ETV Bharat / health

ಕಬ್ಬಿನ ಜ್ಯೂಸ್​ನಿಂದ ಮೊಡವೆ & ಕಲೆಗಳು ಹೋಗೋದರ ಜೊತೆಗೆ ಚರ್ಮವೂ ಕಾಂತಿಯುತವಾಗುತ್ತೆ: ತಜ್ಞರ ಸಲಹೆ - SUGAR CANE JUICE BENEFITS FOR SKIN

Sugar Cane Juice Benefits for Skin: ಕಬ್ಬಿನ ಜ್ಯೂಸ್​ನಿಂದ ಚರ್ಮ ಹಾಗೂ ಕೂದಲಿನ ಆರೋಗ್ಯ ಕಾಪಾಡಲು ಸಾಧ್ಯವಿದೆ. ನಿಯಮಿತವಾಗಿ ಕಬ್ಬಿನ ಜ್ಯೂಸ್ ಸೇವಿಸಿದರೆ ಮುಖ ಹೊಳೆಯುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

SUGARCANE JUICE BENEFITS FOR SKIN  SUGARCANE JUICE USES FOR SKIN  SUGARCANE JUICE USES FOR FACE  SUGARCANE JUICE BENEFITS FOR HAIR
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Jan 15, 2025, 12:05 PM IST

Sugar Cane Juice Benefits for Skin: ಸುವಾಸನೆಯ ಜೊತೆಗೆ ಹಲವು ಪೋಷಕಾಂಶಗಳಿಂದ ತುಂಬಿರುವ ಕಬ್ಬಿನ ಜ್ಯೂಸ್​ ಸೇವನೆಯಿಂದ ಅನೇಕ ಆರೋಗ್ಯದ ಪ್ರಯೋಜನಗಳನ್ನು ದೊರೆಯುತ್ತವೆ. ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್​ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಕಬ್ಬಿನ ಜ್ಯೂಸ್ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯ ಹಾಗೂ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಕಬ್ಬಿನ ಜ್ಯೂಸ್​ನಿಂದ ಲಭಿಸುವ ವಿವಿಧ ಲಾಭಗಳು:

