ETV Bharat / technology

ಇಂಟ್ರೆಸ್ಟಿಂಗ್​ ಫೀಚರ್ಸ್​ ಪರಿಚಯಿಸಿದ ವಾಟ್ಸ್​ಆ್ಯಪ್​ ​: ಇನ್ಮುಂದೆ ಚಾಟ್​ನಲ್ಲಿ ಫನ್ನೋ ಫನ್ - WHATSAPP ADDED NEW FEATURES

Whatsapp Added New Features: ಜನಪ್ರಿಯ ಮೆಸೇಜಿಂಗ್​ ಆ್ಯಪ್​ ವಾಟ್ಸ್​​ಆ್ಯಪ್​​ ​ ಸದ್ಯ ತನ್ನ ಬಳಕೆದಾರರಿಗೆ ಅನುಕೂಲಕರವಾದ ಫೀಚರ್ಸ್​ಗಳನ್ನು ಪರಿಚಯಿಸಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

WHATSAPP NEW FEATURES  WHATSAPP NEW UPDATE  WHATSAPP CAMERA EFFECT  WHATSAPP NEWS
ಇಂಟ್ರೆಸ್ಟಿಂಗ್​ ಫೀಚರ್ಸ್​ ಅನ್ನು ಪರಿಚಯಿಸಿದ ವಾಟ್ಸಾಪ್ (Photo Credit- WhatsApp)
author img

By ETV Bharat Tech Team

Published : Jan 16, 2025, 4:07 PM IST

Whatsapp Added New Features: ವಾಟ್ಸ್​​​ಆ್ಯಪ್​​ ಬಳಕೆದಾರರಿಗೆ ಶುಭ ಸುದ್ದಿ. ಜನಪ್ರಿಯ ಇನ್ಸ್ಟೆಂಟ್ ಮೆಸೇಜಿಂಗ್ ಆಪ್ ವಾಟ್ಸ್​ಆ್ಯಪ್​ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಈಗ ಬಳಕೆದಾರರಿಗೆ ವಿಡಿಯೋಗಳು ಮತ್ತು ಫೋಟೋಗಳನ್ನು ನೇರವಾಗಿ ಚಾಟ್‌ನಲ್ಲಿ ಎಡಿಟ್​ ಮಾಡಲು 30 ರೀತಿಯ ವಿಜುವಲ್​ ಎಫೆಕ್ಟ್​ಗಳನ್ನು ನೀಡುತ್ತದೆ.

ಆ್ಯಪ್​ನಿಂದ ಮತ್ತೊಬ್ಬರಿಗೆ ಸ್ಟಿಕ್ಕರ್ ಪ್ಯಾಕ್‌ಗಳನ್ನು ನೇರವಾಗಿ ಹಂಚಿಕೊಳ್ಳಲು ಮತ್ತು ಸೆಲ್ಫಿಗಳಿಂದ ಸ್ಟಿಕ್ಕರ್‌ಗಳನ್ನು ಕ್ರಿಯೆಟ್​ ಮಾಡಲು ಹೊಸದಾಗಿ ಫೀಚರ್ಸ್​ವೊಂದನ್ನು ಸಹ ಪರಿಚಯಿಸಿದೆ. ಈ ಆ್ಯಪ್​ ರಿಯಾಕ್ಷನ್​ ಫೀಚರ್​​ ಅನ್ನು ಸಹ ಸುಧಾರಿಸಿದೆ. ವಾಟ್ಸ್​​ಆ್ಯಪ್​​​​​​ನಲ್ಲಿ ಹೊಸ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.

ಕ್ಯಾಮೆರಾ ಎಫೆಕ್ಟ್ಸ್: ವಾಟ್ಸ್​ಆ್ಯಪ್​ ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಡಿಯೋ ಕರೆಗಳಿಗಾಗಿ ಹೊಸ ಫಿಲ್ಟರ್‌ಗಳು, ಬ್ಯಾಕ್​ಗ್ರೌಂಡ್ಸ್​ ಮತ್ತು ಎಫೆಕ್ಟ್‌ಗಳನ್ನು ಪರಿಚಯಿಸಿತು. ಈ ಫೀಚರ್ಸ್​ ವಿಡಿಯೋ ಕರೆಗಳಿಗೆ ಮಾತ್ರ ಇತ್ತು. ಈಗ ವಾಟ್ಸ್​​​ಆ್ಯಪ್​​ ಕ್ಯಾಮೆರಾ ಬಳಸಿ ತೆಗೆದ ವಿಡಿಯೋಗಳು ಮತ್ತು ಫೋಟೋಗಳಿಗೂ ಈ ಫೀಚರ್ಸ್​ ಲಭ್ಯವಿದೆ. ಬಳಕೆದಾರರು ವಾಟ್ಸ್​​​​ಆ್ಯಪ್​​ನಲ್ಲಿ ತೆಗೆದ ಫೋಟೋಗಳು ಮತ್ತು ರೆಕಾರ್ಡ್ ಮಾಡಿದ ವಿಡಿಯೋಗಳಿಗೆ 30 ಫಿಲ್ಟರ್‌ಗಳು, ಬ್ಯಾಕ್​ಗೌಂಡ್ಸ್​ ಮತ್ತು ಎಫೆಕ್ಟ್​ಗಳನ್ನು ಡೈರೆಕ್ಟ್​ ಆಗಿಯೇ ಬಳಸಬಹುದು.

