Citroen-C5 Aircross: ಸಿಟ್ರೊಯೆನ್ ಇಂಡಿಯಾದ ಜನವರಿ 2025ರ ಮಾರಾಟದ ದತ್ತಾಂಶ ಹೊರಬಿದ್ದಿದೆ. ದೇಶದಲ್ಲಿ ಕಂಪೆನಿಯ ಕಾರು ಮಾರಾಟದ ಅಂಕಿಅಂಶಗಳು ತೀವ್ರವಾಗಿ ಹದಗೆಟ್ಟಿವೆ. ಸಿಟ್ರೊಯೆನ್ ಒಟ್ಟು 5 ಮಾದರಿಗಳನ್ನಷ್ಟೇ ಮಾರಾಟ ಮಾಡಿದೆ. ಇದರಲ್ಲಿ ಗರಿಷ್ಠ 242 ಯುನಿಟ್ C3 ಮಾರಾಟವಾಗಿವೆ. ಆದರೆ ಸಿ5 ಏರ್‌ಕ್ರಾಸ್ ಕಾರು ಜನವರಿ ತಿಂಗಳಲ್ಲಿ ಒಂದೇ ಒಂದೂ ಕೂಡಾ ಮಾರಾಟವಾಗದೇ ತಟಸ್ಥವಾಗಿದೆ.
ಕಳೆದ 6 ತಿಂಗಳಲ್ಲಿ ಈ ಕಾರು ಒಂದು ಯೂನಿಟ್ ಕೂಡಾ ಮಾರಾಟವಾಗದಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಡಿಸೆಂಬರ್ 2024ರಲ್ಲಿ ಕೇವಲ ಒಂದೇ ಯುನಿಟ್ ಮಾತ್ರ ಮಾರಾಟವಾಗಿತ್ತು. ಕಳೆದ 6 ತಿಂಗಳಲ್ಲಿ ಕೇವಲ 7 ಯುನಿಟ್‌ಗಳು ಮಾತ್ರ ಮಾರಾಟವಾಗಿರುವುದು ಕಂಪೆನಿಗೆ ಬೇಸರದ ಸಂಗತಿಯಾಗಿದೆ.
ಕಾರಿನ ವಿಶೇಷತೆಗಳು: ಈ ಕಾರು 1997cc, DW10FC 4-ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. 177 PS ಪವರ್ ಮತ್ತು 400 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗೆ ಜೋಡಿಸಲಾಗಿದೆ. 52.5 ಲೀಟರ್ ಫ್ಯೂಯಲ್ ಟ್ಯಾಂಕ್ ಇದೆ. 17.5 ಕಿಮೀ/ಲೀ ಮೈಲೇಜ್ ನೀಡುತ್ತದೆ. ಆಯಾಮಗಳ ಬಗ್ಗೆ ಹೇಳುವುದಾದರೆ, ಇದರ ಉದ್ದ 4500mm, ಅಗಲ 1969mm ಮತ್ತು ಎತ್ತರ 1710mm. ಇದರ ವೀಲ್‌ಬೇಸ್ 2730 ಮಿ.ಮೀ ಇದೆ.
ಈ ಕಾರು LED ವಿಷನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, LED ಡೇಟೈಮ್ ರನ್ನಿಂಗ್ ಲ್ಯಾಂಪ್ಸ್, 3D LED ರಿಯರ್ ಲ್ಯಾಂಪ್ಸ್ ಮತ್ತು ORVM ಗಳಲ್ಲಿ LED ಟರ್ನ್ ಇಂಡಿಕೇಟರ್‌ಗಳನ್ನು ಪಡೆಯುತ್ತದೆ. ಇದು 31.24 ಸೆಂ.ಮೀ ಕಸ್ಟಮೈಸ್ ಮಾಡಬಹುದಾದ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಮಧ್ಯದಲ್ಲಿ 25.4 ಸೆಂ.ಮೀ ಕೆಪ್ಯಾಸಿಟಿವ್ ಟಚ್ ಸ್ಕ್ರೀನ್ ಇದ್ದು, ಇದು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಬೆಂಬಲಿಸುತ್ತದೆ.
