ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟರ್‌ವೋರ್ವರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ವಿಚಾರವಾಗಿ ಗರಂ ಆಗಿದ್ದಾರೆ.
ಭಾರತ ತಂಡ ಪ್ರವೇಶಿಸಿ 10 ವರ್ಷಗಳು ಕಳೆದರೂ ಕೆ.ಎಲ್.ರಾಹುಲ್ ಶಾಶ್ವತ ಸ್ಥಾನ ಪಡೆಯಲು ಹೆಣಗಾಡುತ್ತಿದ್ದಾರೆ. ರಾಹುಲ್ ಚೆನ್ನಾಗಿ ಆಡುತ್ತಿದ್ದಾರೆ ಎಂದು ಅವಕಾಶ ಕೊಟ್ಟಾಗಲೆಲ್ಲ ಪದೇ ಪದೇ ವಿಫಲರಾಗುತ್ತಿದ್ದಾರೆ. ಇದಕ್ಕೆ ಕಾರಣ ಬದಲಾಗುತ್ತಿರುವ ಬ್ಯಾಟಿಂಗ್ ಕ್ರಮಾಂಕ. ರಾಹುಲ್ ಓಪನರ್ ಆಗಿ ಮತ್ತ 5ನೇ ಕ್ರಮಾಂಕದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ ಅವರ ಸ್ಥಾನವನ್ನು ಬದಲಾಯಿಸುತ್ತಿದ್ದು ಇದರಿಂದ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Is India Underutilizing KL Rahul by sending Him at Number Six?#INDvENG #TeamIndia #GautamGambhir #ChampionsTrophy #klrAHUL pic.twitter.com/TA3bHTSghQ
— Jega8 (@imBK08) February 11, 2025
ಚಾಂಪಿಯನ್ಸ್ ಟ್ರೋಫಿಗೂ ಮೊದಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು 3 ಪಂದ್ಯಗಳ ಏಕದಿನ ಸರಣಿ ಆಡುತ್ತಿವೆ. ಈಗಾಗಲೇ ಎರಡು ಪಂದ್ಯ ಮುಗಿದಿದ್ದು ಭಾರತ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದುಕೊಂಡಿದೆ. ಆದರೆ ಈ ಎರಡೂ ಪಂದ್ಯದಲ್ಲಿ ರಾಹುಲ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರುತ್ತಿರುವ ರಾಹುಲ್, ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 2 ಮತ್ತು 10 ರನ್ಗಳಿಗೆ ಔಟಾಗಿದ್ದಾರೆ.
ಗಂಭೀರ್ ವಿರುದ್ಧ ಆಕ್ರೋಶ: ರಾಹುಲ್ ಸತತ ಫ್ಲಾಪ್ ಆಗುತ್ತಿರುವುದಕ್ಕೆ ಕಾರಣ ಕೋಚ್ ಗಂಭೀರ್ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಉದ್ದೇಶಪೂರ್ವಕವಾಗಿ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಲಾಗುತ್ತಿದೆ.
🚨Krish srikkanth on KL Rahul's Batting postion 🚨
— Rohit Baliyan (@rohit_balyan) February 11, 2025
" shreyas iyer is in good form, which is a positive for india. but i feel for kl rahul, it’s very unfortunate. yes, axar patel is scoring 30s and 40s, but what they are doing with kl rahul is not fair. look at his record, he has… pic.twitter.com/mkoDPsLpVh
ಇದರೊಂದಿಗೆ ಅವರ ಕ್ರಿಕೆಟ್ ಕೆರಿಯರ್ ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅಭ್ಯಾಸವಿಲ್ಲದ ಸ್ಥಾನದಲ್ಲಿ ರಾಹುಲ್ಗೆ ಬ್ಯಾಟಿಂಗ್ಗೆ ಕಳುಹಿಸಿ ತಂಡದಿಂದ ಹೊರಗಿಡಲು ಪಿತೂರಿ ನಡೆಯುತ್ತಿದೆ. ರಾಹುಲ್ ಅವರೊಂದಿಗೆ ಚೆಲ್ಲಾಟ ಆಡಲಾಗುತ್ತಿದೆ ಎಂದು ದೂರಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಗಂಭೀರ್ ಅವರನ್ನು ಗುರಿಯಾಗಿಸಿ ಟ್ರೋಲ್ ಕೂಡ ಮಾಡಲಾಗುತ್ತಿದೆ.