ಸೆಲ್ಫಿ ಸ್ಟಿಕ್ಕರ್‌ಗಳು: ಯಾವುದೇ ಸೆಲ್ಫಿಯನ್ನು ಕಸ್ಟಮ್ ಸ್ಟಿಕ್ಕರ್ ಆಗಿ ಪರಿವರ್ತಿಸುವ ಸೌಲಭ್ಯವನ್ನು ವಾಟ್ಸ್​​ಆ್ಯಪ್​ ಈಗ ನೀಡುತ್ತದೆ. ಮೊದಲು ನೀವು ಅಪ್ಲಿಕೇಶನ್‌ನಲ್ಲಿರುವ ಕ್ಯಾಮೆರಾ ಬಳಸಬೇಕಾಗುತ್ತದೆ. ಬಳಕೆದಾರರು ಸ್ಟಿಕ್ಕರ್ಸ್ ಟ್ಯಾಬ್‌ಗೆ ಹೋಗಿ ಕ್ರಿಯೇಟ್ ಸ್ಟಿಕ್ಕರ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ನಂತರ ವಾಟ್ಸ್​​​​​ಆ್ಯಪ್​ ಕ್ಯಾಮೆರಾ ಓಪನ್​ ಆಗುತ್ತದೆ. ಆಗ ಬಳಕೆದಾರರು ಸೆಲ್ಫಿ ತೆಗೆದುಕೊಂಡು ಅದನ್ನು ಸ್ಟಿಕ್ಕರ್ ಆಗಿ ಪರಿವರ್ತಿಸಲು ಅನುಮತಿಸುತ್ತದೆ. ಈ ವೈಶಿಷ್ಟ್ಯವು ಈಗಾಗಲೇ ಆಂಡ್ರಾಯ್ಡ್‌ನಲ್ಲಿ ಲಭ್ಯವಿದೆ. ಇದು ಶೀಘ್ರದಲ್ಲೇ iOS ನಲ್ಲೂ ಲಭ್ಯವಾಗಲಿದೆ.

ಸ್ಟಿಕ್ಕರ್ ಪ್ಯಾಕ್‌ಗಳನ್ನು ಹಂಚಿಕೊಳ್ಳುವುದು: ವಾಟ್ಸ್​​​​ಆ್ಯಪ್​ ಸ್ಟಿಕ್ಕರ್ ಪ್ಯಾಕ್‌ಗಳನ್ನು ಹಂಚಿಕೊಳ್ಳುವುದನ್ನು ಸುಲಭಗೊಳಿಸುತ್ತಿದೆ. ಈಗ ವಾಟ್ಸ್​​​​ಆ್ಯಪ್​​ ​ಬಳಕೆದಾರರು ತಮ್ಮ ಚಾಟ್‌ನಿಂದ ನೇರವಾಗಿ ತಮ್ಮ ಸ್ನೇಹಿತರಿಗೆ ಅವುಗಳನ್ನು ಕಳುಹಿಸಬಹುದಾಗಿದೆ.

ಕ್ವಿಕ್​ ರಿಯಾಕ್ಷನ್​: ವಾಟ್ಸ್​​ಆ್ಯಪ್​ ​ ಸಂದೇಶಗಳಿಗೆ ರಿಯಾಕ್ಷನ್ಸ್​ ನೀಡುವುದು ಸಹ ಸುಲಭಗೊಳಿಸಿದೆ. ಬಳಕೆದಾರರು ತಾವು ಸ್ವೀಕರಿಸುವ ಸಂದೇಶವನ್ನು ಎರಡು ಬಾರಿ ಟ್ಯಾಪ್ ಮಾಡುವ ಮೂಲಕ ತಮ್ಮ ರಿಯಾಕ್ಷನ್ಸ್​ ಕಳುಹಿಸಬಹುದು. ಅವರು ಹೆಚ್ಚು ಬಳಸಿದ ರಿಯಾಕ್ಷನ್ಸ್​ ಸಹ ನೀವು ತ್ವರಿತವಾಗಿ ಸ್ಕ್ರೋಲ್ ಮಾಡಬಹುದು.

ಇವುಗಳ ಜೊತೆಗೆ, ಈ ವರ್ಷ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸುವುದಾಗಿ ವಾಟ್ಸ್​​ಆ್ಯಪ್​ ಹೇಳಿದೆ. ಡಿಸೆಂಬರ್ 2024 ರಲ್ಲಿ ವಾಟ್ಸ್​​ಆ್ಯಪ್​ ​ ತನ್ನ ಐಫೋನ್​, ಆ್ಯಂಡ್ರಾಯ್ಡ್​ ಮತ್ತು ವೆಬ್ ಆಪ್​ಗಳಲ್ಲಿ ಕರೆ ಮಾಡುವಿಕೆ ಸುಧಾರಿಸಿತು. ಇವುಗಳಲ್ಲಿ ವಿಡಿಯೋ ಕರೆಗಳಿಗೆ ಹೊಸ ಎಫೆಕ್ಟ್​ಗಳು, ಕರೆಗಳನ್ನು ಮಾಡಲು ಹೊಸ ಮಾರ್ಗಗಳು, ಗ್ರೂಪ್​ ಕಾಲ್ಸ್​ನಲ್ಲಿ ಆಯ್ದ ಜನರಿಗೆ ಮಾತ್ರ ನೋಟಿಫೀಕೆಶನ್​ಗಳು ಮತ್ತು ಉತ್ತಮ ವಿಡಿಯೋ ಕರೆ ಗುಣಮಟ್ಟ ಸೇರಿವೆ.

ಓದಿ: ಇಸ್ರೋದಿಂದ ಮತ್ತೊಂದು ಮೈಲಿಗಲ್ಲು: ಅಂತರಿಕ್ಷದಲ್ಲಿ ಉಪಗ್ರಹಗಳ ಆಲಿಂಗನ ಯಶಸ್ವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.