Google Messages: ಜನಪ್ರಿಯ ಮೆಸೇಜಿಂಗ್ ಆ್ಯಪ್ ಗೂಗಲ್ ಮೆಸೇಜಸ್ ಹೊಸ ಫೀಚರ್ಸ್ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಇತರ ಮೆಸೇಜಿಂಗ್ ಆ್ಯಪ್‌ಗಳಿಗೆ ಪೈಪೋಟಿ ನೀಡಲು ಈಗಾಗಲೇ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿರುವ ಕಂಪೆನಿ, ಇದೀಗ ತನ್ನ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ ಮೂಲಕ ನೇರ ವಾಟ್ಸ್‌ಆ್ಯಪ್ ವಿಡಿಯೋ ಕಾಲಿಂಗ್ ವೈಶಿಷ್ಟ್ಯ ನೀಡಲು ಯೋಜಿಸುತ್ತಿದೆ.
ಗೂಗಲ್ ತನ್ನ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಹೆಚ್ಚು ಆಕರ್ಷಕವಾಗಿಸಲು ಬಹಳ ಸಮಯದಿಂದ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ವಾಟ್ಸ್‌ಆ್ಯಪ್‌ನಂತೆಯೇ ಹಲವು ವೈಶಿಷ್ಟ್ಯಗಳನ್ನು ಸೇರಿಸುತ್ತಿದೆ. ಶೀಘ್ರದಲ್ಲೇ ಅದರ ಅಪ್ಲಿಕೇಶನ್ ಮೂಲಕ ಚಾಟ್ ಮಾಡುವಾಗ ಸ್ಕ್ರೀನ್ ಮೇಲೆ ವಿಡಿಯೋ ಕಾಲ್ ಆಪ್ಷನ್ ಕಾಣಿಸಿಕೊಳ್ಳುತ್ತದೆ. ಈ ಐಕಾನ್ ಮೇಲಿನ ಬಲಭಾಗದಲ್ಲಿ ಕಾಣಿಸುತ್ತದೆ.
ವಿಡಿಯೋ ಕಾಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ನೀವು ಡೈರೆಕ್ಟ್ ಆಗಿ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮಾಡಬಹುದು. ಗೂಗಲ್ ಮೆಸೇಜ್ ಅಪ್ಲಿಕೇಶನ್‌ನಿಂದ ವಾಟ್ಸ್‌ಆ್ಯಪ್‌ಗೆ ಬದಲಾಯಿಸಲು ಯಾವುದೇ ಸಮಸ್ಯೆ ಇಲ್ಲ. ಬಳಕೆದಾರರು ವಾಟ್ಸ್‌ಆ್ಯಪ್ ಬಳಸುತ್ತಿಲ್ಲದಿದ್ದರೆ ಕಾಲ್ ಡೈರೆಕ್ಟ್ ಆಗಿ ಗೂಗಲ್ ಮೀಟ್ಗೆ ಕನೆಕ್ಟ್ ಆಗುತ್ತದೆ.
ಈ ಫೀಚರ್ಸ್ ಸಹಾಯದಿಂದ ನೀವು ಒಬ್ಬರಿಗೆ ಮಾತ್ರ ವಿಡಿಯೋ ಕರೆ ಮಾಡಬಹುದು. ಆದ್ರೆ ಗ್ರೂಪ್ ಕರೆಗಳನ್ನು ಸಪೋರ್ಟ್ ಮಾಡುವುದಿಲ್ಲ. ಆದರೆ ಇದನ್ನು ಬಳಕೆದಾರರಿಗೆ ಯಾವಾಗ ಪರಿಚಯಿಸಲಾಗುವುದು ಎಂಬುದನ್ನು ಗೂಗಲ್ ಘೋಷಿಸಿಲ್ಲ. ಮುಂಬರುವ ವಾರಗಳಲ್ಲಿ ಸೌಲಭ್ಯ ಲಭ್ಯವಾಗುವ ನಿರೀಕ್ಷೆಯಿದೆ. ಪ್ರಸ್ತುತ ಬೀಟಾ ಹಂತದಲ್ಲಿದ್ದು, ಸಾಮಾನ್ಯ ಬಳಕೆದಾರರು ಅಪ್ಲಿಕೇಶನ್ ಬಳಸಲು ಸಾಧ್ಯವಿಲ್ಲ.
ಗೂಗಲ್ ಮೆಸೇಜ್ ಇತ್ತೀಚೆಗೆ ‘Your profile’ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಬಳಕೆದಾರರಿಗೆ ತಮ್ಮ ಪ್ರೊಫೈಲ್ ಮೇಲೆ ನಿಯಂತ್ರಣ ಸಾಧಿಸಲು ಇದನ್ನು ಪರಿಚಯಿಸಲಾಗಿದೆ.
ವಾಟ್ಸ್‌ಆ್ಯಪ್ ಇಂದಿನ ದಿನಗಳಲ್ಲಿ ಜನಪ್ರಿಯ ವಿಡಿಯೋ ಕಾಲ್ ಮಾಡುವ ಅಪ್ಲಿಕೇಶನ್ ಆಗಿದೆ. ಭಾರತದಲ್ಲಿ ಕೋಟ್ಯಂತರ ಬಳಕೆದಾರರು ವಾಟ್ಸ್‌ಆ್ಯಪ್ ಬಳಸುತ್ತಾರೆ. ದೇಶದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅತೀ ಹೆಚ್ಚು ಡೌನ್‌ಲೋಡ್ ಮಾಡಲಾದ ಎರಡನೇ ಅಪ್ಲಿಕೇಶನ್ ವಾಟ್ಸ್‌ಆ್ಯಪ್ ಆಗಿ ಉಳಿದಿದೆ. ವಾಟ್ಸ್‌ಆ್ಯಪ್ ವಿಶ್ವದ 8 ನೇ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿದೆ.
ಇದನ್ನೂ ಓದಿ: ಅತ್ಯಂತ ಕೈಗೆಟುಕುವ ದರದಲ್ಲಿ ಮಾಸಿಕ ರೀಚಾರ್ಜ್ ಪ್ಲಾನ್ ಘೋಷಿಸಿದ Jio