  • ಚರ್ಮವನ್ನು ಕಾಂತಿಯುತವಾಗಿಸುವಲ್ಲಿ ಕಬ್ಬಿನ ರಸವು ತುಂಬಾ ಉತ್ತಮವಾಗಿದೆ. ಇದಕ್ಕಾಗಿ ಸ್ವಲ್ಪ ಮುಲ್ತಾನಿ ಮಿಟ್ಟಿಯನ್ನು ಕಬ್ಬಿನ ರಸದೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಚರ್ಮದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ. ಈ ಪೇಸ್ಟ್​ನಲ್ಲಿರುವ ಸಂಯುಕ್ತಗಳು ಚರ್ಮದ ಕೋಶಗಳನ್ನು ಪುನರ್​ ಯೌವನಗೊಳಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
  • ಕಬ್ಬಿನ ರಸದೊಂದಿಗೆ ಸ್ವಲ್ಪ ಜೇನುತುಪ್ಪ ಮಿಕ್ಸ್​ ಮಾಡಬೇಕು. ಈ ಮಿಶ್ರಣದಿಂದ ಚರ್ಮದ ಮೇಲೆ ಕಾಲು ಗಂಟೆ ಮಸಾಜ್ ಮಾಡಬೇಕು. ಇದನ್ನು ಇಪ್ಪತ್ತು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತೊಳೆಯಬೇಕಾಗುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮುಖದ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ತ್ವಚೆಯು ಮೃದುವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
  • ಕಾಫಿ ಪುಡಿಗೆ ಸ್ವಲ್ಪ ಕಬ್ಬಿನ ರಸವನ್ನು ಮಿಶ್ರಣ ಮಾಡಬೇಕು. ಈ ಪೇಸ್ಟ್​ನ್ನು ಸ್ಕ್ರಬ್ ಆಗಿ ಬಳಸುವುದರಿಂದ ಚರ್ಮವು ಕಾಂತಿಯುತವಾಗುತ್ತದೆ.
  • ಕಬ್ಬಿನ ರಸ, ನಿಂಬೆ ರಸ, ದ್ರಾಕ್ಷಿ ರಸ, ಸೇಬಿನ ರಸ, ತೆಂಗಿನ ಹಾಲು ಇವೆಲ್ಲವನ್ನೂ ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ಚರ್ಮದಲ್ಲಿನ ಮೊಡವೆಗಳು, ಕಲೆಗಳು ನಿವಾರಣೆಯಾಗಿ ಚರ್ಮವು ಫಳ ಫಳ ಹೊಳೆಯುತ್ತದೆ.
  • ಚರ್ಮ ಕಾಂತಿಯುತವಾಗಿಸಲು ಕಬ್ಬಿನ ರಸದಿಂದ ತಯಾರಿಸಿದ ಐಸ್ ಕ್ಯೂಬ್‌ಗಳನ್ನು ಬಳಸುವುದು ಸಾಮಾನ್ಯ ಐಸ್ ಕ್ಯೂಬ್‌ಗಳಿಗಿಂತ ಎರಡು ಪಟ್ಟು ಪರಿಣಾಮಕಾರಿ ಕೆಲಸ ಮಾಡುತ್ತದೆ.
  • 'ಚರ್ಮದ ಶುಷ್ಕ ಅಥವಾ ನಿರ್ಜಲೀಕರಣ ಹಾಗೂ ಸ್ಥಿತಿಸ್ಥಾಪಕತ್ವಕ್ಕೆ ನೈಸರ್ಗಿಕ ಪರಿಹಾರವಾಗಿ ಕಬ್ಬಿನ ರಸ' (Sugarcane juice as a natural remedy for skin hydration and elasticity) ಎಂಬ ವಿಷಯದ ಕುರಿತು ನಡೆದ ಅಧ್ಯಯನದಲ್ಲಿ ಇದು ಸ್ಪಷ್ಟಪಡಿಸಲಾಗಿದೆ. 2019ರಲ್ಲಿ ಈ ಸಂಶೋಧನಾ ವರದಿಯು ಜರ್ನಲ್ ಆಫ್ ಕಾಸ್ಮೆಟಿಕ್ಸ್, ಡರ್ಮಟೊಲಾಜಿಕಲ್ ಸೈನ್ಸಸ್ ಮತ್ತು ಅಪ್ಲಿಕೇಶನ್ಸ್‌ನಲ್ಲಿ (Journal of Cosmetics, Dermatological Sciences and Applications) ಪ್ರಕಟಿಸಲಾಗಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
  • ಕಬ್ಬಿನ ರಸದೊಂದಿಗೆ ಪಪ್ಪಾಯಿ ತಿರುಳನ್ನು ಬೆರೆಸಿ ಹಚ್ಚಿಕೊಳ್ಳುವುದರಿಂದ ತ್ವಚೆಯು ಬಿಗಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
  • 2 ಟೀಸ್ಪೂನ್​ ತುಪ್ಪವನ್ನು 4 ಟೀಸ್ಪೂನ್​ ಕಬ್ಬಿನ ರಸದೊಂದಿಗೆ ಸೇರಿಸಿ ಚರ್ಮಕ್ಕೆ ಮಸಾಜ್ ಮಾಡಿಕೊಂಡು ನಂತರ, ಸೂರ್ಯನ ಬೆಳಕಿಗೆ ಒಡ್ಡಿಕೊಂಡದರೆ, ಕಂದು ಬಣ್ಣಕ್ಕೆ ತಿರುಗಿದ ಚರ್ಮವು ಹೊಸ ಹೊಳಪನ್ನು ಪಡೆಯಲು ಸಾಧ್ಯವಿದೆ.
  • ಒಂದು ಲೀಟರ್ ನೀರಿಗೆ ಒಂದು ಹಿಡಿ ಪುದೀನ ಎಲೆಗಳು ಹಾಗೂ ಕಾಲು ಲೀಟರ್ ಕಬ್ಬಿನ ರಸವನ್ನು ಸೇರಿಸಿ ಕುದಿಸಿಬೇಕಾಗುತ್ತದೆ. ಈ ಹಬೆಯನ್ನು ಉಸಿರಾಡುವುದರಿಂದ ತ್ವಚೆಯು ಸ್ವಚ್ಛವಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
  • ಇದರ ಜೊತೆಗೆ ಯಾವುದೇ ಪದಾರ್ಥಗಳನ್ನು ಸೇರಿಸದೆ ಮಲಗುವ ಮುನ್ನ ಪ್ರತಿದಿನ ರಾತ್ರಿ ಚರ್ಮಕ್ಕೆ ಶುದ್ಧ ಕಬ್ಬಿನ ರಸವನ್ನು ಹಚ್ಚುವುದರಿಂದ ಚರ್ಮವು ಆರೋಗ್ಯಕರ ಹಾಗೂ ಮೃದುವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
  • ಕಬ್ಬಿನ ರಸವು ಚರ್ಮಕ್ಕೆ ಮಾತ್ರವಲ್ಲದೆ ಕೂದಲಿನ ರಕ್ಷಣೆಗೂ ತುಂಬಾ ಉಪಯುಕ್ತವಾಗಿದೆ.
  • ಕಬ್ಬಿನ ರಸವನ್ನು ಕೂದಲಿಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ತೊಳೆದರೆ, ನಿಮ್ಮ ಒಣಗಿದ ಕೂದಲು ಮತ್ತೆ ರೇಷ್ಮೆಯಂತಹ ಹೊಳಪನ್ನು ಪಡೆಯುತ್ತದೆ. ಕಬ್ಬಿನ ರಸವನ್ನು ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿ ಬಳಕೆ ಮಾಡಬಹುದು ಎಂದು ತಜ್ಞರು ವಿವರಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು: https://pmc.ncbi.nlm.nih.gov/articles/PMC10778757/

ಓದುಗರಿಗೆ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.