ಮಾಜಿ ಕ್ರಿಕೆಟಿಗರಿಂದಲೂ ಟೀಕೆ: ಮತ್ತೊಂದೆಡೆ ಮಾಜಿ ಕ್ರಿಕೆಟಿಗರೂ ಗಂಭೀರ್ ನಡೆ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ. ದೊಡ್ಡ ಗಣೇಶ್, ಕೃಷ್ಣಮಾಚಾರಿ ಶ್ರೀಕಾಂತ್, ಜಹೀರ್ ಖಾನ್ ಅವರು ಗಂಭೀರ್ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಐದನೇ ಸ್ಥಾನದಲ್ಲಿ ರಾಹುಲ್ ಅತ್ಯುತ್ತಮ ದಾಖಲೆ ಹೊಂದಿದ್ದರೂ ಅವರನ್ನು ಹೀಗೆ ನಡೆಸಿಕೊಳ್ಳಲಾಗುತ್ತಿರುವುದು ತಪ್ಪೆಂದಿದ್ದಾರೆ.
1 ರಿಂದ 6ನೇ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್ ದಾಖಲೆ:
ಮೊದಲ ಕ್ರಮಾಂಕದಲ್ಲಿ ಬ್ಯಾಟಿಂಗ್: ಏಕದಿನ ಸ್ವರೂಪದಲ್ಲಿ ಒಟ್ಟು 16 ಪಂದ್ಯಗಳಲ್ಲಿ ರಾಹುಲ್ ಓಪನರ್ ಆಗಿ ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ 47.78ರ ಸರಾಸರಿಯಲ್ಲಿ 669 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ 5 ಅರ್ಧಶತಕ ಸೇರಿವೆ. 111 ಹೈಸ್ಕೋರ್ ಆಗಿದೆ.
ಎರಡನೇ ಕ್ರಮಾಂಕ: ಒಟ್ಟು 7 ಪಂದ್ಯಗಳನ್ನಾಡಿ 35ರ ಸರಾಸರಿಯಲ್ಲಿ 246 ರನ್ ಕಲೆಹಾಕಿದ್ದಾರೆ. 102 ಹೈಸ್ಕೋರ್ ಆಗಿದ್ದು, 1 ಶತಕ 1 ಅರ್ಧಶತಕಗಳು ಸೇರಿವೆ.
ಮೂರನೇ ಕ್ರಮಾಂಕ: ಮೂರನೇ ಕ್ರಮಾಂಕದಲ್ಲಿ 3 ಪಂದ್ಯಗಳಲ್ಲಿ 77 ರನ್ ಪೇರಿಸಿದ್ದಾರೆ.
4ನೇ ಕ್ರಮಾಂಕ: ಈ ಕ್ರಮಾಂಕದಲ್ಲಿ 13 ಪಂದ್ಯಗಳಲ್ಲಿ 55ರ ಸರಾಸರಿಯಲ್ಲಿ 558 ರನ್ ಕಲೆಹಾಕಿದ್ದಾರೆ. ಇದರಲ್ಲಿ 2 ಶತಕ, ಮೂರು ಅರ್ಧಶತಕಗಳಿವೆ.
5ನೇ ಕ್ರಮಾಂಕ: ಒಟ್ಟು 30 ಪಂದ್ಯಗಳನ್ನು ಆಡಿರುವ ರಾಹುಲ್ 57.22ರ ಸರಾಸರಿಯಲ್ಲಿ 1259 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ 9 ಅರ್ಧಶತಕಗಳು ಸೇರಿವೆ. 112 ಹೈಸ್ಕೋರ್ ಆಗಿದೆ.
6ನೇ ಕ್ರಮಾಂಕ: ಈ ಸ್ಥಾನದಲ್ಲಿ ಒಟ್ಟು 4 ಪಂದ್ಯಗಳನ್ನು ಆಡಿದ್ದು, 54 ರನ್ ಮಾತ್ರ ಗಳಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಪ್ರೀತಿಯಲ್ಲಿ ಬಿದ್ದ ಹಾರ್ದಿಕ್ ಪಾಂಡ್ಯ: ಇನ್ಸ್ಟಾದಲ್ಲಿ ಫೋಟೋ ಶೇರ್!