ಸಿಟ್ರೊಯೆನ್ ಸಿ5 ಏರ್‌ಕ್ರಾಸ್ ಮಾರಾಟ ವರದಿ | |
ತಿಂಗಳು | ಯುನಿಟ್ |
ಆಗಸ್ಟ್ 2024 | 1 |
ಸೆಪ್ಟಂಬರ್ 2024 | 1 |
ಅಕ್ಟೋಬರ್ 2024 | 4 |
ನವೆಂಬರ್ 2024 | 0 |
ಡಿಸೆಂಬರ್ 2024 | 1 |
ಜನವರಿ 2025 | 0 |
ಕಾರು ಎಲೆಕ್ಟ್ರಿಕಲ್ ಅಡ್ಜೆಸ್ಟಬಲ್ ಹೊಂದಿರುವ ಚಾಲಕ ಸೀಟು ಹೊಂದಿದೆ. ಹ್ಯಾಂಡ್ಸ್-ಫ್ರೀ ಎಲೆಕ್ಟ್ರಿಕ್ ಟೈಲ್ ಗೇಟ್ ಹೊಂದಿದೆ. 580 ಲೀಟರ್ ಬೂಟ್ ಸ್ಪೇಸ್ ಹೊಂದಿದ್ದು, ಹಿಂದಿನ ಸೀಟನ್ನು ಫೋಲ್ಡಬಲ್ ನಂತರ, ಅದರ ಬೂಟ್ ಸ್ಥಳ 720 ಲೀಟರ್ ಆಗುತ್ತದೆ.
ಈ ಕಾರು ಮೆಟ್ರೋಪಾಲಿಟನ್ ಬ್ಲಾಕ್ ಇಂಟಿರಿಯರ್ ಆಂಬಿಯೆಂಟ್ ಬ್ಲಾಕ್ 'ಕ್ಲೌಡಿಯಾ' ಲೆದರ್ ಜೊತೆಗೆ ಮತ್ತು ಲೆದರ್-ಎಫೆಕ್ಟ್ ಕ್ಲಾತ್ ಜೊತೆಗೆ ಪನೋರಮಿಕ್ ಸನ್‌ರೂಫ್ ಒಳಗೊಂಡಿದೆ. ಸಿಟ್ರೊಯೆನ್ ಅಡ್ವಾನ್ಸ್ಡ್ ಕಂಫರ್ಟ್ ಪ್ರೋಗ್ರೆಸ್ಸಿವ್ ಹೈಡ್ರಾಲಿಕ್ ಕುಶನ್‌ಗಳೊಂದಿಗೆ ಸಸ್ಪೆನ್ಷನ್ ಅನ್ನು ಪಡೆಯುತ್ತದೆ. ಅಕೌಸ್ಟಿಕ್ ಲ್ಯಾಮಿನೇಟೆಡ್ ಮುಂಭಾಗದ ವಿಂಡೋಸ್ ಮತ್ತು ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ. ಇದು ಅಡ್ಜೆಸ್ಟಬಲ್ ರಿಕ್ಲೈನ್ ಆಂಗಲ್ ಜೊತೆ ಫುಲ್ ಸೈಜ್ ರಿಯರ್ ಸೀಟನ್ನು ಹೊಂದಿದೆ. ರಿಯರ್ ಎಸಿ ವೆಂಟ್ ಜೊತೆ ಡ್ಯುಯಲ್ ಜೋನ್ ಎಲೆಕ್ಟ್ರಾನಿಕ್ ಆಟೋಮೆಟಿಕ್ ಟೆಂಪ್ರೆಚರ್ ಕಂಟ್ರೋಲ್ ಮತ್ತು ಆ್ಯಕ್ಟಿವೇಟೆಡ್ ಕಾರ್ಬನ್ ಫಿಲ್ಟರ್ ಪಡೆಯುತ್ತವೆ.
ಇದು 6-ಏರ್‌ಬ್ಯಾಗ್‌ಗಳೊಂದಿಗೆ ಬ್ಲೈಂಡ್ ಸ್ಪಾಟ್ ಇನ್ಫಾರ್ಮೇಶನ್ ಸಿಸ್ಟಮ್ (BLIS), ಕಾಫಿ ಬ್ರೇಕ್ ಅಲರ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ರಿವರ್ಸ್ ಕ್ಯಾಮೆರಾ, ಫ್ರಂಟ್ ಚಾಲಕ ಮತ್ತು ಪ್ರಯಾಣಿಕರ ಸೀಟ್ ಬೆಲ್ಟ್ ಪ್ರಿಟೆನ್ಷನರ್ ಮತ್ತು ಫೋರ್ಸ್ ಲಿಮಿಟರ್‌ನೊಂದಿಗೆ ಎತ್ತರ ಅಡ್ಜೆಸ್ಟಬಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ: ಯೋಧರ ಜೀವಹಾನಿ ತಪ್ಪಿಸಲು ಬರ್ತಿದೆ ಬುಲೆಟ್ ರೆಸಿಸ್ಟೆಂಟ್ ಸೆಕ್ಯೂರಿಟಿ ಬೂತ್