ಕೋಟಾ (ರಾಜಸ್ಥಾನ) : ದೇಶದ ಅತಿ ದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿರುವ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ)ಗೆ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಅಭ್ಯರ್ಥಿಗಳ ಅರ್ಜಿ ಸಲ್ಲಿಕೆಯಲ್ಲಿ ನಿಧಾನಗತಿ ಕಂಡಿದೆ. ಫೆಬ್ರವರಿ 7ರಿಂದ ಪ್ರಾರಂಭವಾಗಿರುವ ಅರ್ಜಿ ಸಲ್ಲಿಕೆ ಪ್ರಕ್ರಿಯೆ 5ದಿನದ ಹೊತ್ತಿಗೆ 1.90 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ಆನ್ಲೈನ್ ಅರ್ಜಿ ಸಲ್ಲಿಕೆ ಕೇಂದ್ರದ ಆಪರೇಟರ್ ಪಂಕಜ್ ಖಂಡೆಲ್ವಾಲ್ ಮಾತನಾಡಿ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ನೀಟ್ ಯುಜಿ ಪರೀಕ್ಷೆಗೆ ಫೆ. 10ರ ಸಂಜೆವರೆಗೆ 1.75 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದರು.
ತಜ್ಞರ ಪ್ರಕಾರ, 2025ರ ನೀಟ್ ಯುಜಿ ಪರೀಕ್ಷೆಗೆ 25 ಲಕ್ಷ ಅಭ್ಯರ್ಥಿಗಳು ರಾಜರಾಗುವ ಸಾಧ್ಯತೆ ಇದೆ. ಈ ಲೆಕ್ಕದಲ್ಲಿ ಪ್ರತಿನಿತ್ಯ ಸುಮಾರು 80 ಸಾವಿರ ಅರ್ಜಿ ಸಲ್ಲಿಕೆಯಾಗಬೇಕಿದೆ. ಆದರೆ, ಇದುವರೆಗೆ ಅಷ್ಟು ಗಣನೀಯ ಪ್ರಮಾಣದ ಅರ್ಜಿಗಳು ಸಲ್ಲಿಕೆಯಾಗಿಲ್ಲ. ದಿನಕ್ಕೆ 38 ಸಾವಿರ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಈ ಅರ್ಜಿ ಸಲ್ಲಿಕೆಗೆ ಮಾರ್ಚ್ 7 ಕಡೆಯ ದಿನವಾಗಿದೆ ಎಂದು ಅವರು ತಿಳಿಸಿದರು.
ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ಇಲ್ಲ : ಸದ್ಯ ಅರ್ಜಿ ಸಲ್ಲಿಕೆಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ. ಅಲ್ಲದೇ, ಅರ್ಜಿ ಸಲ್ಲಿಕೆ ವೇಳೆ ಅಪಾರ್ (Apaar) ಐಡಿ ಕಡ್ಡಾಯವಿಲ್ಲ. ಆರಂಭದಲ್ಲಿ ಸರ್ವರ್ ಸಮಸ್ಯೆ ಉಂಟಾಗಿತ್ತು. ಈ ವೇಳೆ ಮೊದಲು ಅರ್ಜಿ ಸಲ್ಲಿಕೆ ಮಾಡಿ, ಅಲ್ಲಿ ಯಾವುದಾದರೂ ಕೊರತೆ ಇದ್ದಲ್ಲಿ ಪೂರ್ಣ ಮಾಡಿ, ತಕ್ಷಣಕ್ಕೆ ಅರ್ಜಿ ಭರ್ತಿ ಮಾಡುವಂತೆ ತಿಳಿಸಿದೆವು.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಜೆಇಇ ಮೇನ್ಸ್ 2025 ಪರೀಕ್ಷೆಗೆ ಅರ್ಜಿ ವಿಸ್ತರಣೆ ಮಾಡಿಲ್ಲ. ಈ ಹಿನ್ನೆಲೆ ನೀಟ್ ಯುಜಿಗೆ ದಿನಾಂಕ ವಿಸ್ತರಣೆ ಮಾಡುವುದಿಲ್ಲ. ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಅರ್ಜಿ ಭರ್ತಿ ಮಾಡುವುದು ಒಳಿತು ಎಂದು ಸಲಹೆ ನೀಡಿದ್ದಾರೆ.
ನೋಂದಣಿ ಬಳಿಕ ದಾಖಲಾತಿ ಅಪ್ಲೋಡ್ಗೆ ಸಮಸ್ಯೆ : ಪಂಕಜ್ ಖಂಡೆಲ್ವಾಲ್ ಹೇಳುವಂತೆ, ಮಂಗಳವಾರ ಬೆಳಗ್ಗೆ ನೋಂದಣಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ದಾಖಲಾತಿ ಅಪ್ಲೋಡ್ ಮಾಡುವಲ್ಲಿ ಸಮಸ್ಯೆಯಾಗುತ್ತಿದೆ. ಕೋಟಾದಲ್ಲಿನ ಎಲ್ಲಾ ಕೇಂದ್ರದಲ್ಲಿ ಈ ಸಮಸ್ಯೆ ಕಾಣುತ್ತಿದೆ. ಫಿಂಗರ್ಪ್ರಿಂಟ್ ಮತ್ತು ಪೋಸ್ಟ್ಕಾರ್ಡ್ ಫೋಟೋಗಳು ಅಪ್ಲೋಡ್ ಆಗುತ್ತಿಲ್ಲ. ಕಳೆದ ರಾತ್ರಿಯಿಂದ ಈ ಸಮಸ್ಯೆ ಕಾಡುತ್ತಿದೆ. ಇದರಿಂದ ಸಾವಿರಾರು ಅಭ್ಯರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ.
ಬಿಡಿಎಸ್, ಬಿಹೆಚ್ಎಂಎಸ್ ಮತ್ತು ಬಿಎಎಂಎಸ್ಗೂ ದಾಖಲಾತಿ ಲಭ್ಯ : ನೀಟ್ ಯುಜಿ ಮೂಲಕ ಎಂಬಿಬಿಎಸ್ ಕೋರ್ಸ್ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಎಂಬಿಬಿಎಸ್ ಸೀಟ್ ಆದ್ಯತೆಯನ್ನು ಅವರು ಹೊಂದಿದ್ದಾರೆ. ಈ ಪ್ರವೇಶ ಪರೀಕ್ಚೆ ಮೂಲಕವೇ ಬಿಡಿಎಸ್, ಬಿಎಸ್ಸಿ ನರ್ಸಿಂಗ್, ಬಿಎಎಂಎಸ್, ಬಿಯುಎಂಎಸ್ ಮತ್ತು ಬಿಎಸ್ಎಂಎಸ್ ಪ್ರವೇಶ ಪಡೆಯಬಹುದಾಗಿದೆ. ಈ ಎಲ್ಲಾದಕ್ಕೂ ನೀಟ್ ಯುಜಿ ಫಲಿತಾಂಶದ ಆಧಾರದ ಮೇಲೆ ಪ್ರತ್ಯೇಕ ಸಮಾಲೋಚನೆ ಮೂಲಕ ಮಾಡಲಾಗುವುದು ಎಂದು ವರದಿಯಾಗಿದೆ.
ಇದನ್ನೂ ಓದಿ: ನೀಟ್ ಆಕಾಂಕ್ಷಿಗಳಿಗೆ ಶುಭ ಸುದ್ದಿ: ಈ ವರ್ಷದಿಂದ 1.2 ಲಕ್ಷ ಎಂಬಿಬಿಎಸ್ ಸೀಟುಗಳು ಲಭ್ಯತೆ ಸಾಧ್ಯತೆ
ಇದನ್ನೂ ಓದಿ: ನೀಟ್ UG ಪರೀಕ್ಷಾ ಮಾದರಿಯಲ್ಲಿ ಬದಲಾವಣೆ: 180 ಪ್ರಶ್ನೆಗಳಿಗೆ ಉತ್ತರಿಸಲು 180 ನಿಮಿಷ ಅವಕಾಶ