Red Chilli Chutney: ಚಟ್ನಿ ಅಂದ್ರೆ ಬಹುತೇಕರು ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ವಿವಿಧ ಭಾಗಗಳಲ್ಲಿ ಋತುಮಾನಕ್ಕೆ ಅನುಗುಣವಾಗಿ ಹಲವು ಚಟ್ನಿಗಳನ್ನು ಸಿದ್ಧಪಡಿಸಲಾಗುತ್ತದೆ. ಊಟ ಮತ್ತು ಉಪಹಾರದಲ್ಲಿ ಯಾವುದಾದರೊಂದು ಚಟ್ನಿ ಇದ್ದರೆ ಸಾಕು ಮನಸ್ಸಿಗೆ ತೃಪ್ತಿ.
ಚಳಿಗಾಲದಲ್ಲಿ ಕೆಲವರು ಹಸಿಮೆಣಸಿನಕಾಯಿ ಚಟ್ನಿಯನ್ನು ರೆಡಿ ಮಾಡುತ್ತಾರೆ. ಇದೀಗ ನಾವು ನಿಮಗಾಗಿ ಕೆಂಪು ಮೆಣಸಿನಕಾಯಿ ಚಟ್ನಿ ರೆಸಿಪಿ ತಂದಿದ್ದೇವೆ. ಮನೆಯಲ್ಲಿ ಯಾವುದೇ ತರಕಾರಿ ಇಲ್ಲದೆ ಇರುವ ಸಮಯದಲ್ಲಿ ಈ ಚಟ್ನಿಯನ್ನು ನೀವು ರೆಡಿ ಮಾಡಬಹುದು.
ಮನೆಯಲ್ಲಿರುವ ಎಲ್ಲರೂ ಈ ಚಟ್ನಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಯಾರಿಗೂ ಬೇಸರ ತರಿಸುವುದಿಲ್ಲ. ಆದರೆ, ಕೆಲವರಿಗಂತೂ ಚಟ್ನಿಗಳನ್ನು ತಯಾರಿಸಲು ಸಮಯವಿಲ್ಲ. ಇದರಿಂದ ಮಾರುಕಟ್ಟೆಯಿಂದ ರೆಡಿಮೇಡ್ ಚಟ್ನಿಗಳನ್ನು ಖರೀದಿಸಿ ಸೇವನೆ ಮಾಡುತ್ತಾರೆ. ಕೆಂಪು ಮೆಣಸಿನಕಾಯಿ ಚಟ್ನಿಯನ್ನು ಮನೆಯಲ್ಲಿ ಸಿದ್ಧಪಡಿಸಿದರೆ ಕೆಲವು ತಿಂಗಳುಗಳವರೆಗೆ ಕೆಡುವುದಿಲ್ಲ.
ಕೆಂಪು ಮೆಣಸಿನಕಾಯಿ ಚಟ್ನಿಗೆ ಅಗತ್ಯವಿರುವ ಪದಾರ್ಥಗಳೇನು?:
- ಹಸಿ ಕೆಂಪು ಮೆಣಸಿನಕಾಯಿ - ಒಂದು ಕೆಜಿ
- ಹುಣಸೆಹಣ್ಣು - 250 ಗ್ರಾಂ
- ಉಪ್ಪು - 250 ಗ್ರಾಂ
- ಅರಿಶಿನ - ಎರಡು ಟೀಸ್ಪೂನ್
- ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳು - ಅರ್ಧ ಕಪ್
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- ಶೇಂಗಾ ಎಣ್ಣೆ - 100 ಗ್ರಾಂ
- ಬೆಳ್ಳುಳ್ಳಿ ಎಸಳು - 10
- ಒಣಮೆಣಸಿನಕಾಯಿ - 5
- ಸಾಸಿವೆ - 1 ಟೀಸ್ಪೂನ್
- ಜೀರಿಗೆ - 1 ಟೀಸ್ಪೂನ್
- ಕರಿಬೇವು - ಎರಡು ಎಲೆಗಳು
- ಇಂಗು - ಒಂದು ಚಿಟಿಕೆ
ಚಟ್ನಿ ತಯಾರಿಸುವ ವಿಧಾನ:
- ಹಸಿ ಕೆಂಪು ಮೆಣಸಿನಕಾಯಿ ತೆಗೆದುಕೊಂಡು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅವುಗಳಲ್ಲಿ ನೀರು ಇರದಂತೆ ಸ್ವಲ್ಪ ಒಣಗಿಸಿ.
- ಕೆಂಪು ಮೆಣಸಿನಕಾಯಿ ಸಂಪೂರ್ಣವಾಗಿ ಒಣಗಿಸಿದ ಬಳಿಕ, ಅವುಗಳ ಕಾಂಡಗಳನ್ನು ತೆಗೆಯಬೇಕಾಗುತ್ತದೆ. ನಂತರ ಸಣ್ಣ ತುಂಡುಗಳಾಗಿ ಕಟ್ ಮಾಡಿ ಪಕ್ಕಕ್ಕಿಡಿ.
- ಹುಣಸೆಹಣ್ಣನ್ನು ಸ್ವಚ್ಛ ಮಾಡಿ. ಅಂದ್ರೆ ಬೀಜ, ತೊಗಟೆ ತೆಗೆದುಹಾಕಬೇಕಾಗುತ್ತದೆ.
