ಪಾಟ್ನಾ, ಬಿಹಾರ: ಈಗ ಪ್ರೇಮಿಗಳ ವಾರ ಜಾರಿಯಲ್ಲಿದೆ. ಫೆಬ್ರವರಿ 10 ಅಂದರೆ ಪ್ರೇಮಿಗಳಿಗೆ ವಿಶೇಷ ದಿನವೇ ಸರಿ. ಏಕೆಂದರೆ ಅಂದು ಪ್ರೇಮಿಗಳ ವಾರದ ನಾಲ್ಕನೇ ದಿನ. ಟೆಡ್ಡಿ ಡೇ ದಿನ. ಬಿಹಾರದಲ್ಲೂ ರಾಜಕಾರಣಿಗಳ ಪ್ರೇಮಕಥೆಗಳು ಭರ್ಜರಿಯಾಗಿಯೇ ಚರ್ಚೆಯಾಗುತ್ತಿವೆ. ಅಂದ ಹಾಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾರಿಗೆ ಗೊತ್ತಿಲ್ಲ ಹೇಳಿ. ಇಂದು ನಾವು ನಿಮಗೆ ಹೇಳಲಿರುವುದು ಯಾವುದೇ ತಾರೆಯ ಪ್ರೇಮದ ಕಥೆಯನ್ನಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಮಂಜು ದೇವಿಯ ಲವ್ ಕಹಾನಿಯನ್ನ ಸ್ಟೋರಿಯನ್ನ.
ನಿತೀಶ್ - ಮಂಜು ಅವರದ್ದು ಅರೇಂಜ್ಡ್ ಮ್ಯಾರೇಜ್: ನಿತೀಶ್ ಕುಮಾರ್ ಅವರ ರಾಜಕೀಯ ಜೀವನ ಅವರ ಪ್ರೇಮಕಥೆಯಷ್ಟೇ ಕುತೂಹಲಕಾರಿಯಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎಲ್ಲರಂತೆ ತಂದೆ-ತಾಯಿಗಳು ನಿಶ್ಚಯಿಸಿದಂತೆಯೇ ವಿವಾಹ ಮಾಡಿಕೊಂಡಿದ್ದರು. ಕೃಷ್ಣಾನಂದ ಸಿನ್ಹಾ ಅವರ ಮಗಳು ಮಂಜು ಸಿನ್ಹಾ ಅವರನ್ನು ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಹೆಂಡತಿ ತಂದೆ ಸಿನ್ಹಾ ಸಿಯೋಡಾ ಗ್ರಾಮದ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಇನ್ನು ಹೆಂಡತಿ ಮಂಜು ಸಿನ್ಹಾ ಅವರು ಪಾಟ್ನಾ ಮಗದ್ ಮಹಿಳಾ ಕಾಲೇಜಿನಲ್ಲಿ ಸಮಾಜಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದರು.
![पत्नी मंजू के साथ नीतीश कुमार](https://etvbharatimages.akamaized.net/etvbharat/prod-images/10-02-2025/23514751_cm1.jpg)
ಶಿಕ್ಷಕಿಯಾಗುವ ಕನಸು, ಇಂಜಿನಿಯರ್ ಜೊತೆ ಮದುವೆ: ಕಾಲೇಜಿನಲ್ಲಿ ಓದುತ್ತಿದ್ದ ಮಂಜು ಸಿನ್ಹಾ ಶಿಕ್ಷಕಿಯಾಗುವ ಕನಸನ್ನು ನನಸು ಮಾಡಿಕೊಂಡಿದ್ದರು. ಕೃಷ್ಣಾನಂದರು ತಮ್ಮ ಮಗಳನ್ನು ಇಂಜಿನಿಯರ್ ಹುಡುಗನೊಂದಿಗೆ ಮದುವೆ ಮಾಡಿಕೊಟ್ಟರು. ಅವರಿಬ್ಬರ ಮದುವೆ ಅತ್ಯಂತ ಸರಳವಾಗಿಯೇ ನೆರವೇರಿತು. ಮಂಜು ಸಿನ್ಹಾ ಮತ್ತು ನಿತೀಶ್ ಕುಮಾರ್ ಅವರು 1973ರಲ್ಲಿ ವಿವಾಹವಾದರು. ನಿತೀಶ್ ಕುಮಾರ್ ಅವರು ವಿದ್ಯಾರ್ಥಿ ದಿನಗಳಿಂದಲೂ ಸರಳತೆಯ ಪ್ರತಿಪಾದಕರಾಗಿದ್ದರು ಮತ್ತು ಅದರಂತೆಯೇ ನಡೆದುಕೊಂಡರು. ವರದಕ್ಷಿಣೆ ರಹಿತ ವಿವಾಹದ ಮೂಲಕ ಜನಮನ ಗೆದ್ದಿದ್ದರು.
