How to Make Tamarind Chitranna: ಬಹುತೇಕರು ತಮ್ಮ ಮನೆಗಳಲ್ಲಿ ಲೆಮನ್ ರೈಸ್, ಟೊಮೆಟೊ ರೈಸ್, ಸಾಮಾನ್ಯ ಚಿತ್ರಾನ್ನ ಮಾಡುತ್ತಾರೆ. ಈ ರೀತಿಯ ರೈಸ್ ಸಿದ್ಧಪಡಿಸಲು ಕೆಲವೇ ನಿಮಿಷಗಳು ಸಾಕು. ಆದರೆ, ನೀವು ಹುಣಸೆಹಣ್ಣಿನ ಚಿತ್ರಾನ್ನ ತಯಾರಿಸಲು ಬಯಸಿದರೆ ಮುಂಚಿತವಾಗಿ ಪ್ಲಾನ್ ಮಾಡಿಕೊಳ್ಳಬೇಕಾಗುತ್ತದೆ.
ಮೊದಲು ಅನ್ನದೊಂದಿಗೆ ಮಿಕ್ಸ್ ಮಾಡಲು ಹುಣಸೆಹಣ್ಣಿನ ಮಸಾಲ ಚಟ್ನಿಯನ್ನು ಸಿದ್ಧಪಡಿಸಿಟ್ಟರೆ ಅದು ಒಂದು ವಾರದವರೆಗೆ ಸಂಗ್ರಹಿಸಿಡಬಹುದು. ನಿಮಗೆ ತಿನ್ನಬೇಕೆನಿಸಿದಾಗ ಅನ್ನವೊಂದನ್ನು ಸಿದ್ಧಪಡಿಸಿದರೆ ಸಾಕು, ಈ ಹುಣಸೆಹಣ್ಣಿನ ಮಸಾಲ ಚಟ್ನಿಯಿಂದ ಚಿತ್ರಾನ್ನ ರೆಡಿ ಮಾಡಬಹುದು.
ಮಸಾಲಾ ಚಟ್ನಿಗೆ ಅಗತ್ಯವಿರುವ ಪದಾರ್ಥಗಳು:
- 1 ಟೀಸ್ಪೂನ್ - ಕಡಲೆಕಾಯಿ
- ಒಂದು ಟೀಸ್ಪೂನ್ - ಉದ್ದಿನ ಬೇಳೆ
- ಕಾಲು ಟೀಸ್ಪೂನ್ - ಕಾಳುಮೆಣಸು
- ಕಾಲು ಟೀಸ್ಪೂನ್ - ಮೆಂತ್ಯ
- ಒಂದು ಟೀಸ್ಪೂನ್ - ಎಳ್ಳು
- 2 ಟೀಸ್ಪೂನ್ - ಧನಿಯಾ ಬೀಜಗಳು
- 5 - ಒಣಮೆಣಸಿನಕಾಯಿ
- ಕಾಲು ಟೀಸ್ಪೂನ್ - ಇಂಗು
ಹುಣಸೆಹಣ್ಣಿನ ಪೇಸ್ಟ್ಗೆ ಬೇಕಾಗುವ ಪದಾರ್ಥಗಳೇನು?:
- ಒಂದು ಕಪ್- ಹುಣಸೆಹಣ್ಣಿನ ರಸ
- 3 ಟೀಸ್ಪೂನ್- ಎಳ್ಳೆಣ್ಣೆ
- ಒಂದು ಟೀಸ್ಪೂನ್- ಸಾಸಿವೆ
- ಒಂದು ಟೀಸ್ಪೂನ್- ಕಡಲೆಬೇಳೆ
- ಒಂದು ಟೀಸ್ಪೂನ್- ಉದ್ದಿನಬೇಳೆ
- ಒಂದು ಹಿಡಿಯಷ್ಟು ಶೇಂಗಾ
- 4- ಒಣ ಮೆಣಸಿನಕಾಯಿ
- ಕಾಲು ಟೀಸ್ಪೂನ್- ಇಂಗು
- 2 ಕರಿಬೇವು ಎಲೆಗಳು
- ಅರ್ಧ ಟೀಸ್ಪೂನ್ ಅರಿಶಿನ
- ರುಚಿಗೆ ತಕ್ಕಷ್ಟು ಉಪ್ಪು
- ಸ್ವಲ್ಪ ಬೆಲ್ಲ
- ಅನ್ನ
ಹುಣಸೆಹಣ್ಣಿನ ಚಿತ್ರಾನ್ನ ತಯಾರಿಸುವ ವಿಧಾನ:
- ಒಲೆ ಆನ್ ಮಾಡಿ ಅದರ ಮೇಲೆ ಪಾತ್ರೆ ಇಡಿ. ಕಡಲೆ, ಉದ್ದು, ಕಾಳುಮೆಣಸು, ಮೆಂತ್ಯ, ಎಳ್ಳು, ಧನಿಯಾ ಮತ್ತು ಒಣ ಮೆಣಸಿನಕಾಯಿಗಳನ್ನು ಹಾಕಿ ಎಣ್ಣೆ ಹಾಕದೇ ಫ್ರೈ ಮಾಡಬೇಕಾಗುತ್ತದೆ.