- ಇದೀಗ ಮಿಕ್ಸರ್ ಜಾರ್ನಲ್ಲಿ ಹುಣಸೆಹಣ್ಣು, ಉಪ್ಪು ಹಾಕಿ ಒಮ್ಮೆ ರುಬ್ಬಿಕೊಳ್ಳಿ. ಆದರೆ, ಎಲ್ಲವನ್ನೂ ಒಂದೇ ಬಾರಿಗೆ ಉಪ್ಪು ಸೇರಿಸಬಾರದು. ಸ್ವಲ್ಪ ಸ್ವಲ್ಪವೇ ಸೇರಿಸಿಕೊಳ್ಳಿ.
- ಬಳಿಕ ಕಟ್ ಮಾಡಿದ ಮೆಣಸಿನಕಾಯಿ ಪೀಸ್ಗಳನ್ನು ಸೇರಿಸಿ ಮತ್ತೊಮ್ಮೆ ರುಬ್ಬಿಕೊಳ್ಳಬೇಕು.
- ಅರಿಶಿನ, ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಮತ್ತೆ ರುಬ್ಬಿಕೊಳ್ಳಬೇಕಾಗುತ್ತದೆ. ಈ ಚಟ್ನಿಯನ್ನು ತುಂಬಾ ನುಣ್ಣಗೆ ಇರಬಾರದು, ಸ್ವಲ್ಪ ಒರಟಾಗಿ ರುಬ್ಬಿದರೆ ಹೆಚ್ಚು ರುಚಿಯಾಗಿರುತ್ತದೆ.
- ಈ ಚಟ್ನಿಯನ್ನು ರುಬ್ಬಿದ ಬಳಿಕ ಅದರ ರುಚಿ ನೋಡಿ, ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿಕೊಳ್ಳಬಹುದು.
- ರೆಡಿಯಾದ ಚಟ್ನಿಯನ್ನು ಸ್ವಚ್ಛವಾದ ಒಣಗಿದ ಹಾಗೂ ಗಾಳಿಯಾಡದ ಗಾಜಿನ ಡಬ್ಬಿಯಲ್ಲಿ ಹಾಕಿ ಇಡಬೇಕಾಗುತ್ತದೆ. ಅದರ ಮುಚ್ಚಳವನ್ನು ಬಿಗಿಯಾಗಿ ಮುಚ್ಚಬೇಕಾಗುತ್ತದೆ. ಒಂದು ದಿನ ಹಾಗೆಯೇ ಬಿಡಬೇಕು, ಈ ರೀತಿಯಾಗಿ ಮ್ಯಾರಿನೇಟ್ ಆಗುವುದರಿಂದ ಎಲ್ಲಾ ಪದಾರ್ಥಗಳು ಸಂಪೂರ್ಣವಾಗಿ ಮಿಕ್ಸ್ ಆಗುತ್ತದೆ. ಈ ರೀತಿ ಮಾಡುವ ಚಟ್ನಿಯನ್ನು ಕೆಲವು ತಿಂಗಳವರೆಗೆ ಸಂಗ್ರಹಿಸಿಡಬಹುದು. ನಿಮಗೆ ತಿನ್ನಬೇಕು ಅನಿಸಿದಾಗಲೆಲ್ಲಾ ಈ ಚಟ್ನಿಗೆ ಸ್ವಲ್ಪ ರುಚಿ ನೋಡಬಹುದು.
- ಒಗ್ಗರಣೆಗಾಗಿ ಒಲೆ ಆನ್ ಮಾಡಿ, ಅದರ ಮೇಲೆ ಪ್ಯಾನ್ ಇಡಿ. ಎಣ್ಣೆ ಸುರಿಯಬೇಕಾಗುತ್ತದೆ. ಎಣ್ಣೆ ಬಿಸಿಯಾದ ಬಳಿಕ, ಜಜ್ಜಿದ ಬೆಳ್ಳುಳ್ಳಿ ಎಸಳು, ಸಾಸಿವೆ, ಜೀರಿಗೆ ಹಾಗೂ ಒಣಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ.
- ಬಳಿಕ ಕರಿಬೇವು ಹಾಗೂ ಇಂಗು ಹಾಕಿ, ಇವುಗಳನ್ನು ಒಟ್ಟಿಗೆ ಮಿಕ್ಸ್ ಮಾಡಬೇಕಾಗುತ್ತದೆ. ಬಳಿಕ ಹುಣಸೆಹಣ್ಣಿನ ಪೇಸ್ಟ್ ಹಾಕಬೇಕು, ಇದಾದ ನಂತರ ಚಟ್ನಿಯನ್ನು ಈ ಮಿಶ್ರಣದೊಳಗೆ ಸೇರಿಸಿ ಒಂದೆರಡು ನಿಮಿಷ ಹುರಿಯಿರಿ. ಇದೀಗ ರುಚಿಕರವಾದ ಕೆಂಪು ಮೆಣಸಿನಕಾಯಿ ಚಟ್ನಿ ಸವಿಯಲು ಸಿದ್ಧವಾಗಿದೆ.
- ಚಟ್ನಿ ಸಂಪೂರ್ಣವಾಗಿ ತಣ್ಣಗಾದ ಬಳಿಕ, ಗಾಜಿನ ಬಟ್ಟಲಿನಲ್ಲಿ ತೆಗೆದಿಡಿ. ಈ ಚಟ್ನಿಯನ್ನು ಊಟ ಹಾಗೂ ಉಪಹಾರದ ಜೊತೆಗೆ ಸೇವಿಸಬಹುದು. ಈ ರೆಸಿಪಿ ನಿಮಗೆ ಇಷ್ಟವಾದರೆ ಟ್ರೈ ಮಾಡಿ.