ETV Bharat / bharat

ನಟ ವಿಜಯ್​ಗೆ 'Y' ಕೆಟಗರಿ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ - VIJAY GETS Y CATEGORY SECURITY

8ರಿಂದ 11 ಸಶಸ್ತ್ರ ಸಿಆರ್​ಪಿಎಫ್​ ಸಿಬ್ಬಂದಿ ಹಾಗೂ ಭದ್ರತಾ ಅಧಿಕಾರಿಗಳು ತಮಿಳುನಾಡಿನ ಮಿತಿಯೊಳಗೆ ನಟ ವಿಜಯ್​ ಅವರಿಗೆ ಭದ್ರತೆ ಒದಗಿಸಲಿದ್ದಾರೆ.

Actor Vijay
ನಟ ವಿಜಯ್​ (ETV Bharat)
author img

By ETV Bharat Karnataka Team

Published : Feb 14, 2025, 3:36 PM IST

ಚೆನ್ನೈ(ತಮಿಳುನಾಡು): ನಟ ಹಾಗೂ 'ತಮಿಳಗ ವೆಟ್ರಿ ಕಳಗಂ' ಪಕ್ಷದ ಅಧ್ಯಕ್ಷ ವಿಜಯ್​ ಅವರಿಗೆ ಕೇಂದ್ರ ಗೃಹ ಸಚಿವಾಲಯದಿಂದ ರಾಜಕಾರಣಿಗಳಿಗೆ ನೀಡುವ 'ವೈ' ವರ್ಗದಡಿಯಲ್ಲಿ ಭದ್ರತೆ ಒದಗಿಸಲಾಗಿದೆ. ಈ ವಿಚಾರವನ್ನು ವಿಜಯ್‌ ಪಕ್ಷದ ಕೇಂದ್ರ ಕಚೇರಿಯೂ ದೃಢಪಡಿಸಿದೆ.

ವಿಜಯ್​ ಕಳೆದ ವರ್ಷ ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಪ್ರಾರಂಭಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ವಿಜಯ್​ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಚುನಾವಣೆಗೆ ಮುಂಚಿತವಾಗಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವೈ ಕೆಟಗರಿ ಭದ್ರತೆ ಒದಗಿಸಲಾಗಿದೆ ಎಂದು ವರದಿಯಾಗಿದೆ.

ಗೃಹ ಸಚಿವಾಲಯದ ಆದೇಶದಂತೆ, 8ರಿಂದ 11 ಸಶಸ್ತ್ರ ಸಿಆರ್​ಪಿಎಫ್​ ಸಿಬ್ಬಂದಿ ಮತ್ತು ಭದ್ರತಾ ಅಧಿಕಾರಿಗಳನ್ನೊಳಗೊಂಡ ತಂಡ ವಿಜಯ್‌ಗೆ ತಮಿಳುನಾಡು ರಾಜ್ಯದ ಮಿತಿಯೊಳಗೆ ರಕ್ಷಣೆ ನೀಡಲಿದೆ. ತಮಿಳುನಾಡಿನ ರಾಜಕಾರಣಿಯಾಗಿ ಈ ರಕ್ಷಣೆಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: ಭ್ರಷ್ಟಾಚಾರ, ಕೋಮು ಶಕ್ತಿಗಳೇ ನಮ್ಮ ಪಕ್ಷದ ಪ್ರಮುಖ ಶತ್ರುಗಳು: ವಿಜಯ್​ ದಳಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.