ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬ್ಯುಸಿ ಆಗಿದ್ದಾರೆ. ಇದರ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾಗಿಯಾಗಲಿದ್ದಾರೆ. ಭರ್ಜರಿ ಫಾರ್ಮ್ನಲ್ಲಿರುವ ಪಾಂಡ್ಯ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚುತ್ತಿದ್ದಾರೆ.
ಇದರ ನಡುವೆ ಪಾಂಡ್ಯ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಇವರು ಕ್ರಿಕೆಟ್ ಜೀವನಕ್ಕಿಂತಲೂ ತಮ್ಮ ವೈಯಕ್ತಿಕ ಜೀವನದಿಂದಲೇ ಸದಾ ಸುದ್ಧಿಯಲ್ಲಿರುತ್ತಾರೆ. ನತಾಶಾ ಅವರೊಂದಿಗೆ ವಿಚ್ಛೇದನ ಪಡೆದುಕೊಂಡ ಬಳಿಕ ಯಾರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಮತ್ತು ಅವರ ವೈಯಕ್ತಿಕ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಪಾಂಡ್ಯಗೆ ಕಾರ್ಗಳ ಮೇಲೆ ಕ್ರೇಜ್ ಇರುವುದು ಗೊತ್ತಿರುವ ವಿಷಯವೇ. ಇದೆ ವಿಚಾರವಾಗಿ ಪೋಸ್ಟ್ಹಂಚಿಕೊಂಡಿದ್ದಾರೆ. ಇದರಲ್ಲಿ ತಾವು ಕಾರಿನ ಜೊತೆ ಡ್ರೈವಿಂಗ್ ಇಷ್ಟಪಡುವುದಾಗಿ ತಿಳಿಸಿದ್ದಾರೆ. ಬಿಳಿ ಬಣ್ಣದ ಟಿ-ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್‌ನೊಂದಿಗೆ, ಬೆಲೆಬಾಳುವ ಗಡಿಯಾರ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟ್ಗೆ 'Love A Good Drive' ಎಂಬ ಶಿರ್ಷಿಕೆ ನೀಡಿದ್ದಾರೆ.
ಇದಕ್ಕೆ ನೆಟ್ಟಿಗರು ಕೂಡ ಕಾಮೆಂಟ್ಗಳನ್ನು ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಸದಾ ಹೀಗೆ ಖುಷಿಯಿಂದಿರಿ ಎಂದಿದ್ದಾರೆ. ಮತ್ತೆ ಕೆಲವರು ನಿಮ್ಮ ಜೊತೆ ರಿಷಭ್ ಪಂತ್ ಅವರನ್ನು ಕರೆದುಕೊಂಡು ಹೋಗಬೇಡಿ ಎಂದು ಕಾಲೆಳೆದಿದ್ದಾರೆ.
ಹಾರ್ದಿಕ್-ನತಾಶಾ ವಿಚ್ಛೇದನ: ಕಳೆದ ವರ್ಷದ ಜುಲೈನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಪಡೆದುಕೊಂಡಿದ್ದರು. 4 ವರ್ಷಗಳ ದಾಂಪತ್ಯಕ್ಕೆ ಇಬ್ಬರು ಫುಲ್ಸ್ಟಾಪ್ ಇಟ್ಟಿದ್ದರು. 2019ರಲ್ಲಿ ಪಾಂಡ್ಯ ಸರ್ಬಿಯಾದ ನಟಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ದುಬೈನಲ್ಲಿ ವಿನೂತನ ರೀತಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2023ರಲ್ಲಿ ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಅದರೆ ಭಿನ್ನಾಭಿಪ್ರಾಯದಿಂದಾಗಿ ಜುಲೈ 18, 2024ರಂದು ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಇದರ ಬೆನ್ನಲ್ಲೆ ನತಾಶಾ ತನ್ನ ಮಗ ಅಗಸ್ತ್ಯನೊಂದಿಗೆ ಸೆರ್ಬಿಯಾಕ್ಕೆ ವಾಪಸಾದರು.
Happy Valentine’s Day ❤️ pic.twitter.com/xYJ7fyWBXy
— hardik pandya (@hardikpandya7) February 14, 2024
ಬ್ರಿಟಿಷ್ ಗಾಯಕಿ ಜೊತೆ ಡೇಟಿಂಗ್: ನತಾಶಾ ಜೊತೆ ವಿಚ್ಚೇದನ ಪಡೆದ ಬಳಿಕ ಹಾರ್ದಿಕ್ ಪಾಂಡ್ಯ ಬ್ರಿಟಿಷ್ ಖ್ಯಾತ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಅಲ್ಲದೆ ಈ ಇಬ್ಬರೂ ಜೊತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲಣಾದಲ್ಲಿ ಹಂಚಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ: ಸಂಸದೆ ಜೊತೆ ಮದುವೆ ಫಿಕ್ಸ್ ಮಾಡಿಕೊಂಡ T20 ಸ್ಪೆಷಲಿಸ್ಟ್!