ETV Bharat / state

ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧದ ಪ್ರಕರಣ ರದ್ದು - HIGH COURT

ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಗಮನಿಸಿದರೆ ಆರೋಪಿಗಳನ್ನು ನ್ಯಾಯಕ್ಕೆ ಗುರಿಪಡಿಸಬಹುದಾದ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮಾಜಿ ಶಾಸಕ ಅಖಂಡ ಶ್ರೀನಿವಾಸ್‌ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಹೈಕೋರ್ಟ್,High court, Akhanda Srinivas murthy
ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌ (ETV Bharat)
author img

By ETV Bharat Karnataka Team

Published : Feb 11, 2025, 8:31 PM IST

ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಡುಗೆ ಕುಕ್ಕರ್‌ಗಳ ಮೇಲೆ ತಮ್ಮ ಭಾವಚಿತ್ರ ಇರುವ ಸಂಬಂಧ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ಇಂದು ರದ್ದುಗೊಳಿಸಿದೆ.

ಪ್ರಕರಣ ರದ್ದು ಕೋರಿ ಅಖಂಡ ಶ್ರೀನಿವಾಸಮೂರ್ತಿ ಮತ್ತು ಟಿ.ಎನ್‌.ಆರ್‌.ರೋಹಿತ್‌ ಎಂಬವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ, ಈ ಆದೇಶ ನೀಡಿತು.

ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಹಾಗಾಗಿ ಪ್ರಕರಣ ಮುಂದುವರಿಸಿದರೆ ಕಾನೂನಿನ ದುರ್ಬಳಕೆ ಆಗಲಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 133 ಮತ್ತು ಐಪಿಸಿ ಸೆಕ್ಷನ್‌ 171ಇ ಮತ್ತು 171 ಎಫ್‌ ಅಡಿ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿದೆ.

ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಗಮನಿಸಿದರೆ ಆರೋಪಿಗಳನ್ನು ನ್ಯಾಯಕ್ಕೆ ಗುರಿಪಡಿಸಬಹುದಾದ ಯಾವುದೇ ಸಾಕ್ಷ್ಯಗಳಿಲ್ಲ. ಜೆ.ಪಿ.ನಡ್ಡಾ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಲಯ ಈಗಾಗಲೇ ಹೇಳಿರುವಂತೆ ಯಾವುದೇ ಆಧಾರ ಅಥವಾ ಸಾಕ್ಷಿ ಇಲ್ಲದೆ, ಕ್ರಿಮಿನಲ್‌ ಪ್ರಕರಣ ಮುಂದುವರಿಸಿದರೆ ಅದು ಕಾನೂನಿನ ದುರುಪಯೋಗವಾಗಲಿದೆ ಎಂದು ಪೀಠ ತಿಳಿಸಿದೆ.

ಅಲ್ಲದೆ, ಈ ಮೊದಲು ಇದೇ ನ್ಯಾಯಪೀಠ ವಿಜೇಶ್‌ ಪಿಳ್ಳೈ ಪ್ರಕರಣದಲ್ಲಿ ಮಾಹಿತಿದಾರರು (ದೂರುದಾರರು) ಅಥವಾ ಸ್ಟೇಷನ್‌ ಹೌಸ್‌ ಅಧಿಕಾರಿ ಪ್ರಕರಣ ದಾಖಲಿಸುವ ಮುನ್ನ ಮ್ಯಾಜಿಸ್ಪ್ರೇಟ್‌ ಅವರಿಂದ ಅನುಮತಿ ಪಡೆಯಬೇಕು. ಆದರೆ ಮಾಹಿತಿದಾರನು ಮ್ಯಾಜಿಸ್ಪ್ರೇಟ್‌ ಅನುಮತಿ ಪಡೆದಿಲ್ಲ ಎಂದಾಕ್ಷಣ ಇಡೀ ಪ್ರಕ್ರಿಯೆ ಸರಿಯಲ್ಲವೆಂದು ಹೇಳಲಾಗದೆಂದು ನ್ಯಾಯಾಲಯ ಆದೇಶಿಸಿದೆ.