ವರದಕ್ಷಿಣೆ ತೆಗೆದುಕೊಂಡಿದ್ದಕ್ಕೆ ನಿತೀಶ್ ಕುಮಾರ್ ತಂದೆ ಮೇಲೆ ಸಿಟ್ಟಾಗಿದ್ದರಂತೆ : ನಿತೀಶ್ ಕುಮಾರ್ ಅವರ ಮದುವೆ ಬಗ್ಗೆ ಮಾಜಿ ವಿಧಾನಪರಿಷತ್ ಸದಸ್ಯ ಪ್ರೇಮ್ ಕುಮಾರ್ ಮಣಿ ಮಾತನಾಡಿ, ಆ ಕಾಲದಲ್ಲಿ ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಹೆಚ್ಚಾಗಿತ್ತು. ನಿತೀಶ್ ಕುಮಾರ್ ಅವರ ತಂದೆ, ಮಂಜು ಸಿಂಗ್ ಅವರ ತಂದೆಯಿಂದ ₹ 22000 ವರದಕ್ಷಿಣೆ ಪಡೆದಿದ್ದರಂತೆ. ಈ ವಿಷಯ ತಿಳಿದ ನಿತೀಶ್ ಕುಮಾರ್ ತೀವ್ರ ಕೋಪಗೊಂಡು ಹಣ ಹಿಂತಿರುಗಿಸುವಂತೆ ತಂದೆಗೆ ಸಂದೇಶ ಕಳುಹಿಸಿದ್ದರು. ಜೆಪಿ ಆಂದೋಲನದಿಂದ ಬಂದ ನಿತೀಶ್ ಕುಮಾರ್ ಅವರ ಮದುವೆಯಲ್ಲಿ ವರದಕ್ಷಿಣೆ ವ್ಯವಹಾರ ನಡೆದಿರುವುದು ಸ್ವಲ್ಪವೂ ಇಷ್ಟವಿರಲಿಲ್ಲ.
![valentine-week-special-nitish-kumar-was-angry-over-taking-dowry](https://etvbharatimages.akamaized.net/etvbharat/prod-images/11-02-2025/23514751_cm3_1102newsroom_1739235943_94.jpg)
ಭಿಕ್ಷುಕರಿಗಾಗಿ ಯೋಜನೆ ಬಗ್ಗೆ ಮಾತನಾಡಿದ್ದ ಮಂಜು: ಬಿಹಾರದಲ್ಲಿ ನಿತೀಶ್ ಕುಮಾರ್ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ನಾನೂ ಸಹ ನಿತೀಶ್ ಕುಮಾರ್ ಅವರೊಂದಿಗೆ ಉತ್ತಮ ಆಡಳಿತದ ಸೂತ್ರವನ್ನು ತಯಾರಿಸುತ್ತಿದ್ದೆ ಅಂತಾರೆ ಪ್ರೇಮ್ ಕುಮಾರ್ ಮಣಿ. ಇದೇ ಯೋಚನೆಯಲ್ಲಿದ್ದ ನನಗೆ ಮಂಜು ಸಿನ್ಹಾ ಅವರಿಂದ ಕರೆ ಬಂದಿತು, ಪಾಟ್ನಾದಲ್ಲಿ ಭಿಕ್ಷುಕರು ಮತ್ತು ಬಡ ಅಸಹಾಯಕರಿಗೆ ಯೋಜನೆ ರೂಪಿಸಲು ಹೇಳಿದರು ಎಂದು ಮಣಿ ನೆನಪಿಸಿಕೊಳ್ಳುತ್ತಾರೆ.
