ್‌ನ ಸೌಕರ್ಯವನ್ನು ಮತ್ತಷ್ಟು ಸುಧಾರಿಸಲಾಗಿದೆ. ಅಷ್ಟೇ ಅಲ್ಲ, ಚಾಲಕನ ಸೌಕರ್ಯ ಮತ್ತು ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದೆ. ಇದರ ಜೊತೆಗೆ ಈ ವಿಭಾಗದಲ್ಲಿ ಮೊದಲ ಬಾರಿಗೆ ನೀಡಲಾಗಿರುವ ಹಲವು ವೈಶಿಷ್ಟ್ಯಗಳು ಉಪಯುಕ್ತವಾಗಿವೆ.

ಮಹೀಂದ್ರಾ ವೀರೋದ ಪೇಲೋಡ್ ಸಾಮರ್ಥ್ಯ 1.4 ಟನ್‌ಗಳು. ಇದು 3035 ಮಿ.ಮೀ ಸರಕು ಉದ್ದವನ್ನು ಹೊಂದಿದ್ದು, ಇದು ಅನೇಕ ಅನ್ವಯಿಕೆಗಳಿಗೆ ಸೂಕ್ತವಾಗಿದೆ. ಇದಲ್ಲದೆ, ಇದು ಮೂರು ಆಸನಗಳ ದೊಡ್ಡ ಕ್ಯಾಬಿನ್ ಹೊಂದಿದೆ. ರಿಕ್ಲೈನಿಂಗ್​ ಡ್ರೈವರ್​ ಸೀಟ್​, TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಅಷ್ಟೇ ಅಲ್ಲ ಏರ್​ ಕಂಡಿಷನ್​ ಫೀಚರ್​ ಸಹ ಲಭ್ಯವಿದೆ. ಕಂಪನಿಯು ಇದರಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪವರ್ ವಿಂಡ್ಸೋ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳನ್ನು ಸಹ ಸೇರಿಸಿದೆ.

ಈ ವಾಣಿಜ್ಯ ವಾಹನದಲ್ಲಿ ಕಂಪನಿಯು ಚಾಲಕನ ಸುರಕ್ಷತೆಗೆ ವಿಶೇಷ ಒತ್ತು ನೀಡಿದೆ. ಮಹೀಂದ್ರಾ ವೀರೋವನ್ನು ಹೈ-ಟೆನ್ಸೈಲ್ ಸ್ಟೀಲ್‌ನಿಂದ ವಿನ್ಯಾಸಗೊಳಿಸಲಾಗಿದೆ ಮತ್ತು AIS096 ಕ್ರ್ಯಾಶ್ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತದೆ. ಇದು ಡ್ರೈವರ್​-ಸೈಡ್​ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಫಾಲ್ಸ್ ಸ್ಟಾರ್ಟ್ ಅವೈಡೆಂಸ್​ ಸಿಸ್ಟಮ್​ ಅನ್ನು ಹೊಂದಿದೆ. ಇದು ಚಾಲಕ ಮತ್ತು ಪ್ರಯಾಣಿಕರಿಗೆ ಹೆಚ್ಚುವರಿ ಸುರಕ್ಷತೆಯನ್ನು ಒದಗಿಸುತ್ತದೆ.

ಇಂಧನ ದಕ್ಷತೆ : ಮಹೀಂದ್ರಾ ವೀರೋ ಸಿಎನ್‌ಜಿಯನ್ನು ಉತ್ತಮ ದಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಸಿಎನ್‌ಜಿ ಎಂಜಿನ್ ಬಳಸಲಾಗಿದ್ದು, ಇದು 90 ಬಿಎಚ್‌ಪಿ ಪವರ್ ಮತ್ತು 210 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಉತ್ತಮ ಎಕ್ಸ್​ಲೆರೆಶನ್​ ನೀಡುತ್ತದೆ. ಈ ವಾಣಿಜ್ಯ ವಾಹನವು 150 ಲೀಟರ್‌ಗಳ ದೊಡ್ಡ CNG ಟ್ಯಾಂಕ್ ಹೊಂದಿದೆ. ಇದರ ಮೈಲೇಜ್ ಪ್ರತಿ ಕೆಜಿಗೆ 19.2 ಕಿ.ಮೀ. ವ್ಯಾಪ್ತಿ ನೀಡುತ್ತದೆ. ಶುದ್ಧ CNG ಸ್ವರೂಪದಲ್ಲಿ ಈ ವಾಹನವು 480 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.

ಮಹೀಂದ್ರಾ ವೀರೋ ಸಿಎನ್‌ಜಿಯಲ್ಲಿ 4.5 ಲೀಟರ್ ಪೆಟ್ರೋಲ್ ಟ್ಯಾಂಕ್‌ ಅನ್ನು ಅಳವಡಿಸಲಾಗಿದೆ. ಪೆಟ್ರೋಲ್ ಟ್ಯಾಂಕ್ ತನ್ನ ವ್ಯಾಪ್ತಿಯನ್ನು 500 ಕಿಲೋಮೀಟರ್‌ಗಳಿಗೂ ವಿಸ್ತರಿಸುತ್ತದೆ. ಮುಂದಿನ ದಿನಗಳಲ್ಲಿ ಹೊಸ ಮಹೀಂದ್ರಾ ವೀರೋ LCV ಎಲೆಕ್ಟ್ರಿಕ್​ ಆವೃತ್ತಿಯನ್ನು ಕಂಪನಿ ಪರಿಚಯಿಸಲಿದೆ.

ಕಂಪನಿಯು ಎಂಜಿನ್ ಸ್ಟಾಪ್-ಸ್ಟಾರ್ಟ್, ಪವರ್ ಮೋಡ್ ಮತ್ತು ಡ್ರೈವರ್ ಫ್ಯೂಯಲ್ ಕೋಚಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಿದ್ದು, ಇದು ಅದರ ಇಂಧನ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಓದಿ: ಓಹೋ! BMW iX ಫೇಸ್​ಲಿಫ್ಟ್​ ದೇಶಿಯ ಮಾರುಕಟ್ಟೆಗೆ ಬರುತ್ತಿದೆ - ಸಿಂಗಲ್​ ಚಾರ್ಜ್​ಗೆ 700 ಕಿ.ಮೀ. ವ್ಯಾಪ್ತಿ ಪ್ರಯಾಣ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.