ನವದೆಹಲಿ : ಕತಾರ್‌ನ ಅಮಿರ್ (ರಾಜ) 'ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ' ಅವರ ಭಾರತ ಭೇಟಿಯ ನಂತರ ಭಾರತ ಮತ್ತು ಕತಾರ್ ತಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಹೆಜ್ಜೆ ಇಟ್ಟಿವೆ.
ಭಾರತದಲ್ಲಿ 10 ಬಿಲಿಯನ್ US ಡಾಲರ್ ಹೂಡಿಕೆ : ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ, ಹೂಡಿಕೆ, ಶಕ್ತಿ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಪ್ರಮುಖ ಒಪ್ಪಂದಗಳ ಬಗ್ಗೆ ಮಾತುಕತೆ ನಡೆದಿದೆ. ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಉತ್ಪಾದನೆಯಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಮೂಲಕ ಭಾರತದಲ್ಲಿ 10 ಬಿಲಿಯನ್ USD ಹೂಡಿಕೆ ಮಾಡಲು ಕತಾರ್ ಬದ್ಧವಾಗಿದೆ.
Trade featured prominently in our talks. We want to increase and diversify India-Qatar trade linkages. Our nations can also work closely in sectors like energy, technology, healthcare, food processing, pharma and green hydrogen.@TamimBinHamad pic.twitter.com/7WAmUHRanH
— Narendra Modi (@narendramodi) February 18, 2025
ಕತಾರ್‌ನಲ್ಲಿ ಭಾರತದ UPI ವ್ಯವಸ್ಥೆ: ಜತೆಗೆ ಆರ್ಥಿಕ ಸಹಯೋಗ ಮತ್ತು ಉಭಯ ರಾಷ್ಟ್ರಗಳು ತಮ್ಮ ಶಕ್ತಿ ಪಾಲುದಾರಿಕೆಯನ್ನು ವಿಸ್ತರಿಸಲು ಮತ್ತು ಕತಾರ್‌ನಲ್ಲಿ ಭಾರತದ UPI ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಒಪ್ಪಿಕೊಂಡಿವೆ. ಹೆಚ್ಚುವರಿಯಾಗಿ ಹಣಕಾಸು, ಕ್ರೀಡೆ, ಯುವಜನತೆ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ಸಹಕಾರವನ್ನು ಹೆಚ್ಚಿಸಲು ವಿವಿಧ ತಿಳಿವಳಿಕೆ ಪತ್ರಗಳಿಗೆ ಸಹಿ ಮಾಡಲಾಗಿದೆ.
ಗುಜರಾತ್ನಲ್ಲಿ ಕತಾರ್ ನ್ಯಾಷನಲ್ ಬ್ಯಾಂಕ್ : ಕತಾರ್ ಹೂಡಿಕೆ ಪ್ರಾಧಿಕಾರ (QIA) ಭಾರತದಲ್ಲಿ ಕಚೇರಿಯನ್ನು ತೆರೆಯುತ್ತದೆ. ಎರಡೂ ರಾಷ್ಟ್ರಗಳೂ 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಪಕ್ಷೀಯಗೊಳಿಸುವ ಗುರಿಯನ್ನು ಹೊಂದಿವೆ. ಕತಾರ್‌ನಲ್ಲಿರುವ ಕತಾರ್ ನ್ಯಾಷನಲ್ ಬ್ಯಾಂಕ್ (ಕ್ಯೂಎನ್‌ಬಿ) ಪಾಯಿಂಟ್ ಆಫ್ ಸೇಲ್ಸ್‌ನಲ್ಲಿ ಭಾರತದ ಯುಪಿಐ ಕಾರ್ಯಾಚರಣೆ ಮತ್ತು ಗಿಫ್ಟ್(ಗುಜರಾತ್) ಸಿಟಿಯಲ್ಲಿ ಕಚೇರಿಯನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಕತಾರ್ ನ್ಯಾಷನಲ್ ಬ್ಯಾಂಕ್ ಉಪಸ್ಥಿತಿಯನ್ನು ವಿಸ್ತರಿಸಲಾಗುವುದು ಎಂದು ಕತಾರ್ ಹೇಳಿದೆ.
ಕತಾರ್ ಪ್ರಜೆಗಳಿಗೆ ಇ - ವೀಸಾ ಸೌಲಭ್ಯ: ಮುಖ್ಯವಾಗಿ ಕತಾರ್ ಪ್ರಜೆಗಳಿಗೆ ಭಾರತೀಯ ಇ-ವೀಸಾ ಸೌಲಭ್ಯದ ವಿಸ್ತರಣೆ ಇರುತ್ತದೆ. ಭಾರತ ಮತ್ತು ಕತಾರ್ ರಾಷ್ಟ್ರ ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವದ ಸ್ಥಾಪನೆಯ ಕುರಿತು ಮತ್ತು ಆದಾಯದ ಮೇಲಿನ ತೆರಿಗೆಗಳಿಗೆ ಸಂಬಂಧಿಸಿದಂತೆ ಡಬಲ್ ತೆರಿಗೆ ಮತ್ತು ಹಣಕಾಸಿನ ವಂಚನೆಯನ್ನು ತಡೆಗಟ್ಟುವ ಪರಿಷ್ಕೃತ ಒಪ್ಪಂದಕ್ಕೆ ಸಹಿ ಹಾಕಿವೆ.
ಇನ್ನು ಎರಡು ದಿನಗಳ ಭೇಟಿಗಾಗಿ ಸೋಮವಾರ ಭಾರತಕ್ಕೆ ಆಗಮಿಸಿದ ಕತಾರ್ ರಾಜನಿಗೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಗಾರ್ಡ್ ಆಫ್ ಆನರ್ ಮತ್ತು ವಿಧ್ಯುಕ್ತ ಸ್ವಾಗತ ನೀಡಲಾಯಿತು.
ಇದನ್ನೂ ಓದಿ : ರಾಷ್ಟ್ರಪತಿ ಭವನದಲ್ಲಿ ಕತಾರ್ ದೊರೆಗೆ ಗಾರ್ಡ್ ಆಫ್ ಆನರ್, ಸಾಂಪ್ರದಾಯಿಕ ಸ್ವಾಗತ- ವಿಡಿಯೋ