ETV Bharat / health

ಚಿಕ್ಕ ವಯಸ್ಸಿನಲ್ಲಿ ಕೂದಲು ಉದುರಲು ಪ್ರಮುಖ ಕಾರಣಗಳೇನು ಗೊತ್ತೆ? ವೈದ್ಯರ ಸಲಹೆ ಹೀಗಿದೆ - REASONS FOR HAIR FALL IN TEENAGE

ಕೂದಲು ಉದುರುವಿಕೆಯಲ್ಲಿ ಪ್ರಮುಖವಾಗಿ ಎರಡು ವಿಧಗಳಿದ್ದು, ಗುರುತುಗಳಿರುವ ಅಲೋಪೆಸಿಯಾ ಹಾಗೂ ಗುರುತುಗಳಿಲ್ಲದ ಅಲೋಪೆಸಿಯಾ ಆಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರಲು ಪ್ರಮುಖ ಕಾರಣಗಳೇನು ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿಯೋಣ.

REASONS FOR HAIR FALL IN TEENAGE  CAUSING HAIR LOSS AMONG YOUTH  HAIR LOSS ALOPECIA IN CHILDREN ಕೂದಲು ಉದುರುವಿಕೆ ಸಮಸ್ಯೆ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Feb 11, 2025, 11:41 AM IST

Causes of Hair Loss in Teenagers : ಯುವಜನರಲ್ಲಿ ಕೂದಲು ಉದುರುವಿಕೆ ಸಮಸ್ಯೆಯು ಸಾಮಾನ್ಯವಾಗುತ್ತಿದೆ. ಪುರುಷರು ಮಾತ್ರವಲ್ಲದೇ, ಮಹಿಳೆಯರು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜಿಎಂಸಿ ಶ್ರೀನಗರದ ಚರ್ಮರೋಗ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಶಾಜಿಯಾ ಜಿಲಾನಿ ಅವರು ಈಟಿವಿ ಭಾರತ ಜೊತೆ ಮಾತನಾಡಿ, ಯುವಕರಲ್ಲಿ ಕೂದಲು ಉದುರುವಿಕೆಗೆ ಕಾರಣಗಳು, ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ದಿನಕ್ಕೆ ಎಷ್ಟು ಕೂದಲು ಉದುರುತ್ತೆ ಗೊತ್ತಾ ? ಸರಾಸರಿ ಮನುಷ್ಯನ ತಲೆಯಲ್ಲಿ ಒಂದರಿಂದ ಒಂದೂವರೆ ಲಕ್ಷ ಕೂದಲುಗಳು ಇರುತ್ತವೆ. ಇವುಗಳಲ್ಲಿ ಪ್ರತಿದಿನ ಸಾಮಾನ್ಯ 50 ರಿಂದ 100 ಕೂದಲುಗಳು ಉದುರುತ್ತವೆ. ಉದುರುವ ಕೂದಲುಗಳ ಸಂಖ್ಯೆಯು 100 ಮೀರಿದರೆ ಅದು ಸಮಸ್ಯೆಯಾಗಿ ಪರಿಣಮಿಸುತ್ತದೆ. ತಕ್ಷಣವೇ ಸಂಬಂಧಪಟ್ಟವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಡಾ. ಶಾಜಿಯಾ ಜಿಲಾನಿ ಹೇಳುತ್ತಾರೆ. ಭಾರತದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, 50 ವರ್ಷ ವಯಸ್ಸಿನ ಹೊತ್ತಿಗೆ ಸುಮಾರು 50 ಪ್ರತಿಶತ ಪುರುಷರು ಹಾಗೂ 40 ಪ್ರತಿಶತ ಮಹಿಳೆಯರು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ. ಶಾಜಿಯಾ ಜಿಲಾನಿ ಅವರು, ಕೂದಲು ಉದುರುವಿಕೆಯಲ್ಲಿ ಎರಡು ಪ್ರಮುಖ ವಿಧಗಳಿದ್ದು, ಗುರುತುಗಳಿರುವ ಅಲೋಪೆಸಿಯಾ ಹಾಗೂ ಗುರುತುಗಳಿಲ್ಲದ ಅಲೋಪೆಸಿಯಾ. ಸ್ಕಾರ್ಪಿಂಗ್ ಅಲೋಪೆಸಿಯಾದಲ್ಲಿ ಕೂದಲಿನ ಬೇರುಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಇದರಿಂದಾಗಿ ಕೂದಲು ಮತ್ತೆ ಬೆಳೆಯಲು ಸಾಧ್ಯವಾಗುವುದಿಲ್ಲ. ಗುರುತುಗಳಿಲ್ಲದ ಅಲೋಪೆಸಿಯಾದಲ್ಲಿ ಬೇರುಗಳು ಆರೋಗ್ಯಕರವಾಗಿರುತ್ತವೆ. ಇದು ಕೂದಲು ಮತ್ತೆ ಬೆಳೆಯಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸುತ್ತಾರೆ.

