ETV Bharat / lifestyle

ಗರಿಗರಿಯಾದ 'ಚುರುಮುರಿ ವಡೆ' ನಿಮಗೆ ಗೊತ್ತೇ? ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿ; ರುಚಿಯು ಸೂಪರ್! - HOW TO MAKE PUFFED RICE VADA

How To Make Puffed Rice Vada: ನೀವು ಯಾವಾಗಲಾದರೂ ಚುರುಮುರಿ ವಡೆ ರೆಸಿಪಿ ಬಗ್ಗೆ ಕೇಳಿದ್ದೀರಾ? ಗೊತ್ತಿಲ್ಲದಿದ್ದರೆ, 'ಚುರುಮುರಿ ವಡೆ' ಮಾಡುವುದು ಹೇಗೆ ಎಂಬುದನ್ನು ಕಲಿಯೋಣ ಬನ್ನಿ.

HOW TO MAKE PUFFED RICE VADA  CHURUMURI VADA MAKING PROCESS  PUFFED RICE HEALTH BENEFITS
ಚುರುಮುರಿ ವಡೆ (ETV Bharat)
author img

By ETV Bharat Lifestyle Team

Published : Jan 28, 2025, 12:32 PM IST

How To Make Puffed Rice Vada: ಹಲವು ಜನರಿಗೆ ವಡೆ ಅಂದ್ರೆ ತುಂಬಾ ಇಷ್ಟ ಸೇವಿಸುತ್ತಾರೆ. ವಡೆಗಳನ್ನು ಮನೆಯಲ್ಲಿ ಸಿದ್ಧಪಡಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಉದ್ದಿನ ಬೇಳೆಯನ್ನು ನೆನೆಸಿ ರುಬ್ಬಿಕೊಳ್ಳಬೇಕಾಗುತ್ತದೆ. ಬಳಿಕ ವಡೆಗಳನ್ನು ತಯಾರಿಸಬೇಕಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಬುತೇಕರು ವಡೆಗಳನ್ನು ಮಾಡುವುದು ತುಂಬಾ ಕಡಿಮೆ. ತಿನ್ನಬೇಕೆನಿಸಿದಾಗ ಅವರು ಹೋಟೆಲ್‌ಗೆ ತೆರಳುತ್ತಾರೆ.

ಇಲ್ಲವೇ ಆರ್ಡರ್ ಮಾಡಿ ಮನೆಗೆ ತರಿಸಿಕೊಂಡು ಸೇವಿಸುತ್ತಾರೆ. ನಿಮಗೆ ವಡೆ ತಿನ್ನಬೇಕು ಅನಿಸಿದರೆ, ಗಂಟೆಗಟ್ಟಲೆ ಕಾಯದೆ ಕೆಲವೇ ನಿಮಿಷಗಳಲ್ಲಿ ಸೂಪರ್ ಟೇಸ್ಟಿ ಹಾಗೂ ಗರಿಗರಿಯಾದ ವಡೆಗಳನ್ನು ಸಿದ್ಧಪಡಿಸಬಹುದು. ಇವುಗಳ ರುಚಿ ಸಾಮಾನ್ಯ ವಡೆಗಳಿಗಿಂತಲೂ ಚೆನ್ನಾಗಿರುತ್ತವೆ. ಚುರುಮುರಿ ವಡೆಗೆ ಸಿದ್ಧಪಡಿಸಲು ಬೇಕಾದ ಸಾಮಗ್ರಿಗಳೇನು ಹಾಗೂ ತಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.

ಚುರುಮುರಿ ವಡೆಗೆ ಅಗತ್ಯವಿರುವ ಪದಾರ್ಥಗಳು:

  • ಚುರುಮುರಿ - ಒಂದೂವರೆ ಕಪ್
  • ಈರುಳ್ಳಿ - ಒಂದು
  • ಹಸಿಮೆಣಸಿನಕಾಯಿ - ಎರಡು
  • ಕರಿಬೇವು - ಎರಡು ಎಲೆಗಳು
  • ಉಪ್ಪು - ರುಚಿಗೆ ತಕ್ಕಷ್ಟು
  • ಖಾರದ ಪುಡಿ - ಅರ್ಧ ಟೀಸ್ಪೂನ್​
  • ಧನಿಯಾ ಪುಡಿ - ಕಾಲು ಟೀಸ್ಪೂನ್​
  • ಗರಂ ಮಸಾಲಾ ಪುಡಿ - ಕಾಲು ಟೀಸ್ಪೂನ್​
  • ಜೀರಿಗೆ ಪುಡಿ - ಕಾಲು ಟೀಸ್ಪೂನ್​
  • ಶುಂಠಿ ಪೇಸ್ಟ್ - ಅರ್ಧ ಟೀಸ್ಪೂನ್​
  • ಅಕ್ಕಿ ಹಿಟ್ಟು - ಎರಡು ಟೀಸ್ಪೂನ್
  • ಮೈದಾ - ಎರಡು ಟೀಸ್ಪೂನ್​

ಚುರುಮುರಿ ವಡೆ ತಯಾರಿಸುವ ವಿಧಾನ:

  • ಚುರುಮುರಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ನೀರು ಸುರಿಯಬೇಕಾಗುತ್ತದೆ, 5 ನಿಮಿಷಗಳವರೆಗೆ ಪಕ್ಕಕ್ಕೆ ಇಡಿ.
  • ಇದೀಗ ಈರುಳ್ಳಿ, ಕರಿಬೇವು ಹಾಗೂ ಹಸಿಮೆಣಸಿನಕಾಯಿಗಳನ್ನು ಸಣ್ಣಗೆ ಕಟ್​ ಮಾಡಿ ಪಕ್ಕಕ್ಕೆ ಇಡಿ.
  • ಚುರುಮುರಿಗಳನ್ನು ನೆನೆಸಿದ ಬಳಿಕ ನೀರನ್ನು ಹಿಂಡಿ ಒಂದು ಬಟ್ಟಲಿನಲ್ಲಿ ಇಡಬೇಕು. ಇಡೀ ಚುರುಮುರಿ ಬಟ್ಟಲು ತೆಗೆದುಕೊಳ್ಳಬೇಕು.
  • ಈ ಬಟ್ಟಲಿನೊಳಗೆ ಕಟ್​ ಮಾಡಿದ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಸೇರಿಸಬೇಕು. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ, ಗರಂ ಮಸಾಲಾ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅಕ್ಕಿ ಹಿಟ್ಟು ಹಾಗೂ ಮೈದಾ ಸೇರಿಸಬೇಕಾಗುತ್ತದೆ. ಮೈದಾ ಇಷ್ಟವಾಗದಿದ್ದರೆ ಕಡಲೆ ಹಿಟ್ಟನ್ನು ಬಳಕೆ ಮಾಡಬಹುದು.
  • ಬಳಿಕ ಚೆನ್ನಾಗಿ ಮಿಶ್ರಣ ಮಾಡುವುದರಿಂದ ಎಲ್ಲಾ ಮಸಾಲೆಗಳು ಚುರುಮುರಿಗೆ ಅಂಟಿಕೊಳ್ಳುತ್ತವೆ.
  • ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸಿಂಪಡಿಸಿ ಹಾಗೂ ಚುರುಮುರಿಗಳನ್ನು ಪೇಸ್ಟ್ ಆಗುವವರೆಗೆ ಮಿಶ್ರಣ ಮಾಡಿದರೆ ಇನ್ನು ಉತ್ತಮ.
  • ಮಿಶ್ರಣ ಮಾಡಿದ ಬಳಿಕ ಸ್ವಲ್ಪ ಪ್ರಮಾಣದ ಚುರುಮುರಿ ಮಿಶ್ರಣವನ್ನು ತೆಗೆದುಕೊಂಡು ನಿಮ್ಮ ಅಂಗೈಯಲ್ಲಿ ಇರಿಸಿ ವಡೆಗಳನ್ನು ರೆಡಿ ಮಾಡಿ ತಟ್ಟೆಯಲ್ಲಿ ಇಟ್ಟುಕೊಳ್ಳಿ. ಸಂಪೂರ್ಣ ಮಿಶ್ರಣದಿಂದ ಈ ರೀತಿಯಾಗಿ ವಡೆಗಳನ್ನು ಸಿದ್ಧಪಡಿಸಿ ಇಡಿ.
  • ಸ್ಟೌವ್​ ಆನ್ ಮಾಡಿ ಅದರ ಮೇಲೆ ಕಡಾಯಿ ಇಡಿ. ಕರಿಯಲು ಬೇಕಾಗುವಷ್ಟು ಎಣ್ಣೆ ಸುರಿಯಿರಿ.
  • ಎಣ್ಣೆ ಬಿಸಿಯಾದ ಬಳಿಕ, ತಯಾರಾದ ವಡೆಗಳನ್ನು ಎಣ್ಣೆಯೊಳಗೆ ಬಿಡಿ, ಸ್ಟೌವ್​ನ್ನು ಮಧ್ಯಮ ಉರಿಯಲ್ಲಿ ಇಡಿ, ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಈ ರೀತಿ ತಯಾರಿಸಿದ ಎಲ್ಲಾ ವಡೆಗಳನ್ನು ಎಣ್ಣೆಯಲ್ಲಿ ಫ್ರೈ ಮಾಡಿ.
  • ಇದೀಗ ತುಂಬಾ ರುಚಿಕರವಾದ ಚುರುಮುರಿ ವಡೆಗಳು ಸಿದ್ಧವಾಗಿವೆ. ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದಾದ ಈ ವಡೆಗಳನ್ನು ಚಟ್ನಿಯೊಂದಿಗೆ ಇಲ್ಲವೇ ಹಾಗೆ ಸೇವಿಸಿದರೂ ನಿಮಗೆ ಇಷ್ಟವಾಗುತ್ತದೆ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.