ETV Bharat / business

ಜಪಾನ್ ಮಾರುಕಟ್ಟೆಗೆ ಕಾಲಿಟ್ಟ 'ಮೇಡ್​ ಇನ್ ಇಂಡಿಯಾ' ಜಿಮ್ನಿ 5-ಡೋರ್ SUV - JIMNY 5 DOOR SUV

ಮಾರುತಿ ಸುಜುಕಿಯ ಜಿಮ್ನಿ 5 ಡೋರ್ ಜಪಾನ್ ಮಾರುಕಟ್ಟೆಗೆ ಕಾಲಿಟ್ಟಿದೆ.

ಜಿಮ್ನಿ 5-ಡೋರ್ SUV
ಜಿಮ್ನಿ 5-ಡೋರ್ SUV (IANS)
author img

By ETV Bharat Karnataka Team

Published : Jan 30, 2025, 2:31 PM IST

ನವದೆಹಲಿ: ಭಾರತದಲ್ಲಿ ತಯಾರಾದ ಜಿಮ್ನಿ 5-ಡೋರ್ ಎಸ್​ಯುವಿ ಗುರುವಾರದಿಂದ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಜಿಮ್ನಿ ಎಸ್​ಯುವಿ 2024-25ರ ಹಣಕಾಸು ವರ್ಷದಲ್ಲಿ ಮಾರುತಿ ಸುಜುಕಿಯ ಎರಡನೇ ಅತಿ ಹೆಚ್ಚು ರಫ್ತು ಮಾಡಲಾದ ಕಾರ್ ಮಾಡೆಲ್ ಆಗಿದೆ. ಸದ್ಯ ಇದು ಜಪಾನ್ ಮಾರುಕಟ್ಟೆಗೂ ಕಾಲಿಟ್ಟಿರುವುದು ವಿಶೇಷ.

ಜಿಮ್ನಿ 5-ಡೋರ್ ಅನ್ನು ದೆಹಲಿಯ ಹೊರವಲಯದ ಗುರುಗ್ರಾಮದಲ್ಲಿರುವ ಮಾರುತಿ ಸುಜುಕಿಯ ಉತ್ಪಾದನಾ ಘಟಕದಲ್ಲಿ ಪ್ರತ್ಯೇಕವಾಗಿ ತಯಾರಿಸಲಾಗುತ್ತದೆ. ಇದು ಜಾಗತಿಕ ಆಫ್-ರೋಡರ್ ಪರಂಪರೆಯನ್ನು ಬಿಂಬಿಸುತ್ತದೆ ಮತ್ತು ಇದು ಸುಮಾರು 100 ದೇಶಗಳಿಗೆ ರಫ್ತಾಗುತ್ತಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ. ಜಪಾನ್ ನಲ್ಲಿ ಈ 4 ಡಬ್ಲ್ಯುಡಿ ಎಸ್ ಯುವಿಯನ್ನು ಪರಿಚಯಿಸುವುದು ಮಾರುತಿ ಸುಜುಕಿಯ ರಫ್ತು ಪಯಣದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾರುತಿ ಸುಜುಕಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ಟೇಕುಚಿ, "ಜಪಾನ್ ನಲ್ಲಿ 'ಮೇಡ್ ಇನ್ ಇಂಡಿಯಾ' ಜಿಮ್ನಿ 5-ಡೋರ್ ಅನ್ನು ಪರಿಚಯಿಸಿರುವುದು ನಮ್ಮ ಉತ್ಪಾದನಾ ಸಾಮರ್ಥ್ಯದಲ್ಲಿ ಜಾಗತಿಕ ಮಟ್ಟದ ಉತ್ಕೃಷ್ಟತೆಗೆ ಸಾಕ್ಷಿಯಾಗಿದೆ. ಮೆಕ್ಸಿಕೊ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ಮಾರುಕಟ್ಟೆಗಳಲ್ಲಿನ ಅದ್ಭುತ ಯಶಸ್ಸಿನ ನಂತರ, ಇದು ಜಪಾನ್ ನ ಗ್ರಾಹಕರನ್ನು ಸಂತೋಷಪಡಿಸುತ್ತದೆ ಎಂದು ನಮಗೆ ವಿಶ್ವಾಸವಿದೆ. ಜಿಮ್ನಿ ರಫ್ತು 'ವಿಶ್ವಕ್ಕಾಗಿ ಮೇಕ್ ಇನ್ ಇಂಡಿಯಾ' ಕಡೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ." ಎಂದು ಹೇಳಿದರು.

ಸುಜುಕಿ ಕಂಪನಿಯು ವಿಶ್ವದಾದ್ಯಂತ 199 ದೇಶಗಳಲ್ಲಿ ಈಗಾಗಲೇ 3.5 ಮಿಲಿಯನ್ ಜಿಮ್ನಿ ವಾಹನಗಳನ್ನು ಮಾರಾಟ ಮಾಡಿದೆ. ಜಿಮ್ನಿಯ 3-ಡೋರ್ ಆವೃತ್ತಿಯು ಈಗಾಗಲೇ ಜಪಾನಿನ ಮಾರುಕಟ್ಟೆಯಲ್ಲಿ ಲಭ್ಯವಿದೆ. 5-ಡೋರ್ ಆವೃತ್ತಿಯು ಮಾದರಿಯ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ಮಾರುತಿ ಸುಜುಕಿ ಭಾರತದ ಪ್ರಮುಖ ಪ್ರಯಾಣಿಕ ವಾಹನ ರಫ್ತುದಾರನಾಗಿ ಹೊರಹೊಮ್ಮಿದೆ. ಕಂಪನಿಯು 2024 ರ ಕ್ಯಾಲೆಂಡರ್ ವರ್ಷದಲ್ಲಿ ಸುಮಾರು 100 ದೇಶಗಳಿಗೆ 3.23 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ರವಾನಿಸಿದೆ. ಕಂಪನಿಯು 2024 ರಲ್ಲಿ ಭಾರತದ ಒಟ್ಟು ಪ್ರಯಾಣಿಕ ವಾಹನ ರಫ್ತಿನಲ್ಲಿ ಶೇಕಡಾ 43.5 ರಷ್ಟು ಪಾಲನ್ನು ಹೊಂದಿದೆ. ಮಾರುತಿ ಸುಜುಕಿ ಆಗಸ್ಟ್ 2024 ರಲ್ಲಿ ಜಪಾನ್ ಗೆ ಫ್ರಾಂಕ್ಸ್ ವಾಹನವನ್ನು ರಫ್ತು ಮಾಡಲು ಪ್ರಾರಂಭಿಸಿದೆ.

"ಜಿಮ್ನಿ 5-ಡೋರ್​ ಅನ್ನು ಭಾರತದಲ್ಲಿಯೇ ಉತ್ಪಾದಿಸುತ್ತಿರುವ ಸುಜುಕಿ, ವಾಹನಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಜಾಗತಿಕ ಉತ್ಪಾದನಾ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ" ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ : ಹೈವೇ ನಿರ್ಮಾಣಕ್ಕೆ ಖರ್ಚು ಮಾಡಿದ ಪ್ರತಿ 1 ರೂ.ನಿಂದ ಜಿಡಿಪಿಗೆ 3 ರೂ. ಆದಾಯ: IIM-B - INDIAS HIGHWAY GDP REPORT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.