IRCTC Sundar Saurashtra Package: ಗುಜರಾತ್‌ನ ಸಬರಮತಿ ಆಶ್ರಮ, ನರ್ಮದಾ ನದಿ ದಡದಲ್ಲಿರುವ ಏಕತೆಯ ಪ್ರತಿಮೆ, ಶ್ರೀಕೃಷ್ಣ ಆಳ್ವಿಕೆ ನಡೆಸಿದ ದ್ವಾರಕಾ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯ ವಿಶೇಷವಾಗಿ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಈ ಸುಂದರಮಯ ಸ್ಥಳಗಳನ್ನು ನೋಡಲು ಅನೇಕರು ಬಯಸುತ್ತಾರೆ. ನೀವೂ ಕೂಡ ಈ ಲಿಸ್ಟ್ನಲ್ಲಿ ಇದ್ದೀರಾ? ಹೌದು, ಎಂದಾದರೆ, ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(IRCTC) ಉತ್ತಮ ಪ್ರವಾಸದ ಪ್ಯಾಕೇಜ್ ತಂದಿದೆ.
ಪ್ರಯಾಣ ರೈಲಿನಲ್ಲಿ ಹೈದರಾಬಾದ್‌ನಿಂದ ಆರಂಭವಾಗುತ್ತದೆ. ಏಳು ರಾತ್ರಿ ಹಾಗೂ ಎಂಟು ಹಗಲುಗಳನ್ನು ಪ್ರವಾಸ ಒಳಗೊಂಡಿದ್ದು ವಡೋದರಾ, ಅಹಮದಾಬಾದ್, ದ್ವಾರಕಾ, ಸೋಮನಾಥ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಬಹುದು.
ಸಿಕಂದರಾಬಾದ್ ಹೊರತುಪಡಿಸಿ ಕಲಬುರಗಿ, ಕಲ್ಯಾಣ್, ಪುಣೆ ಮತ್ತು ಸೋಲಾಪುರ ನಿಲ್ದಾಣಗಳಲ್ಲೂ ಈ ರೈಲು ಹತ್ತಬಹುದಾಗಿದೆ. ಪ್ರವಾಸ ಪೂರ್ಣಗೊಳಿಸಿದ ನಂತರ, ನೀವು ಇದೇ ರೈಲು ನಿಲ್ದಾಣಗಳಲ್ಲಿ ಇಳಿಯಬಹುದು. ಲಭ್ಯವಿರುವ ಪ್ರವಾಸದ ದಿನಾಂಕಗಳನ್ನು ಅವಲಂಬಿಸಿ ಪ್ಯಾಕೇಜ್ ಪ್ರತಿ ಬುಧವಾರ ಲಭ್ಯ.
ಪ್ರಯಾಣದ ವಿವರ:
1ನೇ ದಿನ: ಸಿಕಂದರಾಬಾದ್- ಪೋರಬಂದರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ- 20967) ಮೊದಲ ದಿನ ಮಧ್ಯಾಹ್ನ 3 ಗಂಟೆಗೆ ಸಿಕಂದರಾಬಾದ್‌ನಿಂದ ಹೊರಡುವುದು. ಇಡೀ ರಾತ್ರಿ ಪ್ರಯಾಣ.
2ನೇ ದಿನ: 11 ಗಂಟೆಗೆ ವಡೋದರಾ ರೈಲು ನಿಲ್ದಾಣ ತಲುಪುವುದು. ಅಲ್ಲಿಂದ ಪಿಕ್ ಅಪ್ ಮಾಡಿ ಹಾಗೂ ಮೊದಲೇ ಬುಕ್ ಮಾಡಿದ ಹೋಟೆಲ್‌ಗೆ ಕರೆದೊಯ್ಯಲಾಗುತ್ತದೆ. ಫ್ರೆಶ್ ಅಪ್ ಆದ ನಂತರ, ಮಧ್ಯಾಹ್ನ ಏಕತೆಯ ಪ್ರತಿಮೆ ವೀಕ್ಷಣೆ(ಪ್ರವೇಶ ಟಿಕೆಟ್‌ಗಳನ್ನು ಪ್ರಯಾಣಿಕರು ತೆಗೆದುಕೊಳ್ಳಬೇಕು). ಅದರ ನಂತರ ಬರೋಡಕ್ಕೆ ಹಿಂತಿರುಗುವುದು. ಆ ರಾತ್ರಿ ಇಲ್ಲಿಯೇ ಉಳಿಯುವುದು.
3ನೇ ದಿನ: ಹೋಟೆಲ್‌ನಿಂದ ಚೆಕ್‌ಔಟ್ ಮಾಡಿದ ಬಳಿಕ ಲಕ್ಷ್ಮಿ ವಿಲಾಸ ಅರಮನೆಗೆ ಭೇಟಿ. ನಂತರ ಅಹಮದಾಬಾದ್‌ಗೆ ಹೋಗುವುದು. ಸಬರಮತಿ ಆಶ್ರಮ ಹಾಗೂ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ. ಅಹಮದಾಬಾದ್‌ನಲ್ಲಿ ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿ ರಾತ್ರಿ ತಂಗುವುದು.
4ನೇ ದಿನ: ಜಾಮ್‌ನಗರ ಕೋಟೆ ಹಾಗೂ ವಸ್ತುಸಂಗ್ರಹಾಲಯಕ್ಕೆ ಭೇಟಿ. ಸಂಜೆ ದ್ವಾರಕಾ ತಲುಪುವುದು. ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿ ಉಳಿಯುವುದು.
