ETV Bharat / bharat

ಜಮ್ಮುವಿನ ಎಲ್​ಒಸಿ ಬಳಿ ಶಂಕಿತ IED ಸ್ಫೋಟ; ಇಬ್ಬರು ಯೋಧರು ಹುತಾತ್ಮ - IED BLAST NEAR LOC

ಜಮ್ಮುವಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.

ಪ್ರಾತಿನಿಧಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Feb 11, 2025, 7:00 PM IST

ಜಮ್ಮು ಕಾಶ್ಮೀರ: ಜಮ್ಮು ವಲಯದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಮಂಗಳವಾರ ಸಂಭವಿಸಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಜಮ್ಮುವಿನ ಅಖ್ನೂರ್ ಸೆಕ್ಟರ್​ನ ಲಾಲಿಯಾಲಿಯಲ್ಲಿ ಸೇನಾ ಸಿಬ್ಬಂದಿ ಗಡಿಯ ಬಳಿ ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಸೇನೆ ತಿಳಿಸಿದೆ.

ಸ್ಪೋಟ ಸಂಭವಿಸಿರುವುದನ್ನು ವೈಟ್ ನೈಟ್ ಕಾರ್ಪ್ಸ್ ದೃಢಪಡಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, "ಲಾಲಿಯಾಲಿ ಅಖ್ನೂರ್ ಸೆಕ್ಟರ್​ನಲ್ಲಿ ಗಡಿ ಗಸ್ತು ನಡೆಯುತ್ತಿದ್ದ ವೇಳೆ ಶಂಕಿತ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಸೇನಾ ಪಡೆಗಳು ಈ ಪ್ರದೇಶದಲ್ಲಿ ನಿಯಂತ್ರಣ ಸಾಧಿಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಹುತಾತ್ಮರಾದ ಇಬ್ಬರು ಶೌರ್ಯಶಾಲಿ ಸೈನಿಕರ ಸರ್ವೋಚ್ಚ ತ್ಯಾಗಕ್ಕೆ ವೈಟ್ ನೈಟ್ ಕಾರ್ಪ್ಸ್ ವಂದಿಸುತ್ತದೆ ಮತ್ತು ಗೌರವ ಸಲ್ಲಿಸುತ್ತದೆ" ಎಂದು ಹೇಳಿದೆ.

ಭಯೋತ್ಪಾದಕರು ಇರಿಸಿದ್ದ ಐಇಡಿಯಿಂದ ಸ್ಫೋಟ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಇಂದು ಬೆಳಗ್ಗೆ ಅಖ್ನೂರ್ ಸೆಕ್ಟರ್​ನಲ್ಲಿ ತುಕ್ಕು ಹಿಡಿದ ಮೋರ್ಟಾರ್ ಶೆಲ್ ಒಂದನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ. ನಮಂದರ್ ಗ್ರಾಮದ ಬಳಿಯ ಪ್ರತಾಪ್ ಕಾಲುವೆಯಲ್ಲಿ ತುಕ್ಕು ಹಿಡಿದ ಶೆಲ್ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂದು ಎಎನ್​ಐ ವರದಿ ಮಾಡಿದೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ : ಚಲಿಸುತ್ತಿದ್ದ ಬಸ್​​ನಿಂದ ಜಿಗಿದ ವಿದ್ಯಾರ್ಥಿನಿಯರು! - GIRLS JUMP FROM RUNNING BUS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.