- ಇವೆಲ್ಲವೂ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದ ಬಳಿಕ, ಒಲೆಯನ್ನು ಆಫ್ ಮಾಡಬೇಕಾಗುತ್ತದೆ. ಅದರೊಳಗೆ ಸ್ವಲ್ಪ ಇಂಗು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ.
- ಇವು ತಣ್ಣಗಾದ ಬಳಿಕ ಮಿಕ್ಸರ್ ಜಾರಿನಲ್ಲಿ ಹಾಕಿ ಸರಿಯಾಗಿ ರುಬ್ಬಿಕೊಳ್ಳಬೇಕಾಗುತ್ತದೆ.
- ಇದೀಗ ಒಂದು ಕಪ್ ಹುಣಸೆಹಣ್ಣನ ರಸ ತೆಗೆದು ಸ್ವಚ್ಛಗೊಳಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ.
- ಬಳಿಕ ಒಲೆ ಆನ್ ಮಾಡಿ ಪಾತ್ರೆ ಇಡಿ, ಅದರೊಳಗೆ ಎಳ್ಳೆಣ್ಣೆ ಸುರಿದು ಬಿಸಿ ಮಾಡಬೇಕಾಗುತ್ತದೆ.
- ಬಿಸಿಯಾದ ಎಣ್ಣೆಯಲ್ಲಿ ಸಾಸಿವೆ, ಕಡಲೆ, ಉದ್ದಿನಬೇಳೆ, ಕಡಲೆಕಾಯಿ, ಒಣ ಮೆಣಸಿನಕಾಯಿ, ಇಂಗು, ಕರಿಬೇವು ಮತ್ತು ಅರಿಶಿನ ಸೇರಿಸಿ ಕಡಿಮೆ ಉರಿಯಲ್ಲಿ ಫ್ರೈ ಮಾಡಬೇಕಾಗುತ್ತದೆ.
- ಇವೆಲ್ಲವೂ ಫ್ರೈ ಮಾಡಿದ ನಂತರ, ಅದರೊಳಗೆ ಹುಣಸೆ ರಸ ಸೇರಿಸಿ ಹಾಗೂ ಮಧ್ಯಮ ಉರಿಯಲ್ಲಿ 10 ನಿಮಿಷ ಬೇಯಿಸಬೇಕಾಗುತ್ತದೆ.
- ಇದಾದ ಬಳಿಕ ಉಪ್ಪು, ಬೆಲ್ಲ ಮತ್ತು ಮೊದಲೇ ಸಿದ್ಧಪಡಿಸಿ ಪುಡಿ ಸೇರಿಸಿ ಹಾಗೂ ಎಣ್ಣೆ ಮೇಲಕ್ಕೆ ತೇಲುವಂತೆ 10ರಿಂದ 15 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಬೇಕಾಗುತ್ತದೆ.
- ಇದೀಗ ಅನ್ನವನ್ನು ಪಾತ್ರೆಯೊಂದರಲ್ಲಿ ತೆಗೆದುಕೊಂಡು ಅದರೊಳಗೆ ಹುಣಸೆಹಣ್ಣಿನ ಮಸಾಲ ಚಟ್ನಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕಾಗುತ್ತದೆ. ಈಗ ರುಚಿಕರವಾದ ಹುಣಸೆಹಣ್ಣಿನ ಚಿತ್ರಾನ್ನ ಸಿದ್ಧವಾಗುತ್ತದೆ. 10ರಿಂದ 15 ನಿಮಿಷಗಳ ಬಳಿಕ ಸೇವಿಸಿದರೆ ತುಂಬಾ ಚೆನ್ನಾಗಿರುತ್ತದೆ.