ಕಾಲ್ನಡಿಗೆಯಲ್ಲೇ ಶಾಲೆಗೆ ತೆರಳುತ್ತಿದ್ದ ಮಂಜು: ಮಂಜು ಸಿನ್ಹಾ ತುಂಬಾ ಪ್ರಾಮಾಣಿಕರಾಗಿದ್ದರು, ಹಲವು ವಿಷಯಗಳಲ್ಲಿ ನಿತೀಶ್ ಕುಮಾರ್ ಅವರಿಗಿಂತ ಹೆಚ್ಚು ಪ್ರಾಮಾಣಿಕರಾಗಿದ್ದರು ಅಂತಾರೆ ಪ್ರೇಮ್ ಕುಮಾರ್ ಮಣಿ. ಆಕೆ ತನ್ನ ಪತಿ ಮುಖ್ಯಮಂತ್ರಿಯಾಗಿದ್ದರೂ ಕಾಲ್ನಡಿಗೆಯಲ್ಲಿಯೇ ಶಾಲೆಗೆ ಹೋಗುತ್ತಿದ್ದರು. ಮಂಜು ಸಿನ್ಹಾ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸ್ಥಾನಮಾನದ ಲಾಭವನ್ನು ಎಂದೂ ಬಳಸಿಕೊಳ್ಳಲಿಲ್ಲ. ನಿತೀಶ್ ಕುಮಾರ್ ಕೂಡ ಅದನ್ನು ಇಷ್ಟಪಡುತ್ತಿದ್ದರು ಅಂತಾರೆ ಪ್ರೇಮ್ ಕುಮಾರ್
![पत्नी को श्रद्धांजलि देते नीतीश कुमार](https://etvbharatimages.akamaized.net/etvbharat/prod-images/10-02-2025/23514751_cm6.jpg)
ಅಂದು ಕಣ್ಣೀರಿಟ್ಟದ್ದ ನಿತೀಶ್ ಕುಮಾರ್: ನಿತೀಶ್ ಕುಮಾರ್ ಅವರು ತಮ್ಮ ಪತ್ನಿ ಮಂಜು ಸಿನ್ಹಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು ಅಂತಾರೆ ಹಿರಿಯ ಪತ್ರಕರ್ತ ಅರುಣ್ ಪಾಂಡೆ. 2007ರಲ್ಲಿ ಅವರ ಪತ್ನಿ ಮಂಜು ಸಿನ್ಹಾ ಅವರು ನಿಧನರಾಗಿದ್ದರು. ಪತ್ನಿ ಅಗಲಿಕೆ ನಿತೀಶ್ ಕುಮಾರ್ ಅವರನ್ನು ಕಂಗೆಡಿಸಿತ್ತು. ಅವರು ನಿಧನರಾದಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಮಂಜು ಸಿನ್ಹಾ ಮೇಲೆ ನಿತೀಶ್ ಕುಮಾರ್ ಪ್ರೀತಿ ಇಂದಿಗೂ ಹಾಗೆಯೇ ಹಚ್ಚ ಹಸಿರಾಗಿದೆ.
ಪತ್ನಿಗಾಗಿ ಪ್ರತಿಮೆ ನಿರ್ಮಿಸಿದ ನಿತೀಶ್ ಕುಮಾರ್; ಅವರ ಸ್ಮರಣಾರ್ಥ ರಾಜಧಾನಿ ಪಾಟ್ನಾದ ರಾಜೇಂದ್ರ ನಗರದಲ್ಲಿ ದೊಡ್ಡ ಗಾತ್ರದ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿ ಮರಣ ವಾರ್ಷಿಕೋತ್ಸವ ಮತ್ತು ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿತೀಶ್ ಕುಮಾರ್ ತಪ್ಪದೇ ತಮ್ಮ ಪತ್ನಿ ನಮನ ಸಲ್ಲಿಸುತ್ತಾರೆ. ಪ್ರತಿಮೆಗೆ ಮಾಲಾರ್ಪಣೆ ಮಾಡಿ ನೆನಪಿನಾಳಕ್ಕೆ ಜಾರುತ್ತಾರೆ. ಕೆಲ ಸಮಯ ಮೌನಾಚರಣೆ ಮಾಡಿ, ಅಲ್ಲಿಂದ ತೆರಳುತ್ತಾರೆ.
ಇದನ್ನು ಓದಿ: ಸರ್ವ ಪ್ರೇಮಿಗಳಿಗೆ ಇಂದು ಹ್ಯಾಪಿ ಟೆಡ್ಡಿ ಡೇ: ಲವರ್ಸ್ಗಳೇ ಈ ವಾರದಲ್ಲಿ ಹಗ್ ಡೇ, ಕಿಸ್ ಡೇ ಗಳೂ ಇವೆ!