ಬದಲಾದ ಜೀವನಶೈಲಿ : ಇತ್ತೀಚಿನ ವರ್ಷಗಳಲ್ಲಿ 15 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರಲ್ಲಿಯೂ ಕೂದಲು ಉದುರುವಿಕೆಯ ಸಮಸ್ಯೆ ಕಂಡುಬರುತ್ತಿದೆ. ಇದು ಕಳವಳಕಾರಿ ವಿಷಯವಾಗಿದೆ. ಅತಿಯಾದ ಕೂದಲು ಉದುರುವಿಕೆಗೆ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಬದಲಾದ ಜೀವನಶೈಲಿಯ ಅಂಶಗಳು, ವೈಯಕ್ತಿಕ ಅಥವಾ ಆನುವಂಶಿಕ ಬದಲಾವಣೆಗಳು ಹಾಗೂ ಆರೋಗ್ಯ ಸ್ಥಿತಿಗಳನ್ನು ಒಳಗೊಂಡಿರಬಹುದು. ಸಾಮಾನ್ಯ ಕಾರಣಗಳಲ್ಲಿ ಒಂದು ಆಂಡ್ರೊಜೆನಿಕ್ ಅಲೋಪೆಸಿಯಾ, ಇದು ಪುರುಷರಲ್ಲಿ ಸಾಮಾನ್ಯವಾಗಿದೆ ಹಾಗೂ ಮಹಿಳೆಯರಲ್ಲಿ ಅಪರೂಪವಾಗಿದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್), ಥೈರಾಯ್ಡ್ ಅಸ್ವಸ್ಥತೆಗಳು ಅಥವಾ ನೈಸರ್ಗಿಕ ಹಾರ್ಮೋನುಗಳ ಬದಲಾವಣೆಗಳಂತಹ ಹಾರ್ಮೋನುಗಳ ಅಸಮತೋಲನವು ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ತಿಳಿಸುತ್ತಾರೆ.

ಔಷಧಿಗಳು & ವೈದ್ಯಕೀಯ ಚಿಕಿತ್ಸೆ : ಕೆಲವು ಔಷಧಿಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳಿಂದಲೂ ಕೂದಲು ಉದುರುವಿಕೆ ಸಂಭವಿಸಬಹುದು. ಇವುಗಳಲ್ಲಿ ಸಾಮಾನ್ಯವಾದವು ಕ್ಯಾನ್ಸರ್ ರೋಗಿಗಳಿಗೆ ಕೀಮೋಥೆರಪಿ, ರೇಡಿಯೊಥೆರಪಿ. ದುರ್ಬಲಗೊಂಡ ರೋಗನಿರೋಧಕ ಶಕ್ತಿಯೂ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದನ್ನು ನಿಯಮಿತ ಚಿಕಿತ್ಸೆಯಿಂದ ನಿಯಂತ್ರಿಸಬಹುದು. ಕೆಲವು ಶಿಲೀಂಧ್ರ ಸೋಂಕುಗಳು, ತೀವ್ರವಾದ ತಲೆಹೊಟ್ಟು ಸೇರಿದಂತೆ ವಿವಿಧ ಸಮಸ್ಯೆಗಳಿಂದ ಕೂದಲು ಉದುರುವಿಕೆಗೆ ಮತ್ತಷ್ಟು ಕಾರಣವಾಗಬಹುದು. ಆರೋಗ್ಯ ಸಮಸ್ಯೆಗಳು ಹಾಗೂ ಮಾನಸಿಕ ಒತ್ತಡ ಅನುಭವಿಸುತ್ತಿರುವ ವ್ಯಕ್ತಿಗಳಲ್ಲಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಆಧಾರವಾಗಿರುವ ಸಮಸ್ಯೆಗಳನ್ನು ಬಗೆಹರಿದ ನಂತರ ಅದು ಸಾಮಾನ್ಯವಾಗಿ ಕಡಿಮೆಯಾಗುತ್ತದೆ ಎಂದು ಡಾ. ಶಾಜಿಯಾ ಜಿಲಾನಿ ಹೇಳಿದರು.