ಮ್ಯಾಜಿಸ್ಪ್ರೇಟ್‌ ಅನುಮತಿ ಪಡೆದಿಲ್ಲ, ಹಾಗಾಗಿ ಪ್ರಕರಣವನ್ನು ಮತ್ತೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ವರ್ಗಾಯಿಸಬೇಕೆಂಬ ವಾದ ಒಪ್ಪಲಾಗದು. ಈ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸುವಲ್ಲಿ ಲೋಪಗಳಾಗಿರುವುದು ಸತ್ಯ. ಹಾಗಾಗಿ ಅದರ ಆಧಾರದಲ್ಲಿ ವಿಚಾರಣಾ ಪ್ರಕ್ರಿಯೆಗಳನ್ನು ಮುಂದುವರಿಸಿದರೆ ಕಾನೂನು ದುರ್ಬಳಕೆ ಆಗುವುದಲ್ಲದೆ, ನ್ಯಾಯದಾನ ಸರಿಯಾಗಿ ಆಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರ ಪರ ವಕೀಲರು, ಸಿಆರ್‌ಪಿಸಿ ಸೆಕ್ಷನ್‌ 155(2)ರಡಿ ಮ್ಯಾಜಿಸ್ಪ್ರೇಟ್‌ ದೂರು ದಾಖಲಿಸಲು ಅನುಮತಿ ನೀಡುವಾಗ ವಿವೇಚನೆ ಬಳಸಿಲ್ಲ ಮತ್ತು ನಿಯಮದಂತೆ ಮಾಹಿತಿದಾರನು ಮ್ಯಾಜಿಸ್ಪ್ರೇಟ್‌ ಕೋರ್ಟ್‌ನ ಅನುಮತಿ ಪಡೆದಿಲ್ಲ. ಆದರೆ ಸ್ಟೇಷನ್‌ ಹೌಸ್‌ ಅಧಿಕಾರಿ ಅನುಮತಿ ಪಡೆದಿರುವುದು ಕಾನೂನಿನ ಲೋಪವಾಗಿದೆ. ಹಾಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ 171ಇ ಮತ್ತು 171ಎಫ್‌ ಹಾಗೂ ಆರ್‌ಪಿ ಕಾಯಿದೆ ಸೆಕ್ಷನ್‌ 133 ರಡಿ ಹೂಡಲಾಗಿರುವ ಪ್ರಕರಣ ಊರ್ಜಿತವಾಗುವುದಿಲ್ಲಎಂದು ವಾದ ಮಂಡಿಸಿದ್ದರು.

ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪ್ರಾಸಿಕ್ಯೂಷನ್‌ ಪರ ವಕೀಲರು, ಮಾಹಿತಿದಾರನು ಮ್ಯಾಜಿಸ್ಪ್ರೇಟ್‌ ಕೋರ್ಟ್‌ನ ಅನುಮತಿ ಪಡೆಯಬೇಕೆಂಬ ನಿಯಮ ಕಡ್ಡಾಯವೇನಲ್ಲ. ಮೇಲ್ನೋಟಕ್ಕೆ ಆರೋಪಕ್ಕೆ ತಕ್ಕ ಸಾಕ್ಷಿಗಳಿದ್ದು, ಈಗಾಗಲೇ ಆರೋಪಪಟ್ಟಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸತ್ಯಾಂಶ ವಿಚಾರಣೆಯಿಂದಲೇ ಹೊರಬರಬೇಕಿದ್ದು, ವಿಚಾರಣೆ ಮುಂದುವರಿಸಲು ಅನುವು ಮಾಡಿಕೊಡಬೇಕು ಎಂದು ಕೋರಿದ್ದರು.

ಇದನ್ನೂ ಓದಿ: 1000 ಕೋಟಿ ರೂ. ಆರೋಪ: ಯತ್ನಾಳ್​ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್​

ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.