5ನೇ ದಿನ: ಬೆಳಿಗ್ಗೆ ದ್ವಾರಕಾದೀಶ್ ದೇವಸ್ಥಾನಕ್ಕೆ ಭೇಟಿ. ಬೆಟ್ ದ್ವಾರಕಾ ಮತ್ತು ನಾಗೇಶ್ವರ ದೇವಸ್ಥಾನ ವೀಕ್ಷಿಸಿದ ಬಳಿಕ ದ್ವಾರಕೆಗೆ ಹಿಂತಿರುಗುವುದು. ರಾತ್ರಿ ದ್ವಾರಕೆಯಲ್ಲಿ ತಂಗುವುದು.
6ನೇ ದಿನ: ಸೋಮನಾಥಕ್ಕೆ ಪ್ರಯಾಣಿಸುವುದು. ದಾರಿಯಲ್ಲಿ ಪೋರಬಂದರ್ ಕೀರ್ತಿ ಮಂದಿರ ಹಾಗೂ ಸುಧಾಮ ದೇವಸ್ಥಾನಕ್ಕೆ ಭೇಟಿ. ಸೋಮನಾಥ ತಲುಪಿದ ಬಳಿಕ ಸೋಮನಾಥ ಜ್ಯೋತಿರ್ಲಿಂಗ ಸೇರಿದಂತೆ ಇತರ ದೇವಾಲಯಗಳಿಗೆ ಭೇಟಿ ನೀಡಿ, ಪೋರಬಂದರ್ ತಲುಪುವುದು.
7ನೇ ದಿನ: ಮಧ್ಯರಾತ್ರಿ 1 ಗಂಟೆಗೆ ಪೋರಬಂದರ್- ಸಿಕಂದರಾಬಾದ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ- 20968) ಸಿಕಂದರಾಬಾದ್‌ಗೆ ಹಿಂತಿರುಗುತ್ತದೆ. ಇದು ರಾತ್ರಿಯ ಪ್ರಯಾಣ.
8ನೇ ದಿನ: ಬೆಳಗ್ಗೆ 9ಕ್ಕೆ ಸಿಕಂದರಾಬಾದ್ ತಲುಪುವ ಮೂಲಕ ಪ್ರವಾಸ ಮುಕ್ತಾಯ.
ಪ್ಯಾಕೇಜ್ನ ವಿವರ:
- ಕಂಪರ್ಟ್ನಲ್ಲಿ ಡಬಲ್ ಸೀಟ್ ಹಂಚಿಕೆಗೆ (ಪ್ರತಿ ವ್ಯಕ್ತಿಗೆ ಟಿಕೆಟ್ ಬೆಲೆ) ₹29,210
- ಟ್ರಿಪಲ್ ಸೀಟು ಹಂಚಿಕೆಗಾಗಿ ₹28,680
- 5-11 ವರ್ಷದೊಳಗಿನ ಮಕ್ಕಳು ಹಾಸಿಗೆ ಸಹಿತ ₹22,810, ಹಾಸಿಗೆ ರಹಿತ ₹21,250
- ಸ್ಟ್ಯಾಂಡರ್ಡ್‌ನಲ್ಲಿ ಡಬಲ್ ಹಂಚಿಕೆಗೆ ₹26,350
- ಟ್ರಿಪಲ್ ಹಂಚಿಕೆಗೆ ₹25,820
- 5-11 ವರ್ಷದೊಳಗಿನ ಮಕ್ಕಳು ಹಾಸಿಗೆ ಸಹಿತ ₹19,950, ಹಾಸಿಗೆ ರಹಿತ ₹18,390 ಪಾವತಿಸಬೇಕಾಗುತ್ತದೆ.
ಪ್ಯಾಕೇಜ್‌ನಲ್ಲಿರುವ ಸೌಲಭ್ಯಗಳು:
- ರೈಲು ಟಿಕೆಟ್‌ಗಳು (3 ಎಸಿ, ಸ್ಲೀಪರ್)
- ಎಸಿ ಕೊಠಡಿಯಲ್ಲಿ ವಸತಿ ಮತ್ತು ಎಸಿ ಸಾರಿಗೆಯನ್ನು ಪ್ಯಾಕೇಜ್‌ಗೆ ಅನುಗುಣವಾಗಿ ಸೌಲಭ್ಯ.
- ನಾಲ್ಕು ದಿನಗಳ ಕಾಲ IRCTC ಯಿಂದ ಬೆಳಿಗ್ಗೆ ಉಪಹಾರ ಹಾಗೂ ರಾತ್ರಿಯ ಊಟ.
- ಪ್ರಯಾಣ ವಿಮೆ ಲಭ್ಯವಿದೆ.
- ಪ್ರಸ್ತುತ ಈ ಪ್ಯಾಕೇಜ್ ಜನವರಿ 8 ರಂದು ಲಭ್ಯವಿದೆ. ಇತರ ದಿನಾಂಕಗಳಲ್ಲಿಯೂ ಲಭ್ಯ.
- ಪ್ರವಾಸದ ಬುಕ್ಕಿಂಗ್ ಮತ್ತು ಈ ಪ್ಯಾಕೇಜ್‌ಗೆ ಸಂಬಂಧಿಸಿದ ಷರತ್ತುಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಈವೆಬ್ಸೈಟ್ ವೀಕ್ಷಿಸಿ: https://www.irctctourism.com/pacakage_description?packageCode=SHR066