ಪೌಷ್ಟಿಕಾಂಶದ ಕೊರತೆ : ಕಾಶ್ಮೀರ ಸೇರಿದಂತೆ ದೇಶಾದ್ಯಂತ ಕಬ್ಬಿಣದ ಕೊರತೆಯಿಂದಾಗಿ ಕೂದಲು ಉದುರುವಿಕೆ ವೇಗವಾಗಿ ಹೆಚ್ಚುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಪೌಷ್ಟಿಕಾಂಶದ ಕೊರತೆಯಿಂದಾಗಿ ಯುವಜನರು ಮಾತ್ರವಲ್ಲದೆ ಮಕ್ಕಳಲ್ಲೂ ಸಹ ಕೂದಲು ಉದುರುವಿಕೆ ಸಮಸ್ಯೆ ಕಂಡುಬರುತ್ತಿದೆ. ಸತು, ಜೀವಸತ್ವಗಳು ಮತ್ತು ಪ್ರೋಟೀನ್‌ಗಳಂತಹ ಅಗತ್ಯ ಪೋಷಕಾಂಶಗಳ ಕೊರತೆಯು ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಹಾಗೂ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

ಕೂದಲಿನ ಆರೈಕೆ & ರಕ್ಷಣೆ : ಕೂದಲಿನ ಉತ್ತಮ ಆರೈಕೆ ಮತ್ತು ರಕ್ಷಣೆಗಾಗಿ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ ಯುವಜನರು ಹೇರ್ ಡ್ರೈಯರ್‌ಗಳನ್ನು ಬಳಸುವುದನ್ನು ತಪ್ಪಿಸಬೇಕು. ಧೂಳು ಮತ್ತು ಮಾಲಿನ್ಯವಿರುವ ವಾತಾವರಣಕ್ಕೆ ಒಡ್ಡಿಕೊಂಡ ಕೂದಲು ಒಣಗದಂತೆ ರಕ್ಷಿಸಲು ತಲೆಯನ್ನು ಮುಚ್ಚಿಕೊಳ್ಳಬೇಕು. ಕೂದಲನ್ನು ಯಾವಾಗಲೂ ತೆರೆದಿಡಬೇಡಿ, ಪೋನಿಟೇಲ್‌ನಲ್ಲಿ ತುಂಬಾ ಬಿಗಿಯಾಗಿ ಕಟ್ಟಬೇಡಿ. ಬದಲಾಗಿ ಸ್ವಲ್ಪ ಗಾಳಿಯಾಡುವ ರೀತಿಯಲ್ಲಿ ಕೂದಲಗಳನ್ನು ಸರಿಯಾಗಿ ಕಟ್ಟಬೇಕು. ಆಗಾಗ್ಗೆ ಕೇಶವಿನ್ಯಾಸ ಮಾಡುವುದು ಹಾಗೂ ಸೌಂದರ್ಯವರ್ಧಕ ಉದ್ದೇಶಗಳಿಗಾಗಿ ಹೇರ್ ಜೆಲ್‌ಗಳು, ಸ್ಪ್ರೇಗಳನ್ನು ಅತಿಯಾಗಿ ಬಳಸುವುದು ಸಹ ಕೂದಲು ಉದುರುವಿಕೆಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು.

ಕೂದಲು ಉದುರುವಿಕೆಗೆ ಮೂಲ ಕಾರಣವನ್ನು ತಿಳಿದು ಚಿಕಿತ್ಸಾ ತಂತ್ರ ಅನುಸರಿಸಬೇಕಾಗುತ್ತದೆ. ತ್ವರಿತ, ಸಕಾಲಿಕ ಚಿಕಿತ್ಸೆಯನ್ನು ಪಡೆಯುವುದರಿಂದ ಅತಿಯಾದ ಕೂದಲು ಉದುರುವಿಕೆ ತಡೆಯಬಹುದು. ವೈದ್ಯಕೀಯ ಸಂಶೋಧನೆಯಲ್ಲಿನ ಪ್ರಗತಿಯಿಂದಾಗಿ ಪರಿಣಾಮಕಾರಿ ಚಿಕಿತ್ಸೆಗಳು ಈಗ ಲಭ್ಯ ಇವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ಕೂದಲು ಕಸಿ ಅಗತ್ಯವಿಲ್ಲದಿರಬಹುದು ಎಂದು ಡಾ. ಶಾಜಿಯಾ ಜಿಲಾನಿ ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.