RCB Player Injured : ಮಾರ್ಚ್ 21 ರಿಂದ 18ನೇ ಆವೃತ್ತಿಯ ಐಪಿಎಲ್ ಪ್ರಾರಂಭ ಆಗಲಿದೆ. ಕಳೆದ 17 ಆವೃತ್ತಿಗಳಲ್ಲಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿರದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ಬಾರಿ ಕಪ್ ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಇದಕ್ಕಾಗಿ ಕಳೆದ ವರ್ಷ ಡಿಸೆಂಬರ್ ಕೊನೆಯಲ್ಲಿ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಬೆಸ್ಟ್ ಆಟಗಾರರನ್ನು ಖರೀದಿ ಮಾಡಿದೆ.
ಅಳೆದು ತೂಗಿ ಬಲಿಷ್ಠ ತಂಡವನ್ನು ಕಟ್ಟಿರುವ RCB ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಲ್ ಹೊರತುಪಡಿಸಿ ಹಳೆ ಆಟಗಾರರನ್ನೆಲ್ಲ ತಂಡದಿಂದ ಕೈಬಿಟ್ಟು ಉತ್ತಮ ಸಾಮರ್ಥ್ಯವುಳ್ಳ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅದರಲ್ಲೂ ಟಿ20ಗೆ ಹೇಳಿ ಮಾಡಿಸಿರುವಂತಹ ಆಟಗಾರರಾದ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಾಕೊಬೆ ಬೆಥೆಲ್, ಜಿತೇಶ್ ಶರ್ಮಾರಂತಹ ಆಟಗಾರರನ್ನು ಖರೀದಿಸಿದೆ.
StarBoy Bethell💥 #RCB #JacobBethell #INDvENG pic.twitter.com/Iy1MIpx32k https://t.co/0bsfEYT0qT
— RAJA KRISHNAPPA BAIRYA (@RKBTweetss) February 7, 2025
ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಹ್ಯಾಜೆಲ್ವುಡ್ ರಂತಹ ಬೌಲರ್ಗಳನ್ನು ಖರೀದಿಸಿ ಬೌಲಿಂಗ್ ವಿಭಾಗವನ್ನು ಬಲಿಷ್ಠ ಪಡಿಸಿದೆ. ಆಲ್ರೌಂಡರ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮೆರಿಯೋ ಶೆಫರ್ಡ್ ಕಾಣಿಸಿಕೊಳ್ಳಲಿದ್ದಾರೆ.
ಆದರೆ ಐಪಿಎಲ್ ಆರಂಭಕ್ಕೂ ಮುನ್ನವೆ ಆರ್‌ಸಿಬಿಗೆ ಆತಂಕ ಎದುರಾಗಿದೆ. ಹರಾಜಿನಲ್ಲಿ ಕಲೆ ಬಿದ್ದು ಖರೀದಿ ಮಾಡಿದ್ದ ಇಂಗ್ಲೆಂಡ್ನ ಸ್ಫೋಟಕ ಯುವ ಬ್ಯಾಟರ್ ಜಾಕೊಬೆ ಬೆಥೆಲ್ ಗಾಯಕ್ಕೆ ತುತ್ತಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಬಿದ್ದಿದ್ದಾರೆ.
After Jacob Bethell’s Injury, if he didn’t recover before the IPL2025, RCB should rope in Dewald Brewis as replacement. He proved himself as explosive middle order batter and electrifying fielder for MI Capetown. #IPL pic.twitter.com/mXPkgzoua0
— Hemendra Meena (@hemendra56) February 10, 2025
ಜೋಸ್ ಬಟ್ಲರ್ ಸ್ಪಷ್ಟನೆ : ಬೆಥೆಲ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ ಎಂದು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ತಿಳಿಸಿದ್ದಾರೆ. ಇದೇ ಕಾರಣಕ್ಕೆ ಅವರು ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಗಾಯದ ತೀವ್ರತೆ ಹೆಚ್ಚಿರುವ ಕಾರಣ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಬಿದ್ದಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಈ ರೀತಿ ಆಗಿರುವುದು ದುರಾದೃಷ್ಟಕರ ಎಂದು ಬಟ್ಲರ್ ತಿಳಿಸಿದ್ದಾರೆ.
ಆರ್‌ಸಿಬಿಗೆ ಆಘಾತ : ಮಂಡಿರಜ್ಜು ಗಾಯದಿಂದ ಚಾಂಪಿಯನ್ಸ್ ಟ್ರೋಫಿ ತಪ್ಪಿಸಿಕೊಂಡಿರುವ ಜಾಕೊಬ್ ಬೆಥೆಲ್ ಐಪಿಎಲ್ ಐಪಿಎಲ್ ಆಡುವುದು ಡೌಟ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅವರು ಐಪಿಎಲ್ ಆಡಲಿದ್ದಾರೆಯೇ ಅಥವಾ ಇಲ್ಲವೆಂದು ಸ್ಪಷ್ಟ ಮಾಹಿತಿ ಇಲ್ಲ. ಗಾಯದ ತೀವ್ರತೆ ಮೇಲೆ ನಿರ್ಧರಿಸಲಾಗುತ್ತದೆ. ಒಂದು ವೇಳೆ ಗಾಯದ ತೀವ್ರತೆ ಹೆಚ್ಚಿದ್ದರೆ ಐಪಿಎಲ್ನಿಂದಲೂ ಹೊರ ಬೀಳಲಿದ್ದಾರೆ.
ಹೀಗಾದರೆ ಆರ್‌ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಿಲ್ ಜ್ಯಾಕ್ಸ್ ಅವರನ್ನು ಕೈಬಿಟ್ಟು, ಬ್ಯಾಟಿಂಗ್ ಮತ್ತು ಬಾಲ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಬೆಥೆಲ್ ಅವರನ್ನು ಆಯ್ಕೆ ಮಾಡಿತ್ತು.
ಕಡಿಮೆ ಬೆಲೆಗೆ ತಂಡ ಸೇರಿದ ಬೆಥೆಲ್ : ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಆರ್ಸಿಬಿ ಜಾಕೊಬ್ ಬೆಥೆಲ್ ಅವರನ್ನು ₹2.60 ಕೋಟಿಗೆ ಖರೀದಿ ಮಾಡಿತ್ತು. ಬೆಥೆಲ್ ಖರೀದಿಸಲು ಮೂರು ತಂಡಗಳ ಮಧ್ಯೆ ನಡೆದಿದ್ದ ಪೈಪೋಟಿಯಲ್ಲಿ ಆರ್ಸಿಬಿ ಯಶಸ್ಸು ಸಾಧಿಸಿತ್ತು.
ಇದನ್ನೂ ಓದಿ: ಕ್ರಿಕೆಟ್ನಲ್ಲಿ ಎಷ್ಟು ವಿಧದ ಕ್ಯಾಮೆರಾ ಬಳಸಲಾಗುತ್ತದೆ? ಅವುಗಳ ಬೆಲೆ ಎಷ್ಟು?