Cyber Caller Tune: ಸೈಬರ್ ವಂಚನೆಯ ವಿರುದ್ಧ ಜನರನ್ನು ಎಚ್ಚರಿಸಲು ಸರ್ಕಾರ ಕಾಲರ್ ಟ್ಯೂನ್ ಅಲರ್ಟ್ ಪ್ರಾರಂಭಿಸಿರುವುದು ಗೊತ್ತಿರುವ ಸಂಗತಿ. ನೀವು ಯಾರಿಗಾದರೂ ಕರೆ ಮಾಡಿದಾಗಲೆಲ್ಲಾ ಫೋನ್ನಲ್ಲಿ ಮೊದಲು ಕೇಳುವುದು ಈ ಸೈಬರ್ ಅವೇರ್ನಸ್ ಕಾಲರ್ ಟ್ಯೂನ್.
ಈ ಟ್ಯೂನ್ ಮುಗಿದ ನಂತರವೇ ನಿಮ್ಮ ಕರೆ ಕನೆಕ್ಟ್ಗೊಳ್ಳುತ್ತದೆ. ಇದು ಮುಖ್ಯವಾದ ಮಾಹಿತಿಯಾಗಿದ್ದರೂ, ಕೆಲವರು ಇದನ್ನು ಮತ್ತೆ ಮತ್ತೆ ಕೇಳಿ ಬೇಸರಗೊಳ್ಳುತ್ತಿದ್ದಾರೆ. ನಿಮಗೂ ಸಹ ಈ ಕಾಲರ್ ಟ್ಯೂನ್ನಿಂದ ಸಮಸ್ಯೆ ಆಗುತ್ತಿದ್ರೆ, ನೀವು ಈ ಕಾಲರ್ ಟ್ಯೂನ್ ಅನ್ನು ಸುಲಭವಾಗಿ ಬಂದ್ ಮಾಡಬಹುದು.
ಇದನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಗದಿದ್ದರೂ, ಪ್ರತಿ ಬಾರಿ ಕರೆಯ ಸಮಯದಲ್ಲಿ ನೀವು ಮ್ಯಾನುವಲ್ ಆಗಿ ಬಂದ್ ಮಾಡಬಹುದು. ನೀವು ಸೈಬರ್ ಅವೇರ್ನಸ್ ಕಾಲರ್ ಟ್ಯೂನ್ ಕೇಳಲು ಬಯಸದಿದ್ದರೆ, ಈ ಸುಲಭ ಟಿಪ್ಸ್ ಪಾಲಿಸಿ.
ನೀವು ಯಾರಿಗಾದ್ರೂ ಕಾಲ್ ಮಾಡಿದಾಗ ಕಾಲರ್ ಟ್ಯೂನ್ ಪ್ಲೇ ಆಗುತ್ತದೆ. ಆಗ ನೀವು ಕೀಪ್ಯಾಡ್ ಅಥವಾ ಡಾಲರ್ ಪ್ಯಾಡ್ ಓಪನ್ ಮಾಡಿ ಸಂಖ್ಯೆ ಒಂದು ಒತ್ತಿರಿ. ನಂತರ ಕಾಲರ್ ಟ್ಯೂನ್ ಬಂದ್ ಆಗಿ ನಿಮ್ಮ ಕಾಲ್ ಡೈರೆಕ್ಟ್ ಆಗಿ ಕನೆಕ್ಟ್ ಆಗುತ್ತದೆ.
ಪದೇ ಪದೇ ಕರೆ ಮಾಡುವವರಿಗೆ ಮತ್ತು ಪ್ರತಿ ಬಾರಿಯೂ ಕಾಲರ್ ಟ್ಯೂನ್ ಕೇಳುವುದನ್ನು ತಪ್ಪಿಸಲು ಬಯಸುವವರಿಗೆ ಈ ವಿಧಾನವು ತುಂಬಾ ಉಪಯುಕ್ತವಾಗಿದೆ. ದೇಶದಲ್ಲಿ ಸೈಬರ್ ವಂಚನೆ ಮತ್ತು ಬ್ಯಾಂಕಿಂಗ್ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚಾದಾಗ ಸರ್ಕಾರ ಈ ಕಾಲರ್ ಟ್ಯೂನ್ ಅಲರ್ಟ್ ಅನ್ನು ಜಾರಿಗೆ ತಂದಿತು.
ಆರ್‌ಬಿಐ ವರದಿಯ ಪ್ರಕಾರ 2020 ರ ಆರ್ಥಿಕ ವರ್ಷದಲ್ಲಿ ಒಟ್ಟು 8,703 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಸುಮಾರು 1,85,468 ಕೋಟಿ ರೂ. ನಷ್ಟ ಉಂಟಾಗಿದೆ.
2021 ರ ಆರ್ಥಿಕ ವರ್ಷದಲ್ಲಿ 7,338 ಪ್ರಕರಣಗಳು ದಾಖಲಾಗಿದ್ದು, ಇದರಿಂದಾಗಿ 1,32,389 ಕೋಟಿ ನಷ್ಟವಾಗಿದೆ. ಮತ್ತು 2022 ರ ಆರ್ಥಿಕ ವರ್ಷದಲ್ಲಿ, 9,046 ಪ್ರಕರಣಗಳು ದಾಖಲಾಗಿದ್ದು, ಇದರಿಂದಾಗಿ 5,458 ಕೋಟಿ ನಷ್ಟವಾಗಿದೆ.
ಹೆಚ್ಚುತ್ತಿರುವ ಈ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ವಂಚನೆ ಕರೆಗಳನ್ನು ತಪ್ಪಿಸಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣ ಗುರುತಿಸಲು ಸರ್ಕಾರವು ಕಾಲರ್ ಟ್ಯೂನ್ ಮೂಲಕ ಜನರನ್ನು ಜಾಗೃತಿಗೊಳಿಸಲು ನಿರ್ಧರಿಸಿದೆ. ಸೈಬರ್ ಭದ್ರತಾ ಜಾಗೃತಿಯನ್ನು ಹೆಚ್ಚಿಸಲು ಸರ್ಕಾರ ಈ ಕಾಲರ್ ಟ್ಯೂನ್ ಅನ್ನು ಕಡ್ಡಾಯಗೊಳಿಸಿದೆ. ಆದರೆ ಇದನ್ನು ಪದೇ ಪದೇ ಕೇಳುವುದು ನಿಮಗೆ ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು.
ನೀವು ಪ್ರತಿ ಬಾರಿಯೂ ಆ ಕಾಲರ್ ಟ್ಯೂನ್ ಅನ್ನು ಬಂದ್ ಮಾಡಲು ಬಯಸಿದರೆ, ಕಾಲರ್ ಟ್ಯೂನ್ ಅನ್ನು ತ್ವರಿತವಾಗಿ ತೆಗೆದುಹಾಕಲು ಮತ್ತು ಕರೆಯನ್ನು ನೇರವಾಗಿ ಸಂಪರ್ಕಿಸಲು ಒನ್ ಸಂಖ್ಯೆಯನ್ನು ಒತ್ತಿದ್ರೆ ಸಾಕು.
ಓದಿ: ವಾರ್ಷಿಕ-ಲೈಫ್ಟೈಮ್ ಟೋಲ್ ಪಾಸಗಳನ್ನು ಪರಿಚಯಿಸಲು ಕೇಂದ್ರ ಚಿಂತನೆ: